34.9 C
Bellary
Monday, April 29, 2024

Localpin

spot_img

ಏ. 16 ಕ್ಕೆ ಹಾರ್ವರ್ಡ್ ಬ್ರೈಟ್‌ ಪ್ರವೇಶ ಪರೀಕ್ಷೆ

ಬೆಳಗಾಯಿತು ವಾರ್ತೆ
ಮುದ್ದೇಬಿಹಾಳ: ಪಟ್ಟಣದ ನಾಲತವಾಡ ರಸ್ತೆಯಲ್ಲಿ ಪೆಟ್ರೋಲ್ ಪಂಪ್ ಹತ್ತಿರವಿರುವ ಬಿ.ಬಿ.ಆರ್ ಹಾರ್ವರ್ಡ್‌ ಪಿಯು ಸೈನ್ಸ್‌ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ವರ್ಷದ ತರಗತಿಗೆ ಪ್ರವೇಶ ಬಯಸುವವರಿಗೆ ‘ಬ್ರೈಟ್‌ ಪ್ರವೇಶ ಪರೀಕ್ಷೆ’ ಏಪ್ರೀಲ್ 16 ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಏರ್ಪಡಿಸಲಾಗಿದೆ.

ಈ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳಿಸಿದ ಮೊದಲ 3 ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸಂಸ್ಥೆಯು ಉಚಿತ ಪ್ರವೇಶ, ನಗದು ಬಹುಮಾನ ಮತ್ತು ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಇನ್ನುಳಿದ ವಿದ್ಯಾರ್ಥಿಗಳಿಗೆ ಕ್ರಮವಾಗಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ಪ್ರವೇಶ ಶುಲ್ಕದಲ್ಲಿ ಶೇ.50ರಷ್ಟು ವಿನಯತಿ ಹಾಗೂ ಶೇ.80ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ಶೇ.25ರಷ್ಟು ಶುಲ್ಕ ವಿನಯತಿ ಇದೆ ಎಂದು ಬಿ.ಬಿ.ಆರ್ ಹಾರ್ವರ್ಡ್ ಸೈನ್ಸ್ ಕಾಲೇಜಿನ ಅಧ್ಯಕ್ಷರು ಎಸ್.ಎಂ ನೆರಬೆಂಚಿ ತಿಳಿಸಿದರು.

ಈ ಕಿರು ಪರೀಕ್ಷೆಯು 10 ನೇ ತರಗತಿ ಪಠ್ಯ ಕ್ರಮದ ಗಣಿತ ಹಾಗೂ ವಿಜ್ಞಾನ ವಿಷಯದ ಪ್ರಶ್ನೆ ಪತ್ರಿಕೆ ಇರಲಿದೆ. ತಲಾ ಎರಡು ವಿಷಯದ ಅನುಗುಣವಾಗಿ 50 ಅಂಕಗಳ ಇರಲಿವೆ. 90 ನಿಮಿಷಗಳ ಕಾಲ ಪರೀಕ್ಷೆಗೆ ಸಮಯ ಇರಲಿದೆ.

ಕಡು ಬಡವರು ಶಿಕ್ಷಣದಿಂದ ವಂಚಿತರಾಗಬಾರದು ಹಾಗೂ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಉಚಿತ ಶಿಕ್ಷಣ ಒದಗಿಸಬೇಕು ಎಂಬ ಉದ್ದೇಶದಿಂದ ಈ ಪರೀಕ್ಷೆ ಆಯೋಜನೆ ಮಾಡಲಾಗಿದೆ. ಇದರ ಪ್ರಯೋಜನೆ ತಾಲೂಕಿನ ಪಾಲಕರು ಪಡೆದುಕೊಳ್ಳಬೇಕೆಂದು ಎಂದು ಎಸ್.ಎಂ. ನೆರಬೆಂಚಿ ಹೇಳಿದರು

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles