40.8 C
Bellary
Monday, April 29, 2024

Localpin

spot_img

ಲಲಿತಕಲಾ ರಂಗದ 38ನೇ ವಾರ್ಷಿಕೋತ್ಸವ

ಬೆಳಗಾಯಿತು ವಾರ್ತೆ
ಮರಿಯಮ್ಮನಹಳ್ಳಿ: ಮೊಬೈಲ್ ಜಗತ್ತನ್ನು ಮೀರಿಸುವಂತಹ ಕಲಾ ಮಾಧ್ಯಮ ಎಂದರೆ ಅದು ರಂಗಭೂಮಿ ಮಾತ್ರ ಎಂದು ನಂದಿಹಳ್ಳಿಯ ಸ್ನಾತಕೋತ್ತರ ಕೇಂದ್ರದ ಕನ್ನಡ ಅಧ್ಯಯನ ವಿಭಾಗದ ಅಧ್ಯಾಪಕ ಡಾ. ಮಲ್ಲಯ್ಯ ಹೇಳಿದರು.

ಪಟ್ಟಣದ ದುರ್ಗದಾಸ್ ಕಲಾಮಂದಿರದಲ್ಲಿ, ಬಿ. ಲಿಂಗಮ್ಮ, ಡಾ. ಬಿ. ಅಂಬಣ್ಣ, ಡಿ. ದುರ್ಗಾದಾಸ್ ಹಾಗೂ ಗಿರಿಜಮ್ಮ ಕರಿಬಸಪ್ಪ ಇವರ ದತ್ತಿ ನೆರವಿನೋಂದಿಗೆ ಲಲಿತಕಲಾ ರಂಗದ 38ನೇ ವಾರ್ಷಿಕೋತ್ಸವ,ಕಲಾನಿಧಿ ಪ್ರಶಸ್ತಿ ಪ್ರದಾನ ಹಾಗೂ ಬರ್ಗಲ್ಲು ನಾಟಕ ಪ್ರದಶನದಲ್ಲಿ ಮುಖ್ಯಅತಿಥಿಗಳಾಗಿ ಮಾತನಾಡಿದರು.
ಮೊಬೈಲ್ ಜಗತ್ತಿನಲ್ಲಿ ಸಿನಿಮಾ ಕಡಿಮೆಯಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಮೊಬೈಲ್‍ನ್ನು ಮೀರಿಸುವಂತಹ ಕಲಾ ಮಾಧ್ಯಮ ರಂಗಭೂಮಿಯಾಗಿದೆ. ಈ ರಂಗಭೂಮಿಯನ್ನು ಉಳಿಸಿ ಬೆಳೆಸುವಂತಹ ಮಹತ್ವರ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಅವರು ಹೇಳಿದರು.ನಂತರ “ಕಲಾನಿಧಿ ಪ್ರಶಸ್ತಿ”
2022-23 ನೇ ಸಾಲಿನ ಪದ್ಮರಾಜ್ ಜೈನ್, ನೇಮಿರಾಜ್ ಜೈನ್ ಸ್ಮರಣಾರ್ಥ ನಗದು ಪುರಸ್ಕಾರದೊಂದಿಗೆ ಕಲಾನಿಧಿ ಪ್ರಶಸ್ತಿಯನ್ನು ಗೊಲ್ಲರಹಳ್ಳಿಯ ಬಯಲಾಟದ ಕಲಾವಿದ ಎ. ನಾರಾಯಣಪ್ಪ ಅವರಿಗೆ ನೀಡಿ ಗೌರವಿಸಲಾಯಿತು.
“ನಾಟಕ”
ಮ.ಬ. ಸೋಮಣ್ಣ ರಚಿಸಿ,ನಿರ್ದೇಶಿಸಿ ಹಾಗೂ ಹ್ಯಾಟಿಮಂಜುನಾಥ ಸಹ ನಿರ್ದೇಶನದಲ್ಲಿ ಬರ್ಗಲ್ಲುನಾಟಕ ಪ್ರದರ್ಶನಗೊಂಡಿತು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles