ಬೆಳಗಾಯಿತು ವಾರ್ತೆ |www.belagayithu.in
ಮರಿಯಮ್ಮನಹಳ್ಳಿ:ಪಟ್ಟಣದ ನಗರೇಶ್ವರ ದೇವಸ್ಥಾನದ ಆವರಣದ, ಶ್ರೀಲಕ್ಷ್ಮೀವೆಂಕಟೇಶ್ವರ ದೇವಸ್ಥಾನದ ಗೋಪುರ ಕಳಸ ಪ್ರತಿಷ್ಟಾಪನಾ ಕಾರ್ಯಕ್ರಮ ಇಂದಿನಿಂದ(11,12,13) ಮೂರುದಿನಗಳ ಕಾಲ ನಡೆಯಲಿದೆ ಎಂದು ಆರ್ಯವೈಶ್ಯ ಸಮಾಜದ ಅಧ್ಯಕ್ಷ ಚಿದ್ರಿಸತೀಶ್ ತಿಳಿಸಿದರು.ಗುರುವಾರ ಸಂಜೆ 6ಗಂಟೆಗೆ ಉದಕಶಾಂತಿ ನಂತರ ಮಹಾಮಂಗಳಾರತಿ, ಶುಕ್ರವಾರ ಬೆಳಿಗ್ಗೆ 8ಕ್ಕೆ ಗಣಪತಿಪುಣ್ಯಾಹವಾಚನ, ದೇವತಾಸ್ಥಾಪನೆ,ಗಣಪತಿಹೋಮ,ಮಹಾಮಂಗಳಾರತಿ, ಸಂಜೆ 6ಕ್ಕೆ ದೇವತಾಪೂಜ,ಕಲಾಹೋಮ,ನವಗ್ರಹ,ಮಹಾನಾರಾಯಣ ಅಷ್ಟಾಕರಹೋಮ,108ಕಳಸದ ನಗರಪ್ರದಕ್ಷಿಣೆ, ಸಂಜೆ 7ಕ್ಕೆ ಮಹಾಬಲಿ,ಪೂರ್ಣಾಹುತಿ,ಅಷ್ಟಾವಧಾನ,ಮಹಾಮಂಗಳಾರತಿ,ಶನಿವಾರ ಬೆಳಿಗ್ಗೆ ದೇವತಾಪೂಜ, ಹೋಮಬಲಿಹರಣ ನಂತರ ಶ್ರೀಪರಮಪೂಜ್ಯ ಗೋವಿಂದಾನಂದಾ ಸರಸ್ವತಿಮಹಾಸ್ವಾಮಿಗಳು ಹೊಸಹಂಪಿ ಇವರನ್ನು ಪೂರ್ಣಕುಂಭದೊಂದಿಗೆ ಆಹ್ವಾನಿಸುವುದು,ಬೆಳಿಗ್ಗೆ 11-25ಕ್ಕೆ 108ಶತ ಕುಂಭಗಳಿಂದ ಮಹಾಭಿಷೇಕ,ಪೂರ್ಣಾಹುತಿ,ನಂತರ ಶ್ರೀಗಳಿಂದ ಆಶೀರ್ವಚನ ಜರುಗಲಿದೆ ಎಂದು ಸದ್ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಿಳಿಸಿದರು.