ಬೆಳಗಾಯಿತು ವಾರ್ತೆ | www.belagayithu.in
ಬಳ್ಳಾರಿ : ಜೂನ್ ಮೊದಲನೇ ವಾರದಲ್ಲಿ ನಡೆಯುವ ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಕಾಂಡ್ರ ಸತೀಶ್ ಕುಮಾರ್ ಮೇ.16 ರಂದು ನಾಮಪತ್ರವನ್ನು ಸಲ್ಲಿಸಿದರು.
ಸತೀಶ್ ರವರು ಗುಲ್ಬರ್ಗ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಬಳ್ಳಾರಿ ನಗರದ ಹಲವು ಕಾಲೇಜುಗಳ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಹಲವಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಿರುತ್ತಾರೆ. ಅಲ್ಲದೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಿರುವ ತೊಂದರೆಗಳನ್ನು ನಿವಾರಿಸಲು ಸಹ ಬಹಳಷ್ಟು ಕೆಲಸ ಮಾಡಿದ್ದಾರೆ. ಈ ಎಲ್ಲಾ ಕಾರ್ಯ ಚಟುವಟಿಕೆ ಆಧಾರದ ಮೇಲೆ ಅವರು ಈಶಾನ್ಯ ಪದವೀಧರ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸುವ ಕೊನೆಯ ದಿನದಂದು ತಮ್ಮ ಬೆಂಬಲಿಗರೊಂದಿಗೆ ತೆರಳಿ ವಿಭಾಗಿಯ ಆಯುಕ್ತರಿಗೆ ನಾಮಪತ್ರವನ್ನು ಸಲ್ಲಿಸಿದರು.
ಇದಕ್ಕೂ ಮುಂಚೆ ವಿವಿಯ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಕಾಂಡ್ರ ಸತೀಶ್ ಕುಮಾರ್ ರವರು 12 ಗಂಟೆ 19 ನಿಮಿಷಕ್ಕೆ ಪದವಿಧರ ಮತದಾರರು ಜೊತೆಗೆ ಗುಲ್ಬರ್ಗ ವಿಭಾಗಿಯ ಆಯುಕ್ತರಿಗೆ ನಾಮ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಶೋಕ್ ಕಾಳೆ, ಪ್ರೀತಿ ಬಿರಾದಾರ್, ಆನಂದ್ ಕುಮಾರ್, ಶೇಕ್ ಸಯ್ಯದ್, ಸೇರಿದಂತೆ ಅವರ ಅಪಾರ ಬೆಂಬಲಿಗರು ಉಪಸ್ಥಿತರಿದ್ದರು.