29.8 C
Bellary
Sunday, April 14, 2024

Localpin

spot_img

ಸಿರುಗುಪ್ಪ: ಮತದಾನ ಜಾಗೃತಿಗೆ ಸೆಲ್ಫಿ ಬೂತ್

ಬೆಳಗಾಯಿತು ವಾರ್ತೆ |www.belagayithu.in
ಬಳ್ಳಾರಿ
:ಯುವ ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸಿ ಮತದಾನ ಪ್ರಮಾಣ ಹೆಚ್ಚಿಸಲು ಸಿರುಗುಪ್ಪ ನಗರಸಭೆ ವತಿಯಿಂದ ಸೆಲ್ಫಿ ಬೂತ್ ಪಾಯಿಂಟ್ ವಿಶೇಷ ಚಟುವಟಿಕೆ ಆಯೋಜಿಸಲಾಗಿದೆ ಎಂದು ಸಿರುಗುಪ್ಪ ನಗರಸಭೆ ಪೌರಾಯುಕ್ತ ಗುರುಪ್ರಸಾದ್ ಅವರು ಹೇಳಿದರು.
ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ಇವರ ನಿರ್ದೇಶನದಂತೆ ತಾಲ್ಲೂಕು ಆಡಳಿತ, ತಾಲ್ಲೂಕು ಸ್ವೀಪ್ ಸಮಿತಿ ಇವರ ವತಿಯಿಂದ ಸಿರುಗುಪ್ಪ ನಗರಸಭೆ ಕಾರ್ಯಾಲಯ ಆವರಣದಲ್ಲಿ ಮಂಗಳವಾರ ಸೆಲ್ಫಿ ಬೂತ್ ಪಾಯಿಂಟ್ ಮೂಲಕ ಮತದಾನ ಜಾಗೃತಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಿರುಗುಪ್ಪ ನಗರ ಪ್ರದೇಶದ ಸಾರ್ವಜನಿಕ ಸ್ಥಳಗಳಲ್ಲಿ ವಿವಿಧೆಡೆ ಸೆಲ್ಪಿ ಬೂತ್ ಅಳವಡಿಸಿ ಯುವ ಮತದಾರರು ಸೆಲ್ಫಿ ಫೆÇೀಟೊ ತೆಗೆಸಿಕೊಳ್ಳಲು ಅನುಕೂಲ ಮಾಡಲಾಗುವುದು. ಸಾಮಾಜಿಕ ಜಾಲತಾಣ ಪ್ರಭಾವಿ ಮಾಧ್ಯಮ ಆಗಿರುವುದರಿಂದ ಹೆಚ್ಚು ಜನರನ್ನು ತಲುಪಲಿದೆ. ಇದರಿಂದ ಮತದಾನ ಜಾಗೃತಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು.
ಯುವಕರು ಸೆಲ್ಫಿ ಬೂತ್‍ನಲ್ಲಿ ಸೆಲ್ಫಿ ತೆಗೆಸಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳ ಮೂಲಕ ಸೆಲ್ಫಿ ಫೋಟೊದೊಂದಿಗೆ ಮತದಾನ ಜಾಗೃತಿ ಮೂಡಿಸಲು ನೆರವಾಗಲಿದೆ. ಒಬ್ಬರಿಂದ ಮತ್ತೊಬ್ಬರು ಸೆಲ್ಪಿ ತೆಗೆಸಿಕೊಂಡು ಪ್ರಚಾರ ಕೈಗೊಳ್ಳುತ್ತಾರೆ ಎಂದರು.
ಈ ವೇಳೆ ಎಲ್ಲಾ ಅಧಿಕಾರಿಗಳು ಸೆಲ್ಫಿ ಬೂತ್‍ನಲ್ಲಿ ನಿಂತು ಪೋಟೋ ಕ್ಲಿಕ್ಕಿಸಿಕೊಂಡರು.
ಈ ಸಂದರ್ಭದಲ್ಲಿ ಸಿರುಗುಪ್ಪ ನಗರಸಭೆಯ ಎಇಇ ಗಂಗಾಧರಗೌಡ, ಸಿಎಒ ಅಮರೇಶ್, ಎಸ್‍ಐ ರಂಗಸ್ವಾಮಿ, ಆರ್‍ಐ ರಾಜಭಕ್ಷಿ ಸೇರಿದಂತೆ ಸಿಬ್ಬಂದಿಗಳು, ಪೌರ ಕಾರ್ಮಿಕರು, ಮತ್ತೀತರರು ಹಾಜರಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles