37.6 C
Bellary
Sunday, April 14, 2024

Localpin

spot_img

ಮಹಿಳೆಯರನ್ನು ಗೌರವಿಸಿದರೆ ಜಗತ್ತನ್ನೆ ಗೌರವಿಸಿದ ಹಾಗೆ


ಬೆಳಗಾಯಿತು ವಾರ್ತೆ
ಬಳ್ಳಾರಿ: ಮಹಿಳೆ ಅಬಲೆ ಅಲ್ಲ ಸಬಲೆ.
ಇಂದಿನ ದಿನದಲ್ಲಿ ಮಹಿಳೆ ಎಲ್ಲಾ ರೀತಿಯ ಜವಾಬ್ದಾರಿಯನ್ನು ನಿಭಾಯಿಸ ಬಲ್ಲ ಶಕ್ತಿ ಅವರಲ್ಲಿದೆ. ಹೆಣ್ಣನ್ನು ನಾವು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ವಾಗಿದೆ. ಮಹಿಳೆಯರನ್ನು ಗೌರವಿಸಿದರೆ ಇಡೀ ಜಗತ್ತಿಗೆ ಗೌರವಿಸಿದ ಹಾಗೆ ಎಂದು ಪ್ರಧಾನ ಸತ್ರ ನ್ಯಾಯಾಧೀಶರಾದ ಎಸ್ .ಎಮ್ ಪುಷ್ಪಾಂಜಲಿ ಅವರು ಹೇಳಿದರು.

ನಗರದ ತಾಳೂರು ರಸ್ತೆಯಲ್ಲಿ ಇರುವ ನೂತನ ನ್ಯಾಯಾಲಯ ಸಂಕೀರ್ಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಮಹಿಳಾ ವಕೀಲರ ಸಂಘ ಇವರ ಸಹಯೋಜದೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆ ಎಂದರೆ ಅದು ಒಂದು ಶಕ್ತಿ. ಇಂದಿನ ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರು ಮುಂದಿದ್ದು, ಪುರುಷರ ಸಮಾನವಾಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಇನ್ನು ಹೆಚ್ಚಾಗಿ ಮಹಿಳೆಯರು ಕೆವಲ ಮನೆಯಲ್ಲಿಯೇ ಸಿಮೀತವಾಗದೆ ಹೊರಗಿನ ಪ್ರಪಂಚಕ್ಕೆ ಬರಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಕೆ. ಎರಿಗೌಡ, ನಾಲ್ಕನೇ ಹಿರಿಯ ಹೆಚ್ಚುವರಿ ನ್ಯಾಯಾಧೀಶರಾದ ವಿಮಲನಂದಗಾವ್, ಒಂದನೇ ಹಿರಿಯ ಹೆಚ್ಚುವರಿ ನ್ಯಾಯಾಧೀಶರಾದ ಅಪರ್ಣ, ಎರಡನೇ ಹಿರಿಯ ಹೆಚ್ಚುವರಿ ನ್ಯಾಯಾಧೀಶರಾದ ನಸರತ್ ಮುಕ್ತಾರ್ ಅಹಮ್ಮದ್ ಖಾನ್,
ಐದನೇ ಹಿರಿಯ ಹೆಚ್ಚುವರಿ ನ್ಯಾಯಾಧೀಶರಾದ ರೂಪಾ, ಸಂಘದ ಉಪಾಧ್ಯಕ್ಷ ನಾಗರಾಜ ನಾಯಕ್, ಖಜಾಂಚಿ ಕೆ ಎಲ್ ವೀರೇಶ್, ವಕೀಲರಾದ ತ್ರಿವೇಣಿ ಪತ್ತಾರ ಸೇರಿದಂತೆ ವಕೀಲ ವೃಂದದವರು ಹಾಜರಿದ್ದರು.

ವಕೀಲರಾದ ಕಾಮಾಕ್ಷಿ ಅವರು ಭಾವಗೀತೆಯನ್ನು ಹಾಡಿದರು.
ಇದೇ ಸಂದರ್ಭದಲ್ಲಿ ಮಹಿಳಾ ದಿನ ಅಂಗವಾಗಿ ಏರ್ಪಡಿಸಿದ್ದ ಕ್ರೀಡೆಯಲ್ಲಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು

ಬಳ್ಳಾರಿ ಬೆಳಗಾಯಿತು ಪತ್ರಿಕೆ ವತಿಯಿಂದ
ಜಂಟಿ ಕಾರ್ಯದರ್ಶಿ ತ್ರಿವೇಣಿ ಪತ್ತಾರ್ ಮತ್ತು ಹಿರಿಯ ವಕೀಲರಾದ ಮುಕ್ತಬಾಯಿ ಅವರಿಗೆ ಸನ್ಮಾನ ಮಾಡಲಾಯಿತು
.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles