37.2 C
Bellary
Thursday, May 16, 2024

Localpin

spot_img

ನೀರು ಅಮೂಲ್ಯವಾಗಿದ್ದು ಮಿತವಾಗಿ ಬಳಸಿ

ಬೆಳಗಾಯಿತು ವಾರ್ತೆ | www.belagayithu.in
ಮರಿಯಮ್ಮನಹಳ್ಳಿ:ನೀರು ಅಮೂಲ್ಯವಾಗಿದ್ದು ಮಿತವಾಗಿ ಬಳಸಿ ಮುಂದಿನ‌ ಪೀಳಿಗೆಗೆ ಉಳಿಸುವ ಜವಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಖಾಜಾ ಮೈನುದ್ದೀನ್ ಹೇಳಿದರು.
ಅವರು ಪಟ್ಟಣದ ಬಸ್ ನಿಲ್ದಾಣದಲ್ಲಿ ಎಸ್.ಎಲ್.ಆರ್ ಮೆಟಾಲಿಕ್ಸ್ ಮತ್ತು ದೇವಲಾಪುರದ ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕುಡಿಯುವ ನೀರಿನ ಅರವಟ್ಟಿಗೆಗೆ ಚಾಲನೆ ನೀಡಿ ಮಾತನಾಡಿದರು,
ನೀರು ಅಮೂಲ್ಯವಾಗಿದ್ದು ವ್ಯರ್ಥ ಮಾಡದೇ ಮಿತವಾಗಿ ಬಳಕೆ ಮಾಡಬೇಕು,ಸಾರ್ವಜನಿಕರು,ಪ್ರಯಾಣಿಕರು ಸದುಪಯೋಗ ಪಡೆಯಲು ತಿಳಿಸಿದರು.
ಎಸ್.ಎಲ್ ಆರ್ ಕಂಪನಿಯ ವೈದ್ಯ ಡಾ.ಸೋಮೇಶ್ವರ್ ಮಾತನಾಡಿ, ಭೂಮಿ ಮೇಲೆ ವಾಸಿಸುವ ಪ್ರತಿಯೊಂದು ಪ್ರಾಣಿಗಳಿಗೆ ನೀರು ಅವಶ್ಯ ಜೀವ ಜಲ ಅಮೂಲ್ಯವಾಗಿದೆ.ಅಂತರ್ಜಲದ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಇದಕ್ಕೆಲ್ಲ ಕಾರಣ ನಮ್ಮ ಆಧುನಿಕ ಜೀವನ ಶೈಲಿಯ ಪ್ರಭಾವ.ತಾಪಮಾನ ಹೆಚ್ಚಾಗಿದ್ದು ಪ್ರತಿಯೊಬ್ಬರು ಹೆಚ್ಚೆಚ್ಚು ನೀರು ಸೇವಿಸಬೇಕು,ದೇಹವು ಈಗ ಹೆಚ್ಚು ನೀರುಬಯಸುತ್ತದೆ. ದೇಹವು ನಿರ್ಜಲಿಕರಣವಾಗದಂತೆ ನೀರನ್ನು ಸೇವಿಸಲು ಸಲಹೆಮಾಡಿದರು.
ಎಸ್.ಎಲ್ ಆರ್ ಕಂಪನಿಯ ಸುರಕ್ಷಾ ವಿಭಾಗದ ಮುಖ್ಯಸ್ಥ ಅರಿಹಂತ್ ನಿಡುಗುಂದಿ ಮಾತನಾಡಿ,ಕುಡಿಯುವ ನೀರಿನ ಸಮಸ್ಯೆ ಬಿಸಿಲಿನ ತಾಪಮಾನ ಹೆಚ್ಚಿದ್ದಾಗ ನಮಗೆ ಸಮಸ್ಯೆಯ ಅರಿವಾಗುತ್ತದೆ ಇರೋ ನೀರನ್ನ ಮಿತವಾಗಿ ಬಳಸಿ ಮುಂದಿನ ಪೀಳಿಗೆಗೆ ಉಳಿಸುವ ಕರ್ತವ್ಯ ಪ್ರತಿಯೊಬ್ಬರದ್ದು ಇದೆ, ಹಣ ಎಷ್ಟು ಬೇಕಾದರೂ ಸಂಪಾದನೆ ಮಾಡಬಹುದು ನೈಸರ್ಗಿಕ ನೀರನ್ನ ಸಂಪಾದನೆ ಮಾಡುವುದಕ್ಕೆ ಸಾಧ್ಯವಿಲ್ಲ ಹಾಗಾಗಿ ನೀರನ್ನು ಮಿತವಾಗಿ ಬಳಸಿ ಜತೆಗೆ ಇಂತಹ ಸಾಮಾಜಿಕ ಕಾರ್ಯಗಳಿಗೆ ನಮ್ಮ ಸಂಸ್ಥೆ ಯಾವಾಗಲೂ ಕೈ ಜೋಡಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಪಟ್ಟಣದ ಪಿ.ಎಸ್.ಐ.ಮೌನೇಶರಾಥೋಡ್,ಪ.ಪಂ.ಎಂಜಿನಿಯರ್ ಹುಸೇನ್ ಭಾಷ,ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ ಅಧ್ಯಕ್ಷ ಭೀಮರಾಜ,ಕಾರ್ಯದರ್ಶಿ ಅಶೋಕ,ಪ.ಪಂ ಸದಸ್ಯವಸಂತ, ಮರಡಿಸುರೇಶ್, ಪರಶುರಾಮ, ಡಣಾಯಕನಕೆರೆ ಗ್ರಾ.ಪಂ ಸದಸ್ಯ ಗುಂಡಾಸ್ವಾಮಿ,ಅಯ್ಯನಹಳ್ಳಿ ಗ್ರಾ.ಪಂ ಸದಸ್ಯ ಈಡಿಗರ ಮಂಜುನಾಥ,ಮುಖಂಡ ರುದ್ರನಾಯ್ಕ್, ಎಸ್.ಎಲ್.ಆರ್ ಕಂಪನಿಯ ಸಿಎಸ್.ಆರ್ ವಿಭಾಗದ ಸಿಬ್ಬಂದಿಗಳಾದ ಮಲ್ಲಿಕಾರ್ಜು, ಮಾರುತಿ ಸೇರಿದಂತೆ ಇತರರಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles