34.9 C
Bellary
Monday, April 29, 2024

Localpin

spot_img

ಜೋಡಿ ರಥೋತ್ಸವಕ್ಕೆ ಪೂರ್ವ ಸಿದ್ದತೆ

ಬೆಳಗಾಯಿತು ವಾರ್ತೆ
ಮರಿಯಮ್ಮನಹಳ್ಳಿ:ಶಾಂತಿಯುತವಾಗಿ ಜೋಡಿ ರಥೋತ್ಸವ ಆಚರಿಸಿ,ಇತರರಿಗೆ ಮಾದರಿಯಾಗಿ ಎಂದು ಕೂಡ್ಲಿಗಿ ಡಿ.ವೈ.ಎಸ್.ಪಿ.ಮಲ್ಲೇಶ್ ಮಲ್ಲಾಪುರ ಹೇಳಿದರು.ಅವರು ಪಟ್ಡಣದ ಪೊಲೀಸ್ ಠಾಣೆಯಲ್ಲಿ ಇದೇ 17ರಂದು ನಡೆಯಲಿರುವ ಶ್ರೀಲಕ್ಷ್ಮೀ ನಾರಾಯಣಸ್ವಾಮಿ, ಶ್ರೀ ಆಂಜನೇಯಸ್ವಾಮಿ ಜೋಡುರಥೋತ್ಸವದ ನಿಮಿತ್ತ ನಡೆದ ಶಾಂತಿಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ರಥೋತ್ಸವದ ವೇಳೆ ಯುವಕರು ನಟರ ಪೋಟೋಗಳನ್ನು, ಧ್ವಜಗಳನ್ನು ಹಿಡಿದು ಪ್ರದರ್ಶಿಸುವುದಾಗಲಿ,ಮೆರವಣಿಗೆ ಮಾಡುವುದಾಗಲಿ ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಉಲ್ಲಂಘಿಸಿದವರಿಗೆ ಕಾನೂನುರಿತ್ಯ ಕ್ರಮಕ್ಕೆ ಮುಂದಾಗಲಾಗುವುದೆಂದರು.
ಸಿ.ಪಿ.ಐ.ವಿಕಾಸ್ ಲಮಾಣಿ ಮಾತನಾಡಿ,ಆಯಾ ವಾರ್ಡುಗಳ ಮುಖಂಡರು ಅಲ್ಲಿನ ಯುವಕರನ್ನು ರಥೋತ್ಸವವೇಳೆ ಹೇಗೆ ನಡೆದುಕೊಳ್ಳ ಬೇಕೆಂಬುದನ್ನು ಮನವರಿಕೆಮಾಡಿ,ಜಾತ್ರೆಯ ವೇಳೆ ಜನಸಂದಣಿಯಲ್ಲಿ ಪೀಪಿಗಳನ್ನು ಊದಿ ಅಸಭ್ಯವಾಗಿವರ್ತಿಸಿದ್ದಲ್ಲಿ,ರಥದಗಾಲಿಗೆ ಸನ್ನೆ ಹಾಕುವವರು ಎದುರಾಳಿಗೆ ಉತ್ತೇಜಿಸುವಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ಸೂಚಿಸಿದರು.
ಈ ಸಂಧರ್ಭದಲ್ಲಿ ಪಟ್ಟಣದ ಪಿ.ಎಸ್.ಐ.ಮೌನೇಶ್ ರಾಥೋಡ್, ಉಪತಹಶಿಲ್ದಾರ ಹೆಚ್.ನಾಗರಾಜ್,ಪ.ಪಂ.ಮುಖ್ಯಾಧಿಕಾರಿ ಖಾಜಮೈನುದ್ದೀನ್,ಜೆಸ್ಕಾಂ ಎಂಜಿನಿಯರ್ ವಿಜಯಕುಮಾರ್,ದೇವಸ್ಥಾನ ಅಭಿವೃದ್ದಿ ಸಮಿತಿ ಅಧ್ಯಕ್ಷ ಚಿದ್ರಿಸತೀಶ್, ಸ್ಥಳಿಯ ಮುಖಂಡರಾದ ಎನ್.ಸತ್ಯನಾರಾಯಣ, ಎಲ್.ಪರಮೇಶ್ವರಪ್ಪ, ಎನ್.ಎಸ್.ಬುಡೇನ್ಸಾಬ್, ಗೋವಿಂದರಪರಶುರಾಮ, ಕೀರ್ತಿರಾಜಜೈನ್, ನವೀನಕುಮಾರ್, ಎಲೆಗಾರ ಮಂಜುನಾಥ, ಉರುವ ಕೊಂಡವೆಂಕಟೇಶ, ವೆಂಕಟೇಶ, ಕಲ್ಲಾಳ ಪರಶುರಾಮ, ತಳವಾರದೊಡ್ಡ ರಾಮಣ್ಣ, ಬಂಗಾರಿ ಮಂಜುನಾಥ, ಗರಗ ಪ್ರಕಾಶ್,ರಹಿಮಾನ್ ಸೇರಿದಂತೆ ಇತರರಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles