ಅರ್ಜುನುಂಡಿ ಕಥ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ ಸೋಮಶೇಖ ರೆಡ್ಡಿ

0
463

ಬಳ್ಳಾರಿ: ಬಳ್ಳಾರಿಯ ಯುವ ಪ್ರತಿಭೆಗಳಿಂದ ಕನ್ನಡ ಮತ್ತು ತೆಲಗು ಭಾಷೆಯಲ್ಲಿ ಚಿತ್ರಕರಿಸಲಾಗುತ್ತಿರುವ ಅರ್ಜುನುಂಡಿ ಕಥ ಚಲನಚಿತ್ರಕ್ಕೆ ಮಾಜಿ ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರು ಆ್ಯಕ್ಷನ್ ಕಟ್ ಹೇಳಿದರು.

ಈ ಚಿತ್ರತಂಡದಿಂದ ನಗರದ ಸಿರಗುಪ್ಪ ರಸ್ತೆಯಲ್ಲಿರುವ ಶ್ರೀ ಕೋದಂಡ ರಾಮ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಪೂಜೆ ಸಲ್ಲಿಸಿ ಚಿತ್ರತಂಡಕ್ಕೆ ಶುಭಹಾರೈಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಅವರು, ಇಂದಿನ ದಿನಗಳಲ್ಲಿ ಚಿತ್ರರಂಗಕ್ಕೆ ನಮ್ಮ ಬಳ್ಳಾರಿ ಯುವಕರು ಹೆಚ್ಚಿನ ಆಧ್ಯತೆ ನೀಡುತ್ತಿದ್ದು, ಉತ್ತಮ ಆಶಕ್ತಿ ತೋರಿಸುತ್ತಿದ್ದಾರೆ. ನಿಮ್ಮ ಭವಿಷ್ಯ ಉಜ್ವಲವಾಗಲಿ ಮತ್ತು ಈ ಚಲನಚಿತ್ರ ಉತ್ತಮವಾಗಿ ಮೂಡಿ ಬರಲಿ ಎಂದು ಅವರು ಹಾರೈಸಿದರು.

ಈ ಚಿತ್ರಕ್ಕೆ ಶ್ರೀ ಶ್ರೀನಿವಾಸ್ ಸಿನಿಮಾ ಪ್ರೋಡೆಕ್ಷನ್ ಆಗಿದ್ದು, ವ್ಮಠ ಶ್ರೀನಿವಾಸ್ ಎಂಬುವವರು ಪ್ರೋಡಿಜರ್ ಆಗಿದ್ದಾರೆ.
ಈ ಚಿತ್ರದ ನಿರ್ದೇಶಕ ಮತ್ತು ನಾಯಕನಾಗಿ ಅಭಿರಾಮ್ ಚೌದರಿ ಅವರು ತೆರೆಮೇಲೆ ಕಾಣಿಸಿಕೊಳ್ಳಿದ್ದು, ಇವರಿಗೆ ನಾಯಕಿಯಾಗಿ ಶ್ರವಸ್ಥಿ ಅವರು ನಟಿಸಲಿದ್ದಾರೆ.
ಒಟ್ಟು 55ಲಕ್ಷ ವೆಚ್ಚದಲ್ಲಿ ಈ ಚಿತ್ರವನ್ನು ಚಿತ್ರಿಕರಿಸಲಾಗಿತ್ತಿದ್ದು, ಬಳ್ಳಾರಿ ಸುತ್ತಮುತ್ತ ಶ್ರಟಿಂಗ್ ನಡೆಯಲಿದೆ ಎಂದು ಪ್ರೋಡಿಜರ್ ಶ್ರೀನಿವಾಸ್ ಅವರು ಹೇಳಿದ್ದಾರೆ.


ಈ ಸಂದರ್ಭದಲ್ಲಿ ಇಬ್ರಾಹಿಂ ಬಾಬು, ಮೋತ್ಕರ್ ಶ್ರೀನಿವಾಸ್, ಭೀಮಲಿಂಗಣ್ಣ, ಮಣಿಕಂಠ, ಅವಿನಾಸ್ ಗೋಗಿನೇನಿ, ಹೇಮಂತ್, ತೇಜ, ಗೌತಮ್ ಸೇರಿದಂತೆ ಇತರರು ಹಾಜರಿದ್ದರು.

Previous articleಬಳ್ಳಾರಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ
Next articleಅರ್ಜುನುಡಿ ಕಥ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ ಸೋಮಶೇಖರ್ ರೆಡ್ಡಿ

LEAVE A REPLY

Please enter your comment!
Please enter your name here