24.5 C
Bellary
Tuesday, June 11, 2024

Localpin

spot_img

ಸಿರಿಗನ್ನಡ ವೇದಿಕೆ ನೂತನ ಕಾರ್ಯಕಾರಿ ಸಮಿತಿ

ಬೆಳಗಾಯಿತು ವಾರ್ತೆ| www.belagayithu.in
ಕೊಪ್ಪಳ: ಸಿರಿಗನ್ನಡ ವೇದಿಕೆ ರಾಜ್ಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಜಿ.ಎಸ್.ಗೋನಾಳ್ ರವರನ್ನು ಸಿರಿಗನ್ನಡ ವೇದಿಕೆಯ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆಮಾಡಲಾಯಿತು. ಕಾರ್ಯಾಧ್ಯಕ್ಷರಾಗಿ ಡಾ.ಎಂ.ಜಿ.ದೇಶಪಾಂಡೆ, ಗೌರವಾಧ್ಯಕ್ಷರಾಗಿ ಡಾ.ಎಂ.ಆರ್.ನಾಗರಾಜರಾವ್, ಉಪಾಧ್ಯಕ್ಷರಾಗಿ ಡಾ.ಸೌಗಂಧಿಕಾ, ವಿ.ಜೋಯಿಸ್, ಸಿರಿಗನ್ನಡ ಮಹಿಳಾ ವೇದಿಕೆ ರಾಜ್ಯಾಧ್ಯಕ್ಷರಾಗಿ ರಜಿನಿ ಆಶೋಕ್ ಜೀರಗ್ಯಾಳ, ಪ್ರಧಾನ ಕಾರ್ಯದರ್ಶಿಯಾಗಿ .ಉಮೇಶ್.ಸಿ.ಎನ್, ಖಜಾಂಚಿಯಾಗಿ .ಅನ್ನದಾನೇಶ್ ಮಾದಿನೂರು, ಕಾನೂನು ಸಲಹೆಗಾರರಾಗಿ ವಕೀಲರಾದ .ಹೆಚ್.ಗುರುಬಸಪ್ಪ ರವರುಗಳನ್ನು ಅಯ್ಕೆ ಮಾಡಲಾಗಿದ್ದು ನೂತನ ಕಾರ್ಯಕಾರಿ ಸಮಿತಿ ನೋಂದಣಿಯಾಗಿ ಅಸ್ಥಿತ್ವಕ್ಕೆ ಬಂದಿದ್ದು, ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಬೆಂಗಳೂರಿನಲ್ಲಿ ಶೀಘ್ರದಲ್ಲಿ ಆಯೋಜಿಸುವುದಾಗಿ ನೂತನ ರಾಜ್ಯಾಧ್ಯಕ್ಷರಾದ .ಜಿ.ಎಸ್.ಗೋನಾಳ್ ರವರು ತಿಳಿಸಿದ್ದಾರೆ.
ಸಿರಿಗನ್ನಡ ವೇದಿಕೆ ಜಿಲ್ಲಾವಾರು,ತಾಲ್ಲೂಕು,‌ಹೋಬಳಿ, ಶಾಖೆಗಳಲ್ಲಿನ ಶಾಖೆಗಳನ್ನು ಮತ್ತಷ್ಟು ಬಲಪಡಿಸುವುದಾಗಿ ತೀರ್ಮಾನಿಸಲಾಯಿತು.ಈ ನೋಂದಣಿ ಸಂದರ್ಭದಲ್ಲಿ ಸಿರಿಗನ್ನಡ ಬಳಗದ ಮಾಲತಿ.ಎಸ್. ಆರಾಧ್ಯ, .ಕೆ.ವೇಣುಗೋಪಾಲ್ ಹಾಗೂ ಇನ್ನೀತರರು ಉಪಸ್ಥಿತರಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles