26.8 C
Bellary
Monday, May 27, 2024

Localpin

spot_img

ಬಂಜಾರ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತದೆ

ಬೆಳಗಾಯಿತು ವಾರ್ತೆ | www.belagayithu.in
ಹರಪನಹಳ್ಳಿ: ಇಂದಿರಾ ಗಾಂಧಿಯವರ ಕಾಲದಿಂದಲೂ ಬಂಜಾರ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದು, ಈಗಲೂ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತಿದೆ ಎಂದು ಮಾಜಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ್ ಹೇಳಿದರು.
ಪಟ್ಟಣದ ಆಚಾರ್ಯ ಲೇಔಟ್‌ನಲ್ಲಿರುವ ತಮ್ಮ ನಿವಾಸದ ಆವರಣದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆ ಆಯೋಜಿಸಿದ್ದ ತಾಲೂಕಿನ ಬಂಜಾರ ಸಮುದಾಯದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷ ನಮ್ಮ ಸಮುದಾಯದ ಅಭಿವೃದ್ಧಿಗೆ ಕಟಿ ಬದ್ಧವಾಗಿದೆ ರಾಜ್ಯದಲ್ಲಿ ಈ ಬಾರಿ 30ರಿಂದ 35 ಸ್ಥಾನ ಶಾಸಕರ ಗೆಲುವಿಗೆ ಬಂಜಾರ ಸಮುದಾಯದ ಮತಗಳು ನಿರ್ಣಾಯಕ ಪಾತ್ರ ವಹಿಸಿವೆ, ನಾನು ಬಂಜಾರ ಸಮುದಾಯದಿಂದ ಶಾಸಕನಾಗಿ, ಸಚಿವನಾಗಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಹರಪನಹಳ್ಳಿ ಕ್ಷೇತ್ರದ 52 ತಾಂಡಗಳಿಂದಲೂ ನನಗೆ ಯಾವಗಲೂ ಬೆನ್ನೆಲುಬಾಗಿ ನಿಂತಿದ್ದಾರೆ ಎಂದರು.
ಇದೀಗ ಸರ್ಕಾರದಲ್ಲಿ ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ ಯಾವುದೇ ಸೂಕ್ತ ಸ್ಥಾನಮಾನ ಸಿಕಿಲ್ಲ ಈ ವಿಚಾರವನ್ನು ನಾನು ಸಿಎಂ, ಡಿಸಿಎಂರವರ ಗಮನಕ್ಕೆ ತಂದಿದ್ದೇನೆ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಉತ್ತಮ ಸ್ಥಾನಮಾನ ಸಿಗುವ ಭರವಸೆ ಇದೆ ಎಂದರು.
ಬಿಜೆಪಿಯವರು ನಮ್ಮ ಸಮುದಾಯಕ್ಕೆ ಯಾವುದೇ ಕೊಡುಗೆ ನೀಡಿಲ್ಲ, ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಮುದಾಯ ಅಭಿವೃದ್ಧಿಗೊಂಡಿದೆ, ನಾನು ಪ್ರಥಮ ಬಾರಿಗೆ ಶಾಸಕನಾಗಿದ್ದಾಗ ತಾಲೂಕನ್ನು ಅಭಿವೃದ್ಧಿ ಮಾಡಲು ಶ್ರಮಿಸಿದ್ದೇನೆ, ದಾವಣಗೆರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ತಾಲೂಕಿನ ಎಲ್ಲಾ ತಾಂಡಗಳಿಂದಲೂ ಹೆಚ್ಚಿನ ಬಹುಮತದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಪರಾಜಿತ ಅಭ್ಯರ್ಥಿ ಎನ್.ಕೊಟ್ರೇಶ್ ಮಾತನಾಡಿ ಕಾಂಗ್ರೆಸ್ ಪಕ್ಷದಿಂದ 10 ತಿಂಗಳಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ನುಡಿದಂತೆ ನಡೆದಿದ್ದು, ಕೇಂದ್ರದಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರಾಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸಲಿದೆ ಎಂದು ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷ ಹೆಚ್.ಕೆ.ಹಾಲೇಶ್ ಮಾತನಾಡಿ ಪಿ.ಟಿ.ಪರಮೇಶ್ವರನಾಯ್ಕರವರು ಸರ್ವಜನಾಂಗದವರ ನಾಯಕರಾಗಿದ್ದು, ಅವರ ಅವಧಿಯಲ್ಲಿ ತಾಲೂಕು ಸಾಕಷ್ಟು ಅಭಿವೃದ್ಧಿಯಾಗಿವೆ, ಹಾಗಾಗಿ ಬಂಜಾರ ಸಮುದಾಯ ಕಾಂಗ್ರೆಸ್ ಬೆಂಬಲಿಸುವ ಮೂಲಕ ಅವರ ಕೈ ಬಲಪಡಿಸಬೇಕು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಶಶಿಧರ ಪೂಜಾರ ಮಾತನಾಡಿ ಪಿ.ಟಿ.ಪರಮೇಶ್ವರನಾಯ್ಕ್ ಅವರು ತಾಲೂಕಿನ ಹಿಂದುಳಿದ ಸಮುದಾಯವನ್ನು ಅಭಿವೃದ್ಧಿಪಡಿಸಿದ್ದಾರೆ, ಇದನ್ನು ಬಂಜಾರ ಸಮುದಾಯದವರು ಆತ್ಮವಲೋಕನ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕುವ ಮೂಲಕ ಪರಮೇಶ್ವರನಾಯ್ಕರವರನ್ನು ಬೆಂಬಲಿಸಬೇಕು ಎಂದರು.
ಈ ವೇಳೆ ದಾವಣಗೆರೆ ಲೋಕಸಭಾ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನರವರ ಪುತ್ರ ಸಮರ್ಥ, ಹಿರಿಯ ಕಾಂಗ್ರೆಸ್ ಮುಖಂಡರಾದ ಚಂದ್ರಶೇಖರ ಭಟ್, ಹೆಚ್.ಬಿ.ಪರಶುರಾಮಪ್ಪ, ಪ್ರಕಾಶ್ ಪಾಟೀಲ್, ಪಿ.ಎಲ್.ಪೋಮ್ಯನಾಯ್ಕ, ಪಿ.ಟಿ.ಭರತ್ ಮಾತನಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಜಾಕೀರ್ ಹುಸೇನ್ ಸರ್ಖಾವಸ್, ಮುಖಂಡರಾದ ಇಜಾರಿ ಮಹಾವೀರ, ಹಾಲೇಶಗೌಡ, ತಿಮ್ಮನಾಯ್ಕ, ಮಹಾಂತೇಶ್‌ನಾಯ್ಕ, ವೇದುನಾಯ್ಕ, ಎಲ್.ಬಿ.ಹಾಲೇಶನಾಯ್ಕ, ನೂರುದ್ದಿನ್, ಕಾನಹಳ್ಳಿ ರುದ್ರಪ್ಪ, ನೇಮ್ಯನಾಯ್ಕ, ತಾರ‍್ಯನಾಯ್ಕ, ರೇಣುಕಬಾಯಿ, ಶೆಟ್ಟಿನಾಯ್ಕ, ರಾಮನಾಯ್ಕ, ಪ್ರಸಾದನಾಯ್ಕ, ಉಮೇಶನಾಯ್ಕ, ರವಿನಾಯ್ಕ, ಡಾಕ್ಯನಾಯ್ಕ, ಸೇರಿದಂತೆ ಇನ್ನೀತರರು ಇದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles