ಬೆಳಗಾಯಿತು ವಾರ್ತೆ
ಬಳ್ಳಾರಿ: ಭಾರತೀಯ ಚಿತ್ರರಂಗ ಕಂಡ ಅದ್ಭುತ ನಟ, ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಡಾ.ರಾಜ್ ಕುಮಾರ್ ಅವರ 96 ನೇ ಜಯಂತಿಯನ್ನು ಇಲ್ಲಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಯಲ್ಲಿ ಬುಧವಾರ ಸರಳವಾಗಿ ಆಚರಿಸಲಾಯಿತು.
ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಮಾದರಿ ನೀತಿ ಸಂಹಿತೆ ಜಾರಿ ಹಿನ್ನಲೆಯಲ್ಲಿ ಡಾ.ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ತುಕಾರಾಂ ರಾವ್ ಬಿ.ವಿ ಅವರು ಪುಷ್ಪ ನಮನ ಸಲ್ಲಿಸುವ ಮೂಲಕ ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಥಮ ದರ್ಜೆ ಸಹಾಯಕ ವಿ.ಸಿ.ಗುರುರಾಜ್, ಸಿಬ್ಬಂದಿಗಳಾದ ರೋಜಾ ಮೇರಿ, ಹೆಚ್.ವಿಜಯ್ ಕುಮಾರ್, ಹನುಮೇಶ್.ಹೆಚ್, ಮಲ್ಲೇಶಪ್ಪ.ವೈ., ವರದಿಗಾರರಾದ ಮಹೇಂದ್ರ ಕುಮಾರ್, ಪಿ.ಟಿ.ಚೌದರಿ, ರವಿ, ಛಾಯಾಗ್ರಾಹಕ ರುದ್ರಮುನಿ ಸ್ವಾಮಿ, ಇಲಾಖೆಯ ತರಬೇತುದಾರರಾದ ಅಭಿಷೇಕ್, ತಿಪ್ಪೇಸ್ವಾಮಿ ಮತ್ತು ಎಂಸಿಎಂಸಿ ಸಮಿತಿಯ ಸಿಬ್ಬಂದಿಗಳಾದ ತಿಪ್ಪೇಸ್ವಾಮಿ, ರಾಜು.ವಿ ಉಪಸ್ಥಿತರಿದ್ದರು