26.9 C
Bellary
Friday, May 17, 2024

Localpin

spot_img

ಧರ್ಮಸ್ಥಳ ಸಂಘದಿಂದ 230ಕೋಟಿ ಸಾಲ ನೀಡಲಾಗಿದೆ

ಬಳ್ಳಾರಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ನಿಧಿ ಯೋಜನೆ ಅಡಿಯಲ್ಲಿ ಸುಮಾರು 230 ಕೋಟಿಯಷ್ಟು ಹಣ ಬ್ಯಾಂಕ್ ಮೂಲಕ ಸಾಲ ನೀಡಲಾಗಿದೆ ಎಂದು ಬಳ್ಳಾರಿ ಜಿಲ್ಲಾ ಯೋಜನಾ ನಿರ್ದೇಶಕರಾದ ರೋಹಿತಾಕ್ಷ ಅವರು ಹೇಳಿದರು.

ನಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಳ್ಳಾರಿ ಜಿಲ್ಲಾ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಳ್ಳಾರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಸುಮಾರು 16,630 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ.ಸುಮಾರು 1ಲಕ್ಷ 42 ಸಾವಿರ ಸದಸ್ಯರು ಈ ಸಂಘದಲ್ಲಿದ್ದಾರೆ. ಪ್ರತಿ ವಾರ ಕನಿಷ್ಠ 10ರಿಂದ 20ರೂಪಾಯಿ ಉಳಿತಾಯ ಮಾಡುತ್ತಿದ್ದಾರೆ.ಅವರಿಂದ ಸುಮಾರು 93ಕೋಟಿಯಷ್ಟು ಹಣ ಉಳಿತಾಯ ಮಾಡಲಾಗಿದೆ.ಪ್ರಗತಿ ನಿಧಿ ಯೋಜನೆ ಅಡಿಯಲ್ಲಿ ಸುಮಾರು 230 ಕೋಟಿಯಷ್ಟು ಹಣ ಬ್ಯಾಂಕ್ ಮೂಲಕ ಸಾಲ ನೀಡಲಾಗಿದೆ.430ಕೋಟಿ ಸಾಲ ಚಾಲ್ತಿಯಲ್ಲಿದೆ.ಈ ಭಾಗದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ಬಿಸಿಯಾಗಿ ಕಾರ್ಯನಿರ್ವಸುತ್ತಿದ್ದು ಬ್ಯಾಂಕ್ ಪ್ರತಿನಿಧಿಯಾಗಿ ಸ್ವ ಸಹಾಯ ಸಂಘಗಳ ಸದಸ್ಯರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ನಿಮಿತ್ತ 271 ಸಿಎಸ್ ಸಿ ಸೆಂಟರ್ ಗಳನ್ನು ಜಿಲ್ಲಾ ವ್ಯಾಪ್ತಿಯಲ್ಲಿ ತೆರೆಯಲಾಗಿದೆ.28 ಸಾವಿರ ಆಯುಷ್ಮಾನ್ ಕಾರ್ಡ್ 11ಸಾವಿರ ಈ ಶ್ರಮ ಕಾರ್ಡ್,18,771 ಪಾನ್ ಕಾರ್ಡ್ ಗಳನ್ನು ಮಾಡಲಾಗಿದೆ ಎಂದರು.ಜೊತೆಗೆ ಜನ ಜಾಗೃತಿ ಕಾರ್ಯಕ್ರಮಗಳ ಅಡಿಯಲ್ಲಿ ಮಧ್ಯಪಾನ ಮುಕ್ತ ಸಮಾಜ ನಿರ್ಮಾಣ,ಸ್ವಾಥ್ಯ ಸಂಕಲ್ಪ, ಶ್ರದ್ಧಾ ಕೇಂದ್ರ ಸ್ವಚ್ಛತೆ ಸೇರಿದಂತೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಹಾಗೂ ನಮ್ಮೂರ ನಮ್ಮ ಕೆರೆ ಅಭಿವೃದ್ಧಿ, ನಿರ್ಗತಿಕ ಮಾಸಾಶನ, ಪೌಷ್ಟಿಕ ಆಹಾರ ನೀಡುವುದು, ವಾತ್ಸಲ್ಯ ಮನೆ ನಿರ್ಮಾಣ ಸೇರಿದಂತೆ ಮುಂತಾದ ಕಾರ್ಯಕ್ರಮಗಳನ್ನು ಸಂಘದಿಂದ ಮಾಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ  ವೆಂಕಟೇಶ್ ಪಟಗಾರ್ ಸತೀಶ್ ಸೇರಿದಂತೆ ಮತ್ತಿತರರು ಇದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles