ಮರಿಯಮ್ಮನಹಳ್ಳಿ: ಹಣ, ಒಡವೆ, ವಸ್ತ್ರ, ಸರಕು- ಸರಂಜಾಮುಗಳ ಕಳ್ಳತನವಾಗುವುದು ಕೇಳಿದ್ದೇವೆ. ಆದರೆ ನೀರು ಕಳ್ಳತನವಾಗಿರುವ ಅಪರೂಪದ ಸುದ್ದಿ ಪಟ್ಟಣದಲ್ಲಿ ಸೋಮವಾರ ನಡೆದಿದೆ.
ಪಟ್ಟಣದ 1,2,15ನೇ ವಾರ್ಡಿಗೆ ನೀರು ಕಳ್ಳತನವಾಗಿದೆ.
ಈ ಕುರಿತು ಮೂರುವಾರ್ಡಿನ ಸಾರ್ವಜನಿಕರು ಪೋಲೀಸ್ ಠಾಣೆಗೆ ದೂರು ನೀಡಿ, ಸೋಮವಾರ ಪಟ್ಟಣ ಪಂಚಾಯತಿಗೆ ಮುತ್ತಿಗೆ ಹಾಕಿದರು.
ಶನಿವಾರ, ತುಂಗಭದ್ರಾ ಜಲಾಶಯದಿಂದ ಹನುಮನಹಳ್ಳಿ ಶುದ್ದೀಕರಣ ಘಟಕದಿಂದ ಪೂರೈಕೆಯಾಗುವ ನೀರನ್ನು, ವೆಂಕಟಾಪುರ ರಸ್ತೆಯ 2ಲಕ್ಷ ಲೀ.ಸಾಮರ್ಥ್ಯದ ಟ್ಯಾಂಕಿಗೆ ಪೂರೈಕೆ ಮಾಡಿ ತುಂಬಿಸಲಾಗಿದೆ ಎಂದು ವಾರ್ಡಿನ ಸದಸ್ಯ ವಸಂತ್ ತಿಳಿಸಿದರು.
1,2,15 ವಾರ್ಡುಗಳಿಗೆ ಭಾನುವಾರ ಸರಬರಾಜಾಗಬೇಕಿದ್ದ ನೀರು ಸರಬರಾಜಾಗದ ಕಾರಣ ವಾರ್ಡಿನ ಸದಸ್ಯರು, ಸಾರ್ವಜನಿಕರು ಅನುಮಾನ ವ್ಯಕ್ತವಾಗು ಟ್ಯಾಂಕ್ ಏರಿ ನೋಡಲು 2ಲಕ್ಷ ಲೀ ಮಾಯಾವಾಗಿದೆ. ಮೂರು ವಾರ್ಡುಗಳಿಗೆ ಸರಬರಾಜಾಗಬೇಕಾದ ನೀರು ಬೇರೆ ವಾರ್ಡುಗಳಿಗೆ ಪೂರೈಕೆಯಾಗಿದೆ ಎಂದು ನಿವಾಸಿಗಳು ಪಟ್ಟಣದ ಠಾಣೆಗೂ ದೂರಿದರು.
ಸೋಮವಾರ ಪಟ್ಟಣ ಪಂಚಾಯತಿಗೆ ಮುತ್ತಿಗೆ ಹಾಕಿ, ವಾರ್ಡಿನ ನಿವಾಸಿಗಳು ಅಧಿಕಾರಿಗಳಿಗೆ, ವಾಟರ್ ಮನ್ ಗಳಿಗೆ ತರಾಟೆಗೆ ತೆಗೆದು ಕೊಂಡರು.
ಪಟ್ಟಣದ ಪಿ.ಎಸ್.ಐ.ಮೌನೇಶರಾಥೋಡ್ ಮತ್ತು ಸಿಬ್ಬಂದಿಗಳು ಮದ್ಯಸ್ತಿಕೆವಹಿಸಿ ಸಮಸ್ಯೆಯನ್ನು ತಿಳಿಗೊಳಿಸಿದರು.
ಈ ಸಂಧರ್ಭದಲ್ಲಿ ಎಲ್. ವೆಂಕಟೇಶ್, ಎಲ್. ಪ್ರಶಾಂತ್, ಎಲ್. ಕುಮಾರ,ಜಿಲ್ಲಾ ಪಂಚಾಯತ್ ಮಾಜಿಸದಸ್ಯರು ಎಲ್, ಮಂಜುನಾಥ .ಮಾಜಿ ಪಟ್ಟಣ ಪಂಚಾಯತಿ ಸದಸ್ಯರು ಬಿಸ್ನಳ್ಳಿ ಆನಂದ, ಎಲ್ .ಹನುಮಂತ, ಮಾಳಿಗೆ ಹನುಮಂತ, ಹರಿಯಮ್ಮನವರ ರಮೇಶ, ಮಿಸಿ ಎಲ್. ನಾಗರಾಜ, ಮಂಜುನಾಥ್.ದಾಸರ ಮಹಾಂತೇಶ್, ಪೈಲ್ವಾನ್ ವೆಂಕಟೇಶ್,ವಲಾಪುರ ಪರುಶುರಾಮ್,ಮಳಿಗಿ ಕೋಮರೆಪ್ಪ, ಬಾನಿ ಪರುಶುರಾಮ್, ಪ್ಯಾಂನ್ಸ್ ಪರುಶುರಾಮ್ ಸೇರಿದಂತೆ ಇತರರಿದ್ದರು.