ಮರಿಯಮ್ಮನಹಳ್ಳಿ:ಪಟ್ಟಣದ ಸಮೀಪದ ಲಡಕನಬಾವಿ ಗ್ರಾಮದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದವರ ಮೇಲೆ ದಾಳಿಮಾಡಿದ ಪ್ರಕರಣ ದಾಖಲಾಗಿದೆ.
ಖಚಿತ ಮಾಹಿತಿಮೇರೆಗೆ ಪಟ್ಟಣದ ಪಿ.ಎಸ್.ಐ.ಮೌನೇಶ ರಾಥೋಡ ಮತ್ತು ಸಿಬ್ಬಂದಿಗಳು,ಗ್ರಾಮದ ವೆಂಕಟೇಶಪ್ಪ ಎಂಬುವವರ ಹಿತ್ತಲಪ್ಲಾಟಿನಲ್ಲಿ ಬೀದಿದೀಪದ ಕೆಳಗೆ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ ವೇಳೆ ದಾಳಿ ನಡೆಸಿದ ವೇಳೆ ಪರಾರಿಯಾಗಿದ್ದಾರೆ,ಜೂಜಾಟದಲ್ಲಿ ತೊಡಗಿದವರಲ್ಲಿ ಸಿಕ್ಕವರಿಂದ 5600ರೂ.ಗಳು ಹಾಗು ಇಸ್ಪೀಟ್ ಎಲೆಗಳನ್ನು ವಶಪಡಿಸಿ ಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
“ಮಟ್ಕಾದಾಳಿ”
ಪಟ್ಟಣದ ಸರ್ಕಾರಿಶಾಲೆಯ ಬಳಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ 11ನೇ ವಾರ್ಡಿನ ನನ್ನುಸಾಬ್ ಎಂಬುವವರನ್ನು ಬಂಧಿಸಿ,3050ರೂ. ಮತ್ತು ಮಟ್ಕಪಟ್ಟಿಯನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ ಎಂದು ಪಿ.ಎಸ್.ಐ.ಮೌನೇಶ್ ರಾಥೋಡ ತಿಳಿಸಿದರು.