29.5 C
Bellary
Friday, May 17, 2024

Localpin

spot_img

ಬಳ್ಳಾರಿ:ಡಿಕೆಶಿ ಹುಟ್ಟು ಹಬ್ಬ ಆಚರಣೆ

ಬೆಳಗಾಯಿತು ವಾರ್ತೆ |www.belagayithu.in
ಬಳ್ಳಾರಿ: ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಹುಟ್ಟು ಹಬ್ಬವನ್ನು ಬಳ್ಳಾರಿ ನಗರದ ಹಲವಾರು ವಾರ್ಡ್ ಗಳಲ್ಲಿ ಕೆಕ್ ಕತ್ತರಿಸುವ ಮೂಲಕ ಆಚರಣೆ ಮಾಡಲಾಯಿತು. ಕಾಂಗ್ರೆಸ್ ಕಾರ್ಯಕರ್ತರು ನಗರದ ಗ್ರಾಮ ದೇವತೆ ಶ್ರೀ ಕನಕ ದುರ್ಗಮ್ಮ ದೇವಿಯ ದೇವಸ್ಥಾನಕ್ಕೆ ತೆರಳಿ ಡಿಕೆ ಶಿವಕುಮಾರ್ ಅವರ ಹೆಸರಲ್ಲಿ ಕುಂಕುಮಾರ್ಚನೆ ಮಾಡಿಸಲಾಯಿತು.
ನಂತರ ಕಾರ್ಯಕರ್ತರು ಸೇರಿ ದೇವಸ್ಥಾನದ ಮುಂದೆ ಕೆಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಣೆ ಮಾಡಿ ಶುಭ ಹಾರೈಸಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಕೆಪಿಸಿಸಿ ಸದಸ್ಯರಾದ ಕಲ್ಲುಕಂಭ ಪಂಪಾಪತಿ ಅವರು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಉತ್ತಮ ಆಡಳಿತಗಾರರಾಗಿದ್ದಾರೆ. ರಾಜ್ಯದ ಬಗ್ಗೆ ಕಾಳಜಿ ವಹಿಸುವ ನಾಯಕ ಮತ್ತು ಬಡವರ ಬಗ್ಗೆ ಕಾಳಜಿ ವಹಿಸುವ ನಾಯಕರಾಗಿದ್ದಾರೆ. ಮುಂದೊಂದು ದಿನ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ ಸೇವೆ ಸಲ್ಲಿಸಲಿ ಎಂಬುವುದು ನಮ್ಮೆಲ್ಲರ ಆಸೆಯಾಗಿದೆ ಎಂದರು.
ನಂತರ ಕೆಪಿಸಿಸಿ ವಕ್ತಾರ ವೆಂಕಟೇಶ ಹೆಗಡೆ ಅವರು ಮಾತನಾಡಿ, ಡಿಕೆ ಶಿವಕುಮಾರ್ ಅವರ ಸೇವೆ ಈ ರಾಜ್ಯಕ್ಕೆ ಸಿಮೀತವಾಗದೆ ಇಡೀ ದೇಶಕ್ಕೆ ಅವರ ಸೇವೆಯ ಅಗತ್ಯ ಇದೆ. ಹಾಗಾಗಿ ಅವರು ಇನ್ನೂ ಉತ್ತಮ ಸ್ಥಾನಕ್ಕೆ ಏರಿ ಬಡವರ ಸೇವೆ ಮಾಡಲಿ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಜೆ.ಎಸ್.ಆಂಜನೇಯಲು, ಮಹಾನಗರ ಪಾಲಿಕೆ ಪರಾಜಿತ ಅಭ್ಯರ್ಥಿ ವೀರೇಂದ್ರ ಕುಮಾರ್, ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾದ ಭೋಯಾಪಾಟಿ ವಿಷ್ಣು, ಎಸ್.ಸಿ ವಿಭಾಗದ ಅಧ್ಯಕ್ಷರಾದ ಎನ್.ವಿ.ಯರಕುಲ ಸ್ವಾಮಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಂಜುಳಾ, ಮಾಜಿ ಮೇಯರ್ ರಾಜೇಶ್ವರಿ ಸುಬ್ಬಾರಾಯುಡು, ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಜ್ಯೋತಿ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿಣಿ ಸಮಿತಿಯ ಸದಸ್ಯರಾದ ವೆಂಕಟಲಕ್ಷ್ಮಿ ನಾರಾಯಣ, ಡಿ.ಕೆ.ಶಿವಕುಮಾರ್ ಅಭಿಮಾನ ಬಳಗದ ಜಿಲ್ಲಾಧ್ಯಕ್ಷರಾದ ಸಂತೋಷ್ ಸ್ವಾಮಿ, ಕಾಂಗ್ರೆಸ್ ಮುಖಂಡರಾದ ಖಾಂಡ್ರ ಸತೀಶ್, ಶಕೀಲ್ ಅಹ್ಮದ್, ಆನಂದ್, ಬಾಬು, ಎರ್ರಿಸ್ವಾಮಿ ಹೆಗಡೆ, ಅನಿಲ್ ಕುಮಾರ್, ಸಿ.ಅತ್ತಾಉಲ್ಲಾ, ರಾಜ, ಪೆನ್ನಯ್ಯ, ಲಿಂಗರಾಜ್, ರಾಬಿನ್, ಪರಶುರಾಮ್, ಶ್ರೀಕಾಂತ್, ಮಲ್ಲಿಕಾರ್ಜುನ, ತಿಮ್ಮಪ್ಪ, ಜುಬೇರ್, ಸಂಜಯ್, ರಾಜ, ಶಬ್ಬೀರ್, ಮಹಿಳಾ ಮುಖಂಡರಾದ ರಿಹಾನ, ರೋಹಿಣಿ, ಮಲ್ಲಮ್ಮ, ಹಸೀನಾ ಹಾಗೂ ಕಾಂಗ್ರೆಸ್ ಪಕ್ಷದ ನೂರಾರು ಕಾರ್ಯಕರ್ತರು ಮತ್ತು ಯುವ ಕಾರ್ಯಕರ್ತರು ಹಾಜರಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles