ಬೆಳಗಾಯಿತು ವಾರ್ತೆ |www.belagayithu.in
ಬಳ್ಳಾರಿ, ಮೇ.13 : ರಾಜ್ಯದಲ್ಲಿನ ಬರಗಾಲಕ್ಕೆ ಕೇಂದ್ರ ಸರ್ಕಾರ ಪರಿಹಾರ ಬೇಕು ಎಂದು ಕೂಗುತ್ತಿತು ರಾಜ್ಯದಲ್ಲಿನ ಕಾಂಗ್ರೆಸ್ ಪಕ್ಷದ ಸರ್ಕಾರಕ್ಕೆ, ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ 3500 ಕೋಟಿ ರೂ ಬಿಡುಗಡೆ ಮಾಡಿದೆ. ಆದರೆ ಬಿಡುಗಡೆ ಮಾಡಿರುವ ಹಣವನ್ನು ಇಲ್ಲಿವರೆಗೆ ಹಂಚಿಕೆ ಮಾಡಿಲ್ಲ, ಕೂಡಲೇ ಸಂಕಷ್ಟದಲ್ಲಿ ಇರುವ ರೈತರ ಖಾತೆಗಳಿಗೆ ಬರ ಪರಿಹಾರದ ಹಣ ಬಿಡುಗಡೆ ಮಾಡಲು ಮಾಜಿ ಸಚಿವ ಬಿ.ಶ್ರೀರಾಮುಲು ಆಗ್ರಹಿಸಿದ್ದಾರೆ.
ಇಂದು ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತ. ಸರ್ಕಾರ ಅಪ್ರಯೋಜಕವಾಗಿದೆ. ಬಡವರ ಪಾಲಿಗಂತೂ ಈ ಸರ್ಕಾರ ನೂರಕ್ಕೆ ನೂರಷ್ಟು ಇಲ್ಲದಂತಾಗಿದೆಂದು ಆರೋಪಿಸಿದರು. ಎಲ್ಲಾ ಕಡೆ ಈಗ ಮಳೆಯಾಗಿ ಆಸ್ತಿ ಪಾಸ್ತಿ ಹಾನಿಯಾಗಿದೆ. ಮನೆಗಳು, ರೈತರ ಬೆಳೆ ಸಾಕಷ್ಟು ನಷ್ಟವಾಗಿವೆ. ಆದರೆ ಸರ್ಕಾರದಲ್ಲಿ ಇರುವ ಮಂತ್ರಿಗಳು ಒಬ್ಬರೂ ಕೂಡ ಈ ಬಗ್ಗೆ ಪರಿಶೀಲನೆಗೆ ಮುಂದಾಗುತ್ತಿಲ್ಲ. ಆ ಮಂತ್ರಿಗಳು ಎಲ್ಲಿ ಬಿದ್ದಾರೋ ಗೊತ್ತಿಲ್ಲ. ಒಬ್ಬ ಮಂತ್ರಿನೂ ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಈ ಸರ್ಕಾರ ಇದೆಯಾ ಸತ್ತಿದೆಯಾ ಎಂದು ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದರು.
ಈ ಸಂದರ್ಭದಲ್ಲಿ ಜನಾತ ಬಜಾರ್ ಅಧ್ಯಕ್ಷ ಜಿ. ನೀಲಕಂಠಪ್ಪ, ಮಾಧ್ಯಮ ವಕ್ತಾರ ಡಾ. ಬಿ,ಕೆ ಸುಂದರ್ ಇದ್ದರು.





