34 C
Bellary
Thursday, May 30, 2024

Localpin

spot_img

ನಾಣಿಕೇರಪ್ಪನಿಗೆ ನಡೆಯಿತು ನಿಶ್ಚಿತಾರ್ಥ

ಬೆಳಗಾಯಿತು ವಾರ್ತೆ | www.belagayithu.in
ಜಿ.ವಿ.ಸುಬ್ಬರಾವ್
ಮರಿಯಮ್ಮನಹಳ್ಳಿ:ಶ್ರೀಲಕ್ಷ್ಮೀನಾರಾಯಣಸ್ವಾಮಿ,ಶ್ರೀಆಂಜನೇಯಸ್ವಾಮಿಗಳ ರಥೋತ್ಸವದ ನಿಮಿತ್ತ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ, ಲಕ್ಷ್ಮೀನಾರಾಯಣ ಸ್ವಾಮಿಯ ನಿಶ್ಚಿತಾರ್ಥವು ಒಂದು. ಭಾನವಾರ ರಾತ್ರಿ ದೇವಸ್ಥಾನದ ಆವರಣದಲ್ಲಿ ನಡೆಯಿತು.
ಇದೇನು ಶ್ರೀಮನ್ನಾರಾಯಣನ ನಿಶ್ಚಿತಾರ್ಥವೇ ಎಂದು ಹುಬ್ಬೇರಿಸಬೇಡಿ. ಇದು ಪಟ್ಟಣದ ಆರಾದ್ಯದೈವ ಲಕ್ಷ್ಮೀನಾರಾಯಣಸ್ವಾಮಿ ಹಾಗು ಶ್ರೀ ಆಂಜನೇಯಸ್ವಾಮಿಗಳ ಜೋಡಿರಥೋತ್ಸವದ ನಿಮಿತ್ತ ನಡೆಯುವ ದೇವತಾ ಕಾರ್ಯಕ್ರಮಗಳಲ್ಲಿ ನಿಶ್ಚಿತಾರ್ಥವು ಕೂಡ ಒಂದು. ಹನು ಮಂತೋತ್ಸವದ ದಿನ (ನಿಶ್ಚಿತಾರ್ಥ) ಲಕ್ಷ್ಮೀನಾರಾಯಣ ಸ್ವಾಮಿಯ ನಿಶ್ಚಿತಾರ್ಥವು ಶ್ರೀದೇವಿ ಹಾಗು ಭೂದೇವಿ ಯವರೊಂದಿಗೆ ನಡೆಯಲಿದೆ. ಅಂದು ಲಕ್ಷ್ಮೀನಾರಾಯಣ ಸ್ವಾಮಿಗೆ ಮೈಸೂರು ರಾಜ ಟಿಪ್ಪುಸುಲ್ತಾನ್, ತನ್ನ ಇಷ್ಟಾರ್ಥ ಸಿದ್ದಿಸಿದ ನಂತರ ಸ್ವಾಮಿಗೆ ಅತ್ಯಂತ ಬೆಲೆಬಾಳುವ ವಜ್ರ ಹಾಗು ಬಂಗಾರದ ಆಭರಣಗಳನ್ನು ಹರಕೆಯಂತೆ ನೀಡಿದ ಆಭರಣಗಳೊಂದಿಗೆ ಅಲಂಕರಿಸಲಾಗುತ್ತದೆ. ಬೆಲೆ ಬಾಳುವ ಆಭರಣಗಳಿರುವುದರಿಂದಲೆ ದೇವಸ್ಥಾನದ ಸಮಿತಿಯ ಕೋರಿಕೆಯ ಮೇರೆಗೆ ಪಟ್ಟಣದ ಪೊಲೀಸರ ರಕ್ಷಣೆಯಲ್ಲಿ ಪ್ರತಿವರ್ಷ ದೇವರ ಕಾರ್ಯ ನಡೆಯುತ್ತದೆ, ಸಂಜೆ ಆರಂಭವಾಗುವ ನಿಶ್ಚಿತಾರ್ಥ ಕಾರ್ಯಕ್ರಮವು ಮಧ್ಯರಾತ್ರಿವರೆಗೂ ನಡೆಯುತ್ತದೆ.

ದೇವರ ಕಾರ್ಯಕ್ರಮವು ಕಿನಾಳದ ಗಂಗೂರ ಮನೆತ ನದವರ ಪೌರೋಹಿತ್ಯದಲ್ಲಿ ನೂರಾರು ವರ್ಷಗಳಿಂದ ನಡೆಯುತ್ತಿವೆ ಇವರನ್ನು ‘ಆಗಮದವ’ರೆಂದು ಕರೆಯಲಾಗುತ್ತದೆ. ದೇವರ ನಿಶ್ಚಿತಾರ್ಥವು ಆಗಮದವರ ವೇದವ್ಯಾಸಾಚಾರ, ಮುಕುಂದಿ ಶ್ರೀಕಾಂತಾಚಾರ್ಯ,ಶ್ರೀನಿವಾಸಾಚಾರ, ಅಲ್ಲದೇ ಪಟ್ಟಣದ ಉಪತಹಶಿಲ್ದಾರ ಹೆಚ್.ನಾಗರಾಜ,ಚಿದ್ರಿಸತೀಶ, ಪುರೋಹಿತರಾದ ಪದ್ಮನಾಭಆಚಾರ,ಅರ್ಚಕರಾದ ನಾಗರಾಜಾಚಾರ,ಸುಬಹ್ಮಣ್ಯಾಚಾರ,ಫಣಿರಾಜ,ರಾಮಾಂಜನೇಯಪೂಜಾರ,ಕೃಷ್ಣಮೂರ್ತಿ ಪೂಜಾರ ಇತರರ ಪೌರೋಹಿತ್ಯದಲ್ಲಿ ನಡೆದವು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles