ಬೆಳಗಾಯಿತು ವಾರ್ತೆ | www.belagayithu.in
ಅರ್ಜೆಂಟೀನಾದ ಬ್ಯೂನಸ್ ಐರಿಸ್ ಪ್ರಾಂತ್ಯದ ರಾಜಧಾನಿ ಲಾ ಪ್ಲಾಟಾದಲ್ಲಿ ನಡೆದ ಮಿಸ್ ಯೂನಿವರ್ಸ್ ಬ್ಯೂನಸ್ ಐರಿಸ್ 2024ರ ಸ್ಪರ್ಧೆಯಲ್ಲಿ 60 ವರ್ಷದ ಮಹಿಳೆ ವಿಜೇತರಾಗಿ ಜಗತ್ತಿನ ಗಮನಸೆಳೆದಿದ್ದಾರೆ. ಹೆಸರು ಅಲೆಜಾಂಡ್ರಾ ಮಾರಿಸಾ ರೋಡ್ರಿಗಸ್. ವೃತ್ತಿಯಲ್ಲಿ ನ್ಯಾಯವಾದಿ ಮತ್ತು ಪತ್ರಕರ್ತೆ. ಈ ಮೂಲಕ ಅವರು ವಯಸ್ಸು ಮತ್ತು ಸೌಂದರ್ಯ ವಿಚಾರದಲ್ಲಿ ತಮ್ಮದೇ ಆದ ವ್ಯಾಖ್ಯೆಯನ್ನು ಬರೆದುಬಿಟ್ಟರು.
ಅರ್ಜೆಂಟೀನಾದ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯನ್ನು ಗೆದ್ದ 60 ವರ್ಷ ವಯಸ್ಸಿನ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಈಗ ಅಲೆಜಾಂಡ್ರಾ ಅವರದ್ದು. ಅವರ ಈ ಗೆಲುವು ಐತಿಹಾಸಿಕ. ಮಿಸ್ ಯೂನಿವರ್ಸ್ ಅರ್ಜೆಂಟೀನಾ ಸ್ಪರ್ಧೆ ಮುಂದಿನ ತಿಂಗಳು (2024ರ ಮೇ ) ನಡೆಯಲಿದ್ದು, ಅದಕ್ಕೂ ಮೊದಲು ನಡೆದ ರಾಷ್ಟ್ರೀಯ ಆಯ್ಕೆಯಲ್ಲಿ ಬ್ಯೂನಸ್ ಐರಿಸ್ ಸ್ಪರ್ಧೆಯಲ್ಲಿ ಅಲೆಜಾಂಡ್ರಾ ರೋಡ್ರಿಗಸ್ ಮಿಸ್ ಯೂನಿವರ್ಸ್ ಬ್ಯೂನಸ್ ಐರಿಸ್ ಕಿರೀಟ ಮುಡಿಗೇರಿಸಿಕೊಂಡರು.