22.1 C
Bellary
Friday, February 23, 2024

Localpin

spot_img

ಅತಿಕ್ರಮಣ ಮಾಡಿದ ಅಂಗಡಿಗಳ ತೆರವು ಕಾರ್ಯಚರಣೆ

ಬೆಳಗಾಯಿತು ವಾರ್ತೆ
ಮರಿಯಮ್ಮನಹಳ್ಳಿ: ಪಟ್ಟಣದಲ್ಲಿ ಹೆಚ್ಚುತ್ತಿರುವ ಜನಸಂದಣಿ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆ ಅತಿಕ್ರಮಣ ಮಾಡಿದ ಅಂಗಡಿಗಳ ತೆರವು ಕಾರ್ಯಕ್ಕೆ ಮುಂದಾಗಿದ್ದು ಪ.ಪಂ. ಶನಿವಾರ ಮುಂಜಾನೆ ಬೆಳ್ಳಂ ಬೆಳಿಗ್ಗೆ ಜೆಸಿಬಿ ಸದ್ದು ಮಾಡಿದೆ.

ಶನಿವಾರ ಮುಂಜಾನೆ ಪ.ಪಂ.ಹಾಗು ಕಾಕಿಪಡೆಗಳೊಂದಿಗೆ ಜೆಸಿಬಿ ವಾಹನಗಳು ಕಾರ್ಯಾಚರಣೆಗೆ ಮುಂದಾಗಿದ್ದೇ ತಡ ಗೂಡಂಗಡಿಗಳ ಮಾಲೀಕರು ತಮ್ಮ ತಮ್ಮ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಲು ಹರಸಾಹಸ ಪಡುವಂತಾಯಿತು.
ರಾಜ್ಯ ಹೆದ್ದಾರಿ ಅಕ್ಕ ಪಕ್ಕದಲ್ಲಿ ಅನಧಿಕೃತವಾಗಿ ಹಾಕಲಾಗಿದ್ದ ಚಿಕನ್ ಮತ್ತು ಮಾಂಸದ,ತರಕಾರಿ ಗೂಡಂಗಡಿಗಳನ್ನು.
ಈಗಾಗಲೇ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಸಂಬಂಧಪಟ್ಟವರಿಗೆ ಗೂಡಂಗಡಿಗಳ ತೆರವಿಗೆ ಸೂಚನೆ ನೀಡಲಾಗಿದ್ದರೂ ಕೂಡ ಎಚ್ಚೆತ್ತುಕೊಳ್ಳದ ಗೂಡಂಗಡಿಗಳ ಮಾಲೀಕರು ಜೆಸಿಬಿಗಳು ಬಂದು ನಿಂತದ್ದೇ ತಡ ತಮ್ಮ ತಮ್ಮ ಅಂಗಡಿಗಳನ್ನು ತೆರವುಗೊಳಿಸಲು ಕೆಲವರು ಹರಸಾಹಸ ಪಟ್ಟರೆ,ಕೆಲವರು ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದರು.

ಕಾರ್ಯಾಚರಣೆಯಲ್ಲಿ ಪ.ಪಂ.ಮುಖ್ಯಾಧಿಕಾರಿ ಗಾದಿಲಿಂಗನಗೌಡ,ಹ.ಬೊ.ಹಳ್ಳಿ ಸಿ.ಪಿ.ಐ.ವಿಕಾಸ್ ಲಮಾಣಿ ಹಾಗು ಪಟ್ಟಣದ ಪಿ.ಎಸ್.ಐ.ಗಳಾದ ಮೌನೇಶ್ ರಾಥೋಡ್,ಬೀಬಿಮರೆಮ್ ಸೇರಿದಂತೆ ಪ.ಪಂ. ಸಿಬ್ಬಂದಿ ಹಾಗೂ ಪೊಲೀಸ್ ಭದ್ರತಾಪಡೆ ಹಾಜರಿದ್ದು ಕಾರ್ಯಾಚರಣೆ ನಡೆಸಿದರು.
ಭದ್ರತೆ
ಗೂಡಂಗಡಿಗಳ ತೆರವಿಗೆ ಹ.ಬೊ.ಹಳ್ಳಿ ವೃತ್ತದ ಮೂವರು ಪಿ.ಎಸ್.ಐ.ಗಳು,2ಎ.ಎಸ್.ಐಗಳು,12 ಮುಖ್ಯಪೇದೆ,ಪೇದೆಗಳು,1 ಜಿಲ್ಲಾಸಶಸ್ತ್ರಪಡೆ,ಮಹಿಳಾ ಸಿಬ್ಬಂದಿಗಳು ಸೇರಿದಂತೆ ಖಾಕಿಪಡೆ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles