ಬೆಳಗಾಯಿತು ವಾರ್ತೆ |www.belagayithu.in
ತಿರುವನಂತಪುರಂ(ಫೆ.27): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮೂರು ಪ್ರಮುಖ ತಾಂತ್ರಿಕ ಘಟಕಗಳನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಂಗಳವಾರ ಕೇರಳ ಭೇಟಿ ನೀಡಿದ್ದಾರೆ. ತಿರುವನಂತಪುರಂನಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ (ವಿಎಸ್‌ಎಸ್‌ಸಿ) ಪ್ರಧಾನಿ ಭೇಟಿ ನೀಡಿದರು. ವಿಎಸ್‌ಎಸ್‌ಸಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಪಿಎಂ ಮೋದಿ ಅವರು ಗಗನ್‌ಯಾನ್ ಮಾನವ ಬಾಹ್ಯಾಕಾಶ ಯಾನ ಕಾರ್ಯಕ್ರಮವನ್ನು ಪರಿಶೀಲಿಸಿದರು ಮತ್ತು ಗಗನ್‌ಯಾನ್ ಮಿಷನ್‌ಗೆ ಸಂಬಂಧಿಸಿದ ಗಗನಯಾತ್ರಿಗಳನ್ನು ಭೇಟಿ ಮಾಡಿದರು. ಗಗನಯಾತ್ರಿಗಳು – ಪಿ ಬಾಲಕೃಷ್ಣನ್ ನಾಯರ್, ಅಜಿತ್ ಕೃಷ್ಣನ್, ಅಂಗದ್ ಪ್ರತಾಪ್ ಮತ್ತು ವಿಂಗ್ ಕಮಾಂಡರ್ ಎಸ್ ಶುಕ್ಲಾ