40.8 C
Bellary
Monday, April 29, 2024

Localpin

spot_img

ಬಲಿಜ ಪ್ರೀಮಿಯರ್ ಲೀಗ್ : ರೇಡಿಯೋ ಪಾರ್ಕ್ ಎಸ್ ಎನ್ ಆರ್ ತಂಡ ಚಾಂಪಿಯನ್

ಬಳ್ಳಾರಿ: ನಗರದಲ್ಲಿ ವಾರ್ಡ್ಲ್ ಕಾಲೇಜಿನ ಮೈದಾನದಲ್ಲಿ ಭಾನುವಾರ ನಡೆದ ಬಲಿಜ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ ಮಿಲ್ಲರ್ ಪೇಟೆ ಎಲೆವನ್ಸ್ ವಿರುದ್ಧ ರೇಡಿಯೋ ಪಾರ್ಕ್ ತಂಡ ಭರ್ಜರಿ ಜಯ ಸಾಧಿಸಿದೆ.

ನಗರದಲ್ಲಿನ ವಾರ್ಡ್ಲ್ ಕಾಲೇಜಿನ ಮೈದಾನದಲ್ಲಿ ಬಲಿಜ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಮೊದಲ ಬಾರಿಗೆ ಆಯೋಜಿಸಲಾಗಿದ್ದ ನಾಲ್ಕು ದಿನಗಳ ಬಲಿಜ ಪ್ರೀಮಿಯರ್ ಲೀಗ್ ನಲ್ಲಿ ಸಮುದಾಯದ ಸುಮಾರು ಹತ್ತು ತಂಡಗಳು ಭಾಗವಹಿಸಿದ್ದವು.

ಬಲಿಜ ಪ್ರೀಮಿಯರ್ ಲೀಗ್ ಸೀಜನ್ 1ರಲ್ಲಿ ಸೆಮಿಫೈನಲ್ ಗೆ ಟೈಗರ್ ಹಿಲ್ಸ್,, ಡ್ರೀಮ್ ಇಲೆವೆನ್, ಮಿಲ್ಲರ್ ಪೇಟೆ ರಾಖಿ ಇಲೆವೆನ್, ರೇಡಿಯೋ ಪಾರ್ಕ್ ಎಸ್ ಎನ್ ಆರ್ ತಂಡಗಳು ಬಂದಿದ್ದು, ಫೈನಲ್ ಗೆ ರೇಡಿಯೋ ಪಾರ್ಕ್ ಎಸ್ ಎನ್ ಆರ್ ಇಲೆವೆನ್ ಮತ್ತು ಮಿಲ್ಲರ್ ಪೇಟೆ ರಾಖಿ ಇಲೆವೆನ್ ತಂಡಗಳು ಮುಖಾಮುಖಿಯಾದವು.

ಫೈನಲ್ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ಮಿಲ್ಲರ್ ಪೇಟೆ ರಾಖಿ ಇಲೆವೆನ್ ತಂಡ 10ಓವರ್ ಗೆ 4ವಿಕೆಟ್ ನಷ್ಟಕ್ಕೆ 59ರನ್ ಗಳಿಸಿತು. ಗುರಿಯನ್ನು ಬೆನ್ನತ್ತಲು ಎರಡನೇ ಬ್ಯಾಟ್ ಮಾಡಿದ ರೇಡಿಯೋ ಪಾರ್ಕ್ ಎಸ್ ಎನ್ ಆರ್ ಎಲೆವನ್ ತಂಡ 9 ಓವರ್ 3 ಬಾಲ್ಸ್ ಗೆ 8 ವಿಕೆಟ್ ನಷ್ಟಕ್ಕೆ 60ರನ್ ಗಳಿಸಿ ಭರ್ಜರಿ ಜಯ ಗಳಿಸಿದೆ.

ಬಲಿಜ ಪ್ರೀಮಿಯರ್ ಲೀಗ್ ಆಯೋಜಕರಾದ ಚಕ್ರಪಾಣಿ ಅವರು ಮಾತನಾಡಿ ಮೊದಲ ಬಾರಿಗೆ ಬಳ್ಳಾರಿಯಲ್ಲಿ ಸಮುದಾಯದ ಯುವ ಪೀಳಿಗೆಯ ಪ್ರತಿಭೆ ಗುರುತಿಸುವ ಸಲುವಾಗಿ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿದೆ. ಬಲಿಜ ಪ್ರೀಮಿಯರ್ ಲೀಗ್ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ಕ್ರೀಡಾ ಸಚಿವ ನಾಗೇಂದ್ರ ಅವರು ಮಾತನಾಡಿ ಬಳ್ಳಾರಿಯಲ್ಲಿ ಮೊದಲ ಬಾರಿಗೆ ಬಲಿಜ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಬಲಿಜ ಪ್ರೀಮಿಯರ್ ಲೀಗ್ ನ್ನು ಟಿ20 ಮಾದರಿಯಲ್ಲಿ ಕ್ರಿಕೆಟ್ ಟೂರ್ನಮೆಂಟ್ ಅಚ್ಚುಕಟ್ಟಾಗಿ ಆಯೋಜಿಸಲಾಗಿದೆ. ಫೈನಲ್ ಪಂದ್ಯದಲ್ಲಿ ಮಿಲ್ಲರ್ ಪೇಟೆ ಎಲೆವನ್ಸ್ ವಿರುದ್ಧ ರೇಡಿಯೋ ಪಾರ್ಕ್ ಎಸ್ ಎನ್ ಆರ್ ತಂಡ ಭರ್ಜರಿ ಜಯ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಮುಂದಿನ ವರ್ಷದ ಟೂರ್ನಮೆಂಟ್ ನಲ್ಲಿ ನನ್ನದು ಒಂದು ತಂಡವನ್ನು ಆಡಿಸುವೆ ಎಂದು ಹೇಳಿದರು.

ಬಹುಮಾನ
ಬಲಿಜ ಪ್ರೀಮಿಯರ್ ಲೀಗ್ ನಲ್ಲಿ ರೇಡಿಯೋ ಪಾರ್ಕ್ ಎಸ್ ಎನ್ ಆರ್  ಚಾಂಪಿಯನ್ ತಂಡವಾಗಿ 1.51 ಲಕ್ಷ ಬಹುಮಾನ ಹಾಗೂ ಮಿಲ್ಲರ್ ಪೇಟೆ ಎಲೆವನ್ಸ್ ರನ್ನರ್ ಅಪ್ ತಂಡವಾಗಿ 1.01ಲಕ್ಷ ಬಹುಮಾನ ಪಡೆಯಿತು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles