37.3 C
Bellary
Saturday, April 6, 2024

Localpin

spot_img

ಖೇಲೊ ಇಂಡಿಯಾ ಯುನಿವರ್ಸಿಟಿ ಗೇಮ್ಸ್‍ನಲ್ಲಿ ಬಳ್ಳಾರಿ ವಿವಿಗೆ ಬೆಳ್ಳಿ ಪದಕ

ಬೆಳಗಾಯಿತು ವಾರ್ತೆ |www.belagayithu.in

ಬಳ್ಳಾರಿ: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಡಿ ಬರುವ ವೀರಶೈವ ಮಹಾವಿದ್ಯಾಲಯದ ಕುಸ್ತಿಪಟು ಆದಿತ್ಯ ಎನ್ನುವ ವಿದ್ಯಾರ್ಥಿ ನ್ಯಾಗಾಲ್ಯಾಂಡ್ ಕೊಹಿಮಾದ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಫೆ.22 ರಿಂದ 25 ರ ವರೆಗೆ ನಡೆದ ಖೇಲೊ ಇಂಡಿಯಾ ಯುನಿವರ್ಸಿಟಿ ಕ್ರೀಡಾಕೂಟ-2024 ಪುರುಷರ ಕುಸ್ತಿ (ಗ್ರೀಕೊ ರೋಮನ್ 87 ಕೆಜಿ) ಪಂದ್ಯಾವಳಿಯಲ್ಲಿ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ, ದ್ವಿತೀಯ ಸ್ಥಾನ ಪಡೆಯುವುದರ ಮೂಲಕ ಬೆಳ್ಳಿಯ ಪದಕವನ್ನು ಪಡೆದು ಕರ್ನಾಟಕ ಹಾಗೂ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕೀರ್ತಿಯನ್ನು ಹೆಚ್ಚಿಸಿರುತ್ತಾನೆ.
ಈ ಕ್ರೀಡಾಪಟುವಿನ ಅಮೊಘ ಸಾಧನೆಗೆ ಮತ್ತು ತಂಡದ ವ್ಯವಸ್ಥಾಪಕರು ಹಾಗೂ ತರಬೇತುದಾರರಾದ ಮಲ್ಲಿಕಾರ್ಜುನ ವಾಯ್.ಡಿ. ರವರಿಗೆ ವಿಶ್ವವಿದ್ಯಾಲಯದ ಆಡಳಿತ ವರ್ಗದವರು ಮಾನ್ಯ ಕುಲಪತಿಗಳು, ಕುಲಸಚಿವರು, ಕುಲಸಚಿವರು (ಮೌಲ್ಯಮಾಪನ) ಹಣಕಾಸು ಅಧಿಕಾರಿಗಳು, ಮಾನ್ಯ ಸಿಂಡಿಕೇಟ್ ಮತ್ತು ವಿದ್ಯಾ ವಿಷಯಕ ಪರಿಷತ್ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles