ಬೆಳಗಾಯಿತು ವಾರ್ತೆ
ಸಂಡೂರು: ಹಿರೇಕೆರೆಯಾಗಿನಹಳ್ಳಿ ಕಂದಾಯ ಗ್ರಾಮದ ಸರ್ವೇ ನಂಬರ್ 63 ರಲ್ಲಿ 6 ಎಕರೆ ವಿಸ್ತೀರ್ಣವುಳ್ಳ ಜಾಗದಲ್ಲಿ ನಾನು ಮನೆಯನ್ನು ನಿರ್ಮಿಸಬೇಕೆಂದು ಕೊಂಡಿದ್ದೇನೆ. ನನಗೆ ಸೇರಿದ ನನ್ನ ಸ್ವಂತ ಜಾಗದಲ್ಲಿ ಮನೆಯನ್ನು ಕಟ್ಟಲು ಅವಕಾಶವನ್ನು ನೀಡದೇ ಸ್ಥಳೀಯರಾದ ಅಂಜಿನಿ ಹಾಗೂ ಬಂಡ್ರೆಪ್ಪ ಇವರಿಬ್ಬರು ದೌರ್ಜನ್ಯದಿಂದ ಜೆಸಿಬಿ ಯಂತ್ರವನ್ನು ತಂದು ನನ್ನ ಜಾಗದಲ್ಲಿ ಬುನಾದಿಯನ್ನು ತೆಗೆದಿರುತ್ತಾರೆ. ಇದನ್ನು ಪ್ರಶ್ನೆ ಮಾಡಿದರೆ ನೀನು ಯಾವನಿಗೆ ಬೇಕಾದ್ರೂ ಹೇಳಿಕೋ ಇಲ್ಲಿ ನೀನು ಮನೆ ಕಟ್ಟುವ ಹಾಗಿಲ್ಲ, ಜಾಸ್ತಿ ಮಾತನಾಡಿದರೆ ನಿನ್ನ ಮೇಲೆ ಆಟ್ರಾಸಿಟಿ ಕೇಸ್ ಹಾಕುತ್ತೇವೆ ಎಂದು ಹೆದರಿಸುತ್ತಾರೆ ಎಂದು ಕೆ.ಬಿ ಚಿನ್ನಾಪ್ರಪ್ಪ ಅವರು ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಬಂಧಪಟ್ಟಂತೆ ಹೆಚ್ಕೆ ಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಹಾಗೂ ತಾಲೂಕು ಪಂಚಾಯಿತಿ ಇಓ ಸಂಡೂರು, ಮತ್ತು ತಹಶೀಲ್ದಾರ್ ಅವರಿಗೂ ದೂರು ನೀಡಿದರೂ ಸಹ ಅವರುಗಳು ರಾಜಕೀಯ ಒತ್ತಡದಿಂದ ನಾನು ಕೊಟ್ಟ ದೂರುಗೆ ಕ್ರಮ ಕೈಗೊಳ್ಳುತ್ತಿಲ್ಲ. ಇವರ ದೌರ್ಜನ್ಯ ಹಾಗೂ ಕಿರುಕುಳಕ್ಕೆ ಬೇಸತ್ತು ಚೋರನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಅವರು ಅಂಜಿನಿ ಹಾಗೂ ಬಂಡ್ರೆಪ್ಪ ನನ್ನು ಕರೆಸಿ ಕೇಳುತ್ತೇವೆ ಎಂದಿದ್ದಾರೆ.
ನನ್ನ ಸ್ವಂತ ಜಾಗವೆಂಬುವುದಕ್ಕೆ ದಾಖಲೆಗಳಿವೆಯಾದರು ನಾನು ಮನೆ ನಿರ್ಮಿಸಿಕೊಳ್ಳಲು ಆಗುತ್ತಿಲ್ಲ ಇದರಿಂದ ನಾನು ಮಾನಸಿಕವಾಗಿ ಬಹಳ ನೊಂದಿದ್ದೇನೆ/ನನಗೆ ಸಂಬಂಧಪಟ್ಟವರಿಂದ ನ್ಯಾಯ ಸಿಗದೇ ಹೋದಲ್ಲಿ ವಿಷವನ್ನು ಕುಡಿದು ಸಾಯುತ್ತೇನೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಮರಳುಸಿದ್ದಪ್ಪ, ನಾಗಭೂಷಣ, ಪತ್ರಿಚನ್ನಪ್ಪ ಇದ್ದರು.





