ಬೆಳಗಾಯಿತು ವಾರ್ತೆ
ಬಳ್ಳಾರಿ: ರಾಜ್ಯದಲ್ಲಿ 28 ಸಾವಿರ ಕ್ಕೂ ಹೆಚ್ಚಿನ ಬಾಲಕಿಯರು ಗರ್ಭಿಣಿಯಾಗಿದ್ದಾರೆ ಎಂದು ಶಶಿಧರ್ ಕೋಸಂಬೆ ಅವರು ಹೇಳಿದರು.
ನಗರದ ಬಿಡಿಎಎ ಪುಟ್ಬಾಲ್ ಸ್ಟೇಡಿಯಂ ಮೈದಾನದ ಸಭಾಂಗಣದಲ್ಲಿ ಬುಧವಾರ ರೀಡ್ಸ್ ಸಂಸ್ಥೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಸಿ ಎ ಸಿ ಎಲ್ ಇವರ ಸಂಯುಕ್ತಾಶ್ರಯದಲ್ಲಿ ಆಯೋಜನೆ ಮಾಡಿದ್ದ ಬಾಲ್ಯವಿವಾಹ ಮತ್ತು ದೇವದಾಸಿ ಪದ್ದತಿ ತಡೆಗಟ್ಟುವಲ್ಲಿನ ಸವಾಲುಗಳು ಮತ್ತು ಪರಿಹಾರ ಕುರಿತು ರಾಜ್ಯಮಟ್ಟದ ಕಾರ್ಯಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.1929 ರಿಂದ ದೇಶದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿ ಇದೆ. ರಾಜ್ಯ ಸರ್ಕಾರ ಪಂಚಾಯಿತಿ ರಾಜ್ಯ ಇಲಾಖೆ ಬಾಲ್ಯ ವಿವಾಹ ನಿಷೇಧ ಮುಕ್ತ ಮಾಡುವುದಾಗಿ ಹೇಳುತ್ತಾ ಬಂದಿದೆ. ಆದರೆ ರಾಜ್ಯದಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಹೇಳಿದ ಅವರು ಶಾಲೆಯನ್ನು ಬಿಡುವ ಮಕ್ಕಳ ಕುರಿತು ಶಿಕ್ಷಣ ಇಲಾಖೆ ಹೆಚ್ಚಿನ ನಿಗಾವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಬಿ. ಸಿದ್ದರಾಮಯ್ಯ, ಕರ್ನಾಟಕ ಉಚ್ಚನ್ಯಾಯಾಲಯದ ಅಡಿಷನಲ್ ಅಡ್ವೋಕೇಟ್ ಜನರಲ್ ಕೇಶವ ರೆಡ್ಡಿ, ಡಿವೈಎಸ್ ಪಿ ಚಂದ್ರಕಾಂತ್ ನಂದಾರೆಡ್ಡಿ,ಸಿಡ್ಬ್ಲೂಸಿ ಅಧ್ಯಕ್ಷ ವಿಜಯ ಲಕ್ಷ್ಮೀ,ಪಿಎಸ್ ಐ ಸಿದ್ದರಾಮೇಶ್ವರ, ಸರಸ್ವತಿ, ಸಂಪನ್ಮೂಲ ವ್ಯಕ್ತಿ ಹೆಚ್ ಸಿ ರಾಘವೇಂದ್ರ, ಸಿ. ತಿಪ್ಪೇಶಪ್ಪ, ಹನುಮಂತ ರೆಡ್ಡಿ, ರಾಮಕೃಷ್ಣ,ಪಂಪಾಪತಿ ಕಾರ್ಯಗಾರದಲ್ಲಿ ಬಳ್ಳಾರಿ, ಬೆಂಗಳೂರು, ವಿಜಯಪುರ, ಹೊಸಪೇಟೆ, ಕೊಡಗು, ಸೇರಿದಂತೆ ಇತರೆ ಜಿಲ್ಲೆಯಿಂದ ಹಲವರು ಭಾಗವಹಿಸಿದ್ದರು.