32.4 C
Bellary
Tuesday, May 7, 2024

Localpin

spot_img

ಜ.7ಜ್ಞಾನಾಮೃತ ಟಾಲೆಂಟ್ ಸರ್ಚ್ ಪರೀಕ್ಷೆ

ಬೆಳಗಾಯಿತು ವಾರ್ತೆ
ಬಳ್ಳಾರಿ: 10ನೇತರಗತಿಯ ವಿದ್ಯಾರ್ಥಿಗಳ ಶೈಕ್ಷಣಿಕ ಉತ್ಕೃಷ್ಟತೆ ಗುರುತಿಸುವ ನಿಟ್ಟಿನಲ್ಲಿ ಜ್ಞಾನಾಮೃತ ಟಾಲೆಂಟ್ ಸರ್ಚ್ ಪರೀಕ್ಷೆಯನ್ನು ಆಯೋಜನೆ ಮಾಡಲಾಗಿದ್ದು, ಈ ಪರೀಕ್ಷೆ ಜ.07ರ ಭಾನುವಾರ 11 ಗಂಟೆಗೆ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಎಮ್. ಈ ಗೌಡರವರು ತಿಳಿಸಿದ್ದಾರೆ.

ಪರೀಕ್ಷೆಯಿಂದ ವಿದ್ಯಾರ್ಥಿಗಳ ಸಾಮರ್ಥ್ಯ ಗುರುತಿಸುವಲ್ಲಿ ಸಹಾಯಕವಾಗಿದ್ದು, ಈ ಪರೀಕ್ಷೆ ಪಿಯುಸಿಗೆ ದಾಖಲಾತಿ ಬಯಸುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಹೆಚ್ಚುವಿದ್ಯಾರ್ಥಿ ವೇತನ ಪಡೆಯುತ್ತಾರೆ.
2024-25ನೇ ಸಾಲಿನ ಪ್ರಥಮ ಪಿಯುಸಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ವಿದ್ಯಾರ್ಥಿವೇತನ ಸಹಿತ ದಾಖಲಾತಿ ಬಯಸುವ ವಿದ್ಯಾರ್ಥಿಗಳು ಈಪರೀಕ್ಷೆಯಲ್ಲಿ ಪಾಲ್ಗೊಳ್ಳಬಹುದು. ಸ್ಟೇಟ್ಬೋರ್ಡ್ (ಕನ್ನಡ ಮತ್ತು ಆಂಗ್ಲಮಾಧ್ಯಮ), ಐಸಿಎಸ್‌ಇ ಮತ್ತು ಸಿಬಿಎಸ್ ಈ ಪಠ್ಯಕ್ರಮದ ಪ್ರಕಾರ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಸತತ ಮೂರು ವರ್ಷ ದ್ವಿತೀಯ ಪಿಯುಸಿ ಬೋಡ್ ಪರೀಕ್ಷೆಯಲ್ಲಿ 100% ಹಾಗೂ ಪ್ರವೇಶ ಪರೀಕ್ಷೆಗಳಲ್ಲಿ ಗಮನಾರ್ಹ ಸಾಧನೆ ಮಾಡಿ ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಈ ವಿದ್ಯಾ ಸಂಸ್ಥೆ ಪ್ರಸ್ತುತ ವರ್ಷದಲ್ಲಿ ಆರ್ಥಿಕವಾಗಿ ಹಿಂದುಳಿದ ಹಾಗೂ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುತ್ತಿರುವ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸುಮಾರು 1 ಕೋಟಿಗೂ ಮಿಕ್ಕಿ ವಿದ್ಯಾರ್ಥಿ ವೇತನದ ಮೂಲಕ ಮೌಲ್ಯಾಧಾರಿತ ಪಿಯುಸಿ ವಿದ್ಯಾಭ್ಯಾಸದ ಅವಕಾಶ ನೀಡಲು ಮುಂದಾಗಿದೆ.

ಪರೀಕ್ಷೆ ನಡೆಯುವ ಸ್ಥಳ ಹೊಸಪೇಟೆ-ಬೆಂಗಳೂರು ಬೈಪಾಸ್ ರಸ್ತೆಯ ಜ್ಞಾನ ಸಾಗರ ಬಡಾವಣೆಯಲ್ಲಿರುವ ಜ್ಞಾನಾಮೃತ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಪದವಿ ಪೂರ್ವಕಾಲೇಜ್ ಬಳ್ಳಾರಿ
ಪ್ರವೇಶ ಪರೀಕ್ಷೆಗಳಲ್ಲಿ ಪಾಲ್ಗೊಳ್ಳಲು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9606542999, 9606842999, 9035409265, 9035409267

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles