ಬೆಳಗಾಯಿತು ವಾರ್ತೆ
ಬಳ್ಳಾರಿ: ನಗರದ ಇನ್ ಪ್ರೆಂಟಿ ರಸ್ತೆಯಲ್ಲಿ ನೂತನವಾಗಿ ಪ್ರಾರಂಭವಾಗಿರುವ ಪಿಎಂಜೆ ಜ್ಯೂವೆಲ್ಸ್ ಮಳಿಗೆಯನ್ನು ಶುಕ್ರವಾರ ನಗರ ಶಾಸಕ ನಾರಾ ಭಾರತ್ ರೆಡ್ಡಿ ಅವರು ಉದ್ಘಾಟನೆ ಮಾಡಿದರು.
ನಂತರ ಮಳಿಗೆ ಉದ್ಘಾಟನೆ ನೇರವೇರಿಸಿ ಮಾತನಾಡಿದ ಅವರು,ಬಳ್ಳಾರಿಗೆ ಜ್ಯೂವೆಲ್ಸ್ ವಿಸ್ತರಣೆಯನ್ನು ಕಾಣುವುದು ಸಂತೋಷವಾಗಿದೆ. ಗುಣಮಟ್ಟ ಮತ್ತು ಕರಕುಶಲತೆಗೆ ಅವರ ಬದ್ಧತೆಗೆ ಅವರ ಪ್ರಶಂಸನೀಯ ಮತ್ತು ಈ ಹೊಸ ಮಳಿಗೆಯು ಬಳ್ಳಾರಿಯ ಹಾಗೂ ಸುತ್ತಮುತ್ತಲಿನ ಜನರಿಗೆ ಆಭರಣ ಖರೀದಿಗೆ ಅನುಕೂಲವಾಗಿದೆ ಎಂದರು.
ನಂತರ ಮಾತನಾಡಿದ ಪಿಎಂಜೆ ಜ್ಯೂವೆಲ್ಸ್ ಬಿಸಿನೆಸ್ ನ ಹೆಡ್ ರಾಮ್ ರೆಡ್ಡಿ ಅವರು,”ಪಿಎಂಜೆ ಜ್ಯೂವೇಲ್ ಬಳ್ಳಾರಿ ನಿವಾಸಿಗಳ ಹತ್ತಿರಕ್ಕೆ ತರಲು ಬಹಳ ಸಂತೋಷ ಹೊಂದಿದ್ದೇವೆ. ನಮ್ಮ ಬ್ರಾಂಡ್ ಸದಾ ದೃಢೀಕರಣ, ಆವಿಷ್ಕಾರ ಮತ್ತು ಅಮೂಲ್ಯ ಕ್ಷಣಗಳ ಸಂಭ್ರಮಾಚರಣೆಯಲ್ಲಿ ಸದಾ ಸನ್ನದ್ಧವಾಗಿರುತ್ತದೆ. ಹೊಸ ತಾಣದಲ್ಲಿ ನಮ್ಮ ಅತ್ಯುತ್ತಮ ಸಂಗ್ರಹಗಳ ಅಸಾಧಾರಣ ಸೇವೆಯೊಂದಿಗೆ ನಮ್ಮ ಪೋಷಕರಿಗೆ ಸೇವೆ ಒದಗಿಸುವ ನಿರೀಕ್ಷೆಯಲ್ಲಿದ್ದೇವೆ ಎಂದ ಅವರು, ಪಿಎಂಜೆ ಜ್ಯೂವೆಲ್ಸ್ ನ ಹೊಸ ಮಳಿಗೆಯು ವಿಶೇಷವಾಗಿ ರೂಪಿಸಲಾದ ಆಭರಣದ ಪ್ರದರ್ಶನ ಹೊಂದಿದ್ದು ಕ್ಲಾಸಿನ್ ಡಿಸೈನ್ ಸಮಕಾಲೀನ ಮಾಸ್ಟರ್ ಪೀಸ್ ಗಳವರೆಗೆ ವಿಸ್ತಾರ ಅಭಿರುಚಿಗಳು ಮತ್ತು ಆದ್ಯತೆಗಳಿಗೆ ಪೂರೈಸುತ್ತವೆ. ಈ ಮಳಿಗೆಯು ಚಿನ್ನ, ವಜ್ರ ಮತ್ತು ಅಮೂಲ್ಯ ಹರಳುಗಳ ವಿಸ್ತಾರ ಶ್ರೇಣಿ ಹೊಂದಿದ್ದು, ಇದು ಬ್ರಾಂಡ್ ನ ಗುಣಮಟ್ಟ, ಆವಿಷ್ಕಾರ ಮತ್ತು ಗ್ರಾಹಕರ ಬದ್ಧತೆಯನ್ನು ಪ್ರತಿಫಲಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಕೌಲ್ ಬಜಾರ್ ಠಾಣೆಯ ಪಿಎಸ್ ಐ ಸುಭಾಷ್ ಚಂದ್ರ, ಜ್ಯೂವೆಲ್ಸ್ ಬಿಸಿನೆಸ್ ಹೆಡ್ ರಾಮ್ ರೆಡ್ಡಿ, ಬಳ್ಳಾರಿಯ ಪಿಎಂಜೆ ಜ್ಯೂವೆಲ್ಸ್ ಸ್ಟೋರ್ ಮ್ಯಾನೇಜರ್ ಖಾಜಾ, ಇತರೆ ಅತಿಥಿಗಳು ಗ್ರಾಹಕರು ಹಾಜರಿದ್ದರು.
ಜನವರಿ 5ರಿಂದ 9ರವರೆಗೆ ವಿಶೇಷ ವಿವಾಹದ ಆಭರಣ ಪ್ರದರ್ಶನವನ್ನು ಬಳ್ಳಾರಿಯ ಹೊಸ ಪಿಎಂಜಿ ಮಳಿಗೆಯಲ್ಲಿ ಆಯೋಜಿಸಲಾಗುತ್ತದೆ. ಈ ಮಳಿಗೆಯ ಪ್ರಾರಂಭದಲ್ಲಿ ಮೊದಲ ಅರು ದಿನಗಳು ಎಲ್ಲ ಅಹ್ವಾನಿತರಿಗೂ ಆಶ್ಚರ್ಯಕರ ಚಿನ್ನದ ನಾಣ್ಯದ ಕೊಡುಗೆಯೂ ಇರುತ್ತದೆ.
Media contact: Harish Kumar – 9535112332




