34 C
Bellary
Thursday, May 30, 2024

Localpin

spot_img

ಊರಮ್ಮ ದೇವಿಯ ಜಾತ್ರೆ

ಬೆಳಗಾಯಿತು ವಾರ್ತೆ | www.belagayithu.in
ಹರಪನಹಳ್ಳಿ: ತಾಲೂಕಿನ ಹಲುವಾಗಲು ಮತ್ತು ಕಣವಿ ಗ್ರಾಮಗಳ ಗ್ರಾಮ ದೇವತೆ 66 ಹಳ್ಳಿಯ ಒಡತಿ ಶ್ರೀ ಊರಮ್ಮ ದೇವಿಯ ಜಾತ್ರಾ ಮಹೋತ್ಸವ ಮೇ.13 ರಿಂದ 17ರವರೆಗೆ ಐದು ದಿನಗಳ ಕಾಲ ಅತ್ಯಂತ ವಿಜೃಂಬಣೆಯಿAದ ಜರುಗಲಿದೆ.
ಮೆ.14 , ಇಂದು ಬೆಳಿಗ್ಗೆ 8 ಗಂಟೆಗೆ ದೇವಿಯ ಅಲಂಕಾರ, ಪುಸ್ಪಾರ್ಚನೆ, 9 ಗಂಟೆಗೆ ದೃಷ್ಠಿ ಇಡುವುದು, ಮಾಂಗಲ್ಯಧಾರಣೆ, ಪೂಜೆ, 11 ಗಂಟೆಗೆ ಉಡಿ ತುಂಬುವ ಕಾರ್ಯಕ್ರಮ, ರಾತ್ರಿ 10 ಗಂಟೆಗೆ ಗ್ರಾಮದೊಳಗೆ ದೇವಿಯು ಸಕಲ ವಾದ್ಯಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಯೊಂದಿಗೆ ಚೌತಮನೆ ಕಟ್ಟಿಗೆ ಪ್ರತಿಷ್ಟಾಪನೆಗೊಂಡಿದೆ
ಮೆ.15 ರಂದು ಬುಧವಾರ ಬೆಳಿಗ್ಗೆ 6 ಗಂಟೆಗೆ ಗ್ರಾಮದ ಸುತ್ತ ಚರಗ ಹೊಡೆಯುವುದು, ದೇವಿಯ ಸನ್ನಿದಿಯಲ್ಲಿ ರಾಣಿಗರಿಂದ ವಿವಿಧ ವಿನೋಧಾವಳಿಗಳು, ಶ್ರೀದೇವಿಯ ಗುಣಗಾನ, ಹಾಸ್ಯಗಾರರಿಂದ ನರ್ತನ, ಸಂಜೆ 4 ಗಂಟೆಗೆ ರೈತರಿಗೆ ಹುಲುಸು ಕೊಡುವುದು, ರಾತ್ರಿ 9 ಗಂಟೆಗೆ ರಸಮಂಜರಿ ಕಾರ್ಯಕ್ರಮ ಜರುಗವವುದು.
ಮೆ.16 ರಂದು ಶ್ರೀದೇವಿಯ ಸ್ತೋತ್ರ, ಮದ್ಯಾಹ್ನ 3 ಗಂಟೆಗೆ ಬನ್ನಿಮಂಟಪಕ್ಕೆ ದೊಡ್ಡ ಬಂಡಿ ರಥದ ಮೂಲಕ ಸಕಲ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಗಡಿ ಜಾತ್ರೆಗೆ ಹೋಗುವುದು, ನಂತರ ಬನ್ನಿ ಮಂಟಪದಲ್ಲಿ ಶ್ರೀದೇವಿಯು ಗ್ರಾಮಸ್ಥರಿಗೆ ಅಭಯ ಕೊಡುವುದು.
ಮೆ.17 ರಂದು ಬೆಳಿಗ್ಗೆ 9 ಗಂಟೆಗೆ ಶ್ರೀದೇವಿಯ ಪುನಾರ್ಚನೆ ಮತ್ತು ಮಹಾ ಮಂಗಳಾರತಿ ನೆರವೇರುವುದು.
ದೇವಿಗೆ ಮುಡಿಪು, ಕಾಣಿಕೆ ಸಲ್ಲಿಸುವವರು ಊರಮ್ಮದೇವಿ ಸಮಿತಿಯವರಿಗೆ ಒಪ್ಪಿಸಿ ರಸೀದಿ ಪಡೆಯಬೇಕು ಎಂದು ಜಾತ್ರಾ ಸಮಿತಿಯವರು ತಿಳಿಸಿದ್ದಾರೆ.
ಗ್ರಾಮದಲ್ಲಿ 9 ವರ್ಷಗಳ ನಂತರ ನಡೆಯುತ್ತಿರುವ ಊರಮ್ಮದೇವಿಯ ಜಾತ್ರಾ ಮಹೋತ್ಸವಕ್ಕೆ ಎಲ್ಲಾ ರೀತಿಯ ಸಿದ್ದತೆ ಕೈಗೊಳ್ಳಲಾಗಿದೆ, ಗ್ರಾಮದ ನಿಜಲಿಂಗಪ್ಪ ರಂಗಮAದಿರದಲ್ಲಿ ಬೃಹತ್ ಆಕಾರದ ಮಹಾದ್ವಾರ ನಿರ್ಮಿಸಲಾಗಿದ್ದು ನೋಡುಗರ ಗಮನ ಸೆಳೆಯುತ್ತಿದೆ, ಗ್ರಾಮವು ವಿದ್ಯುತ್ ದೀಪಾಲಂಕಾರದಿAದ ಕಂಗೊಳಿಸುತ್ತಿದ್ದು, ಊರಲ್ಲಿ ಸಂಭ್ರಮ ಮನೆ ಮಾಡಿದೆ.
ಹೀಗೆ ಹಲುವಾಗಲು, ಕಣವಿ, ಗರ್ಭಗುಡಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಅತ್ಯಂತ ಸಂಭ್ರಮದಿAದ ಜನಪದ ಸೊಗಡಿನ ಊರಮ್ಮದೇವಿ ಜಾತ್ರೆಯನ್ನು ಆಚರಿಸುತ್ತಿದ್ದಾರೆ.
66 ಹಳ್ಳಿಯ ಒಡತಿ ಊರಮ್ಮ ದೇವಿಯ ಇತಿಹಾಸ
ಮಲೆನಾಡಿನ ತುಂಗಭದ್ರ ತೀರದಲ್ಲಿ ಬಡಿಗೇರ ವ್ಯಕ್ತಿ ಯೊಬ್ಬ ಕಟ್ಟಿಗೆಯಿಂದ ಸೃಷ್ಠಿಸಿದ ಎರಡು ದೇವತೆಗಳುಳ್ಳ ಪೆಟ್ಟಿಗೆ ತುಂಗಭದ್ರ ನದಿಯಲ್ಲಿ ತೇಲುತ್ತಾ ಬಂದು ಗರ್ಭಗುಡಿ ಗ್ರಾಮದ ನದಿ ತಟದಲ್ಲಿ ನಿಂತಾಗ ಬಡಿಗೇರ ವ್ಯಕ್ತಿ ಮೀನುಗಾರರ ಸಹಾಯದಿಂದ ದಡಕ್ಕೆ ತರುತ್ತಾನೆ. ನಂತರ ದನಕಾಯುವ ಹುಡುಗನ ಮೈಯಲ್ಲಿ ದೇವಿ ಮೈದುಂಬಿ ತನ್ನ ಇತಿಹಾಸ ತಿಳಿಸುತ್ತಾಳೆ.
ಆಗ ಗರ್ಭಗುಡಿ ಗ್ರಾಮದಲ್ಲಿ ಮೊದಲನೆ ಪೂಜೆ ನಡೆಯುತ್ತದೆ, ಆದ್ದರಿಂದ ಗರ್ಭಗುಡಿ ಗ್ರಾಮವೇ ದೇವಿಯ ತವರು ಮನೆ ಎಂದು ಹಿರಿಯರ ಹೇಳಿಕೆಯಾಗಿದೆ.
ಗರ್ಭಗುಡಿ ಗ್ರಾಮದಿಂದ ದೇವಿಮೂರ್ತಿಯುಳ್ಳ ಪೆಟ್ಟಿಗೆ ಕಳ್ಳತನವಾಗಿ, ದಾವಣಗೆರೆ ತಾಲೂಕಿನ ಮಾಗನಹಳ್ಳಿ ಮತ್ತು ಬೇತೂರು ಸಮೀಪದ ಗಡಿ ಬೇವಿನಮರದ ಸ್ಥಳದಲ್ಲಿ ತಂದು ಬಿಡುತ್ತಾರೆ.ಆಗ ಮಾಗನಹಳ್ಳಿ ಮತ್ತು ಬೇತೂರು ಗ್ರಾಮದವರು ಇದು ನಮ್ಮದೆಂದು ವ್ಯಾಜ್ಯ ಮಾಡಿದಾಗ ಬಾಲಕನೊಬ್ಬ ಮೈಯಲ್ಲಿ ಅವತರಿಸಿದ ದೇವಿ ನಾನು ಗರ್ಭಗುಡಿ ಗ್ರಾಮದ ಮಗಳೆಂದು ಹೇಳುತ್ತಾಳೆ ನಂತರ ಮಾಗನಹಳ್ಳಿಯವರು, ಗರ್ಭಗುಡಿಯವರು ಇತರರು ನಮಗೆ ಸೇರಿದ ದೇವಿ ಎಂದು ವಾದ ಮಾಡುತ್ತಿರುವಾಗ ಅಂತಮವಾಗಿ ನಾನು ಎಲ್ಲಿಯೂ ಇರುವುದಿಲ್ಲ 66 ಹಳ್ಳಿಗಳ ಒಡತಿ ನನ್ನ ಕರೆದು ಎಲ್ಲರೂ ಪೂಜೆ ಪುನಸ್ಕಾರ ಮಾಡಿರೆಂದು ಹೇಳುತ್ತಾಳೆ, ಅಲ್ಲಿಂದ ಇಲ್ಲಿಯವರೆಗೂ ಯಾವ ವಾಹನವಿಲ್ಲದೆ ತಲೆಯ ಮೇಲೆ ಹೊತ್ತು ದೇವಿಯನ್ನು ನಡೆದುಕೊಂಡೆ ಊರಿಂದೂರಿಗೆ ಹೋಗುವ ದೇವಿಯಾಗಿದ್ದಾಳೆ ಹೀಗೆ ಜನಪದ ಕಥೆ ಯನ್ನು ಹಲುವಾಗಲು ಸಣ್ಣಿಂಗಪ್ಪ ಎನ್ನುವವರು ಹೇಳುತ್ತಾ ಹೋಗುತ್ತಾರೆ.
ಮಾಗನಹಳ್ಳಿ ಗ್ರಾಮದಿಂದ ಹಲುವಾಗಲು ಬಳಿ ಇರುವ ಗರ್ಭಗುಡಿ ಗ್ರಾಮದವರೆಗೆ 66 ಹಳ್ಳಿಗಳಲ್ಲಿ ಈ ದೇವಿಯ ಭಕ್ತರಿದ್ದಾರೆ. ಗರ್ಭಗುಡಿ ದೇವಿಯ ತವರು ಮನೆಯಾದರೆ, ಹರಿಹರ ಗಂಡನ ಮನೆ ಎನಿಸಿಕೊಂಡಿದೆ.
ಇAತಹ ಜನಪದ ಇತಿಹಾಸ ಯುಳ್ಳ ಊರಮ್ಮದೇವಿ ಜಾತ್ರೆಯನ್ನು ಹಲುವಾಗಲು ಗ್ರಾಮದಲ್ಲಿ ಮೆ.13 ರಿಂದ 17 ರವರೆಗೆ ಹಮ್ಮಿಕೊಳ್ಳಲಾಗಿದೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles