34.6 C
Bellary
Monday, May 13, 2024

Localpin

spot_img

೩ ರಿಂದ ೪ ವರ್ಷದ ಆದಿ ಮಾನವರ ಪಳೇವುಳಿಕೆಯ ಪ್ರದರ್ಶನ

ಬೆಳಗಾಯಿತು ವಾರ್ತೆ
ಬಳ್ಳಾರಿ: ಹೋಮೋ ನರ್ಮದೆಂನ್ಸಿಸ್, ೩ ರಿಂದ ೪ ಲಕ್ಷ ವರ್ಷದ ಆದಿ ಮಾನವನ ಪಳೇವುಳಿಕೆಯನ್ನು ಭಾನುವಾರ ಬಳ್ಳಾರಿಯ ರಾಬರ್ಟ್ ಬ್ರೂಸ್ ಫುಟ್ ಸಂಗನಕಲ್ ವಸ್ತು ಸಂಗ್ರಹಲಯದಲ್ಲಿ ಪ್ರದರ್ಶನಕ್ಕೆ ಇಡಲಾಯಿತು
.

ಈ ಪಳೇವುಳಿಕೆ ಸೇರಿಸಿದರೆ ಒಟ್ಟು ಹದಿನೈದು ತಲೆಬುರಡೆ ಗಳನ್ನು (ಜಗತ್ತಿನಲ್ಲಿ ವಿವಿಧ ಕಾಲಘಟ್ಟದಲ್ಲಿ ಸಿಕ್ಕಿದವು) ಹೊಂದಿದ ಏಕೈಕ ವಸ್ತುಸಂಗ್ರಹಲಯ ಎಂಬ ಹೆಗ್ಗಳಿಕೆಗೆ ಬಳ್ಳಾರಿಯ ರಾಬರ್ಟ್ ಬ್ರೂಸ್ ಫುಟ್ ಸಂಗನಕಲ್ ವಸ್ತು ಸಂಗ್ರಹಲಯವು ಪಾತ್ರವಾಗಿದೆ.
ಬಳ್ಳಾರಿ ನಗರದ ಖ್ಯಾತ ದಂತ ವೈದ್ಯರಾದ ಎಸ್. ದಿವಾಕರ್ ಅವರು ಹೋಮೋ ನರ್ಮದೆಂನ್ಸಿಸ್ ಪಳೇವುಳಿಕೆಯನ್ನು ಪ್ರೊ ರವಿ ಕೊರಿಶೆಟ್ಟರ್, ಖ್ಯಾತ ಪ್ರಗೈತಿ ಇತಿಹಾಸ ತಜ್ಞ, ಅವರಿಂದ ಸ್ವೀಕರಿಸಿ ಪ್ರದರ್ಶನಕ್ಕೆ ಇಡಲಾಗಿದೆ.
ಹೋಮೋ ನರ್ಮದೆಂನ್ಸಿಸ್ ಪಾಲಿವುಲಿಕೆ ೧೯೮೨ ರಲ್ಲಿ ನರ್ಮದಾ ನದಿ ದಂಡೆಯಮೇಲೆ ಅರುಣ್ ಸೋನಾಕೀಯ
, ಭೂ ವಿಜ್ಞಾನಿ, ಪತ್ತೇ ಹಚ್ಚಿದರು.
ಇದು ತಲೆ ಬುರ್ಡೆಯ ಬಲ ಭಾಗದ ಒಂದು ಪಳಿ ವುಳುಕೇಯ ತುಣುಕಾಗಿದ್ದು, ಬಹಳಷ್ಟು ವಿದ್ವಾಂಸರನ್ನು ಆಕರ್ಷಸಿ ಮಾನವನ ಜೈವಿಕ ವಿಕಾಸನದ ಅಧ್ಯನದಲ್ಲಿ ಪ್ರಮುಖ್ಯತೆ ಪಡೆದುಕೊಂಡಿದೆ.
ಇದುವರೆಗೂ ಭಾರತದಲ್ಲಿ ಸಿಕ್ಕಿರುವ ಆದಿಮನವನರ ಏಕೈಕ ಪಳೇವುಳಿಕೆ ಯಾಗಿದೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles