ಬೆಳಗಾಯಿತು ವಾರ್ತೆ
ಮರಿಯಮ್ಮನಹಳ್ಳಿ:ಮರಿಯಮ್ಮನಹಳ್ಳಿ ತಾಂಡದ ಟಿ.ವೆಂಕಟೇಶ ಹಾಗೂ ವಿ.ಸುನೀತ ದಂಪತಿಯ ಮಗಳಾದ ವಿ.ಸ್ನೇಹ ಪಟ್ಟಣದ ಪ್ರಾರ್ಥನಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 611 ಅಂಕಗಳನ್ನು ಗಳಿಸಿ ಶಾಲೆಗೆ ಹಾಗೂ ಹೊಸಪೇಟೆ ತಾಲೂಕಿಗೆ ಪ್ರಥಮ ಸ್ಥಾನವನ್ನು ಗಳಿಸಿದ್ದು,ಬುಧವಾರ ಹ.ಬೊ.ಹಳ್ಳಿ ಶಾಸಕ ಕೆ.ನೇಮರಾಜನಾಯ್ಕ್ ರವರು ಬಾಲಕಿ ಮನೆಗೆತೆರಳಿ ಸನ್ಮಾನಿಸಿದರು.
ಶಾಸಕರು ವಿದ್ಯಾರ್ಥಿನಿ ವಿ.ಸ್ನೇಹ ಮನೆಗೆ ಖುದ್ದುತೆರಳಿ ವೈಯಕ್ತಿಕವಾಗಿ ಪ್ರೋತ್ಸಾಹ ಧನ ವಿತರಿಸಿ ಸನ್ಮಾನಿಸಿ ಮಾತನಾಡಿದರು.ಈ ಬಾಲಕಿ ಸತತ ಪರಿಶ್ರಮದಿಂದ ಓದಿ ಶಾಲೆ ಹಾಗೂ ನಮ್ಮ ಊರಿಗೆ,ಹ.ಬೊ.ಕ್ಷೇತ್ರಕ್ಕೆ ಕೀರ್ತಿ ತಂದಿದ್ದಾರೆ.ಗ್ರಾಮೀಣಭಾಗದಲ್ಲೂ ಇಂದು ಬಡವರು,ರೈತರು,ಕೂಲಿಕಾರ್ಮಿಕರು ಮಕ್ಕಳನ್ನು ಓದಿಸುತ್ತಿದ್ದಾರೆ.ಈ ಬಾಲಕಿಯು ಮುಂದಿನ ವಿದ್ಯಾಭ್ಯಾಸದಲ್ಲಿ ಉತ್ತಮ ಅಂಕಗಳನ್ನು ಪಡೆಯಲಿ,ಉನ್ನತ ವಿಧ್ಯಾಭ್ಯಾಸದ ಪರೀಕ್ಷೆ ಪಾಸು ಮಾಡುವ ಆಶಯ ಹೊಂದಲಿ.ಇವರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು. ಮುಖಂಡರಾದ ಬದಾಮಿಮೃತ್ಯಂಜಯ,ಪ್ರಕಾಶನಾಯ್ಕ್,ಸೀತ್ಯಾನಾಯ್ಕ್,ರವೀಂದ್ರನಾಯ್ಕ್,ರವಿನಾಯ್ಕ್,ಹನುಮನಾಯ್ಕ್,ಢಾಕ್ಯಾನಾಯ್ಕ್,ಗಿರಿಯನಾಯ್ಕ್,ರಾಮನಾಯ್ಕ್,ಹೇಮ್ಲಾನಾಯ್ಕ್ ಸೇರಿದಂತೆ ಇತರರಿದ್ದರು.





