29.1 C
Bellary
Monday, April 22, 2024

Localpin

spot_img

ವೀರಶೈವ ಲಿಂಗಾಯಿತ ಧರ್ಮವನ್ನು ಉತುಂಗಕ್ಕೆ ತಂದವರು ಶ್ರೀ ಯಡಿಯೂರು ಸಿದ್ದಲಿಂಗೇಶ್ವರ ಶ್ರೀಗಳು

ಹರಪನಹಳ್ಳಿ: ದೇಶ ಸಂಚಾರ ಮಾಡಿ ವೀರಶೈವ ಲಿಂಗಾಯಿತ ಧರ್ಮವನ್ನು ಉತುಂಗಕ್ಕೆ ತಂದವರು ಶ್ರೀ ಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿಗಳು ಎಂದು ಅರಸೀಕೆರೆ ಶ್ರೀ ಕೋಲಶಾಂತೇಶ್ವರ ಮಠದ ಶ್ರೀ ಶಾಂತಲಿಂಗ ದೇಶಿಕೇಂದ್ರ ಮಹಾ ಸ್ವಾಮಿಗಳು ತಿಳಿಸಿದರು.

ತಾಲೂಕಿನ ಅರಸೀಕೆರೆ ಗ್ರಾಮದ ಕೋಲಶಾಂತೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯ 25ನೇ ವರ್ಷದ ರಜತ ಮಹೋತ್ಸವ ಹಾಗೂ ವೈ.ಅಣ್ಣಪ್ಪ ಪದವಿ ಕಾಲೇಜ್ ಉದ್ಘಾಟನಾ ಸಮಾರಂಭದ ಕಾರ್ಯಕ್ರಮ ಯಶಸ್ವಿಗೊಂಡ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಯಶಸ್ವಿಗೆ ಕಾರಣ ೀಬೂತರಾದ ರಜತ ಮಹೋತ್ಸವದ ವಿವಿಧ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಸೇರಿದಂತೆ ಸದಸ್ಯರುಗಳಿಗೆ ಶ್ರೀ ಕೋಲಶಾಂತೇಶ್ವರ ಮಠದ ಶ್ರೀ ಶಾಂತಲಿಂಗ ದೇಶಿಕೇಂದ್ರ ಮಹಾ ಸ್ವಾಮಿಗಳು ಸನ್ಮಾನಿಸಿ ಗೌರವಿಸಿದ ಬಳಿಕ ಮಾತನಾಡಿದ ಅವರು ಸಮಾಜವನ್ನು ಜಾತ್ಯಾತೀತವಾಗಿ ಜಾಗೃತಿ ಗೊಳಿಸಿದವರು ಶ್ರೀ ಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿಗಳು ಎಂದರು.

ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಶ್ರೀ ಯಡಿಯೂರು ಸಿದ್ಧಲಿಂಗೇಶ್ವರ ಪರಂಪರೆಯ ಮಠಗಳು ಹೆಚ್ಚು ಇವೆ ಅದರಲ್ಲಿ ಅರಸೀಕರೆ, ಕೊಟ್ಟೂರು, ನೀಲಗುಂದ ಮಠ ಹೌದು ಎಂದ ಅವರು ಈ ಕಾರ್ಯಕ್ರಮದ ಯಶಸ್ವಿಗೆ ಕಾರಣ ೀಬೂತರಾದ ಅರಸೀಕರೆ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮದ ಜನತೆಗೆ ಹಾಗೂ ಮಠದ ಭಕ್ತ ಸಮೂಹಕ್ಕೆ ಶ್ರೀಗಳು ಧನ್ಯವಾದಗಳನ್ನು ಸಲ್ಲಿಸಿದರು.

ಇದೇ ವೇಳೆ ಯುವ ಮುಖಂಡ ವೈ.ಡಿ.ಅಣ್ಣಪ್ಪ ಮತ್ತು ತಾಲೂಕು ಪಂಚಾಯ್ತಿ ಮಾಜಿ ಸದಸ್ಯೆ ವಿಶಾಲಾಕ್ಷಮ್ಮ ಅವರು ರಜತ ಮಹೋತ್ಸವ ಕಾರ್ಯಕ್ರಮಕ್ಕೆ ತಲಾ 75 ಸಾವಿರ ರೂಪಾಯಿ ದೇಣಿಗೆ ನೀಡಿದರು.

ಈ ಸಂಧರ್ಭದಲ್ಲಿ ಮುಖಂಡ ಎ.ಬಿ.ಪ್ರಶಾಂತ್ ಪಾಟೀಲ್, ಭೂದಾನಿ ನೆಲಗೊಂಡನಹಳ್ಳಿ ಭರತ್, ಗ್ರಾ.ಪಂ ಅಧ್ಯಕ್ಷ ಇನಾಯಿತ್‍ವುಲ್ಲಾ, ಉಪಾಧ್ಯಕ್ಷೆ ಲಕ್ಷ್ಮೀ ವೆಂಕಟೇಶ್, ಎ.ಎಂ.ವಿಶ್ವನಾಥಯ್ಯ, ಐ.ಸಲಾಂಸಾಬ್, ಹೆಚ್.ನಾಗರಾಜಪ್ಪ, ತೌಡೂರ್ ಮಂಜಯ್ಯ, ನಿವೃತ್ತ ಶಿಕ್ಷಕ ಪ್ರಕಾಶ್, ಪೂಜಾರ್ ಮರಿಯಪ್ಪ, ಚಂದ್ರಪ್ಪ, ಕ್ಯಾರಕಟ್ಟಿ ಶಿವಯೋಗಿ, ಬೇವಿನಹಳ್ಳಿ ಕೆಂಚನಗೌಡ, ಕವಲಹಳ್ಳಿ ಭರ್ಮಪ್ಪ, ನಿರಂಜನ, ರಾಜಾನಾಯ್ಕ್, ಪಿಡಿಒ ಅಂಜಿನಪ್ಪ, ಎ.ಹೆಚ್,ಪಂಪಣ್ಣ, ಹೊಸಕೋಟೆ ನಾಗರಾಜ್ ಸೇರಿದಂತೆ ಕಾಲೇಜು ಆಡಳಿತ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles