ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಟಾಪರ್ ಗಳಿಗೆ ಡಿಕೆ ಶಿವಕುಮಾರ್ ಸನ್ಮಾನ

ಬೆಳಗಾಯಿತು ವಾರ್ತೆ | www.belagayithu.in
ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಟಾಪರ್ ಗಳಿಗೆ ಡಿಕೆ ಶಿವಕುಮಾರ್ ಸನ್ಮಾನ, ಪರೀಕ್ಷೆಯ ಫಲಿತಾಂಶದಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಡಿಸಿಎಂ ಡಿಕೆ ಶಿವಕುಮಾರ್ ಇಂದು ಸನ್ಮಾನಿಸಿ ಪ್ರೋತ್ಸಾಹ ಧನ ನೀಡಿದರು. ಇತ್ತೀಚೆಗೆ ಪ್ರಕಟಗೊಂಡ SSLC ಪರೀಕ್ಷೆಯ ಫಲಿತಾಂಶದಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದ ಬಾಗಲಕೋಟೆಯ ವಿದ್ಯಾರ್ಥಿನಿ ಅಂಕಿತಾ ಅವರನ್ನು ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸನ್ಮಾನಿಸಿದರು.
ಅಲ್ಲದೆ ವಿದ್ಯಾರ್ಥಿನಿಗೆ ಪ್ರೋತ್ಸಾಹ ಧನವಾಗಿ 5 ಲಕ್ಷರೂ ಬಹುಮಾನ ನೀಡಿದರು. ಅಂಕಿತಾ ಮಾತ್ರವಲ್ಲದೇ ಮಂಡ್ಯದ ವಿದ್ಯಾರ್ಥಿ ನವನೀತ್ ಅವರನ್ನೂ ಸನ್ಮಾನಿಸಿದ ಡಿಕೆಶಿ ಅವರಿಗೆ 2 ಲಕ್ಷ ರೂ ಹಣವನ್ನು ಬಹುಮಾನವಾಗಿ ನೀಡಿದರು.
ಈ ವೇಳೆ “ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಮೊದಲ ಸ್ಥಾನ ಪಡೆದಿರುವುದು ನನಗೆ ಬಹಳ ಸಂತೋಷ ತಂದಿದೆ. ನಿನಗೆ ಶುಭವಾಗಲಿ. ಬೆಂಗಳೂರಿಗೆ ಬಂದಾಗ ತಮ್ಮ ಮನೆಗೆ ಬಾ” ಎಂದು ಡಿಸಿಎಂ ಅಂಕಿತಾರನ್ನು ಆಹ್ವಾನಿಸಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles