31 C
Bellary
Thursday, May 16, 2024

Localpin

spot_img

ಕರ್ನಾಟಕ- ಆಂಧ್ರ ಗಡಿ ಸರ್ವೇ ಮಾಡುವಲ್ಲಿ ಸರ್ವೇ ಆಫ್ ಇಂಡಿಯಾ ಏಕಪಕ್ಷೀಯ ನಿರ್ಧಾರ

ಬಳ್ಳಾರಿ:  2009ರಲ್ಲಿ ಸರ್ವೇ ಆಫ್ ಇಂಡಿಯಾದವರು  ಏಕಪಕ್ಷೀಯವಾಗಿ ನಮ್ಮ ಗಮನಕ್ಕೆ ತರದೆ  ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿ ಮತ್ತು ಆಂಧ್ರ ಪ್ರದೇಶ ಗಡಿ ಪ್ರದೇಶದಲ್ಲಿ ಸರ್ವೇ ಮಾಡಿದ್ದಾರೆ ಎಂದು ಅಂದಿನ ಜಿಲ್ಲಾಧಿಕಾರಿಗಳೇ ಹೇಳಿದ್ದಾರೆ ಎಂದು ಶಾಸಕ ನಾರಾ ಭರತ್ ರೆಡ್ಡಿ ಅವರು ಸದನದಲ್ಲಿ ಗಮನ ಸೆಳೆದರು.

ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿದ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಮಾತನಾಡಿ ಅಕ್ರಮ ಗಣಿಗಾರಿಕೆ ಮಾಡುವ ಉದ್ದೇಶದಿಂದ ಆಂಧ್ರಪ್ರದೇಶದ ಕೆಲ ಗಣಿ ಕಂಪನಿಗಳು ಹಾಗೂ ಅಂದಿನ ಬಿಜೆಪಿ ಸರ್ಕಾರದವರ ಸಹಕಾರದಿಂದ ಸರ್ವೇ ಆಫ್ ಇಂಡಿಯಾದವರು ಏಕಪಕ್ಷೀಯವಾಗಿ ಸರ್ವೇ ಮಾಡಿ ಕರ್ನಾಟಕ ಗಡಿ ಭಾಗಕ್ಕೆ ಅನ್ಯಾಯ ಮಾಡಿದ್ದಾರೆ.ಕರ್ನಾಟಕ ಮತ್ತು ಆಂಧ್ರಪ್ರದೇಶ ಗಡಿ ಭಾಗ ನಿರ್ಧಾರ ಮಾಡುವ ಮುನ್ನ ಕರ್ನಾಟಕ ಮತ್ತು ಆಂಧ್ರಪ್ರದೇಶ ಗಡಿ ಪ್ರದೇಶದ ಹತ್ತಿರ ಇರುವ ತಾಲ್ಲೂಕು ಮತ್ತು ಹಳ್ಳಿಗಳ ಗಡಿ ಪ್ರದೇಶ ನಿರ್ಧಾರ ಮಾಡಿ ತದನಂತರ ಆಂಧ್ರಪ್ರದೇಶ ಮತ್ತು ಕರ್ನಾಟಕದ ಗಡಿ ಪ್ರದೇಶದ ಗಡಿಭಾಗ ನಿರ್ಧಾರ ಮಾಡಲಿ ಎಂದು ಒತ್ತಾಯಿಸಿದ್ದಾರೆ.

ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಕಂದಾಯ ಸಚಿವರಾದ ಕೃಷ್ಣೆ ಭೈರೇಗೌಡ ಅವರು ರಾಜ್ಯದ ಹಿತ ಕಾಪಾಡುವ ಹಿತ ದೃಷ್ಟಿಯಿಂದ ತಜ್ಞರ ಸಮಿತಿಯನ್ನು ರಚಿಸಿ ಮತ್ತೊಮ್ಮೆ ಸರ್ವೇ ಮಾಡಲಾಗುತ್ತದೆ ಎಂದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles