ಬೆಳಗಾಯಿತು ವಾರ್ತೆ
ಮರಿಯಮ್ಮನಹಳ್ಳಿ:ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಉದ್ಘಾಟನೆಯ ಆಹ್ವಾನ ಅಕ್ಷತೆ ಕೊಡುವ ಮೂಲಕ ಹೋಬಳಿಯ ಪ್ರತಿ ಮನೆ ಮನೆಗೂ ತಲುಪಿಸಬೇಕು ಎಂದು ಆರ್‌ಎಸ್‌ಎಸ್‌ನ ಗ್ರಾಮ ವಿಕಾಸ ಪ್ರಾಂತ ಸಂಯೋಜಕ, ಪ್ರಚಾರಕ ರಾಜಶೇಖರ್ ಜೀ ತಿಳಿಸಿದರು.
ಅವರು ಪಟ್ಟಣದ ಶ್ರೀ ಲಕ್ಷ್ಮೀನಾರಾಯಣಸ್ವಾಮಿ, ಶ್ರೀಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಅಯೋದ್ಯೆಯಿಂದ ಬಂದ ಅಕ್ಷತೆ ಹಾಗು ಆಹ್ವಾನ ಪತ್ರಿಕಾ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಜನರ ಶ್ರದ್ಧೆಯ ಬಿಂದು ಶ್ರೀರಾಮವಾಗಿದ್ದು, ಈ ಕಾರ್ಯಕ್ರಮ ಕೇವಲ ಶ್ರೀರಾಮನಮೂರ್ತಿ ಪ್ರತಿಪ್ರಷ್ಠಾಪನೆ ಅಲ್ಲ, ದೇಶದ ಸ್ವಾಭಿಮಾನ ನಿರ್ಮಾಣ ಕಾರ್ಯಕ್ರಮ ಎಂದರು.
ಆಯೋಧ್ಯೆ ಶ್ರೀರಾಮ ಪ್ರಾಣ ಪ್ರತಿಷ್ಠಾನ ಸಂಬಂಧ ಜ. 22ಕ್ಕೆ ಆಯೋಧ್ಯೆಯಲ್ಲಿ ಪ್ರಭುಶ್ರೀರಾಮ ಮಂದಿರ ಉದ್ಘಾಟನೆಯಾಗುತ್ತಿರುವ ಸಂಭ್ರಮ ದೇಶ ವ್ಯಾಪ್ತಿಯಾಗಬೇಕು. ಈ ನಿಟ್ಟಿನಲ್ಲಿ ಅಕ್ಷತೆ ಕಾಳುಗಳನ್ನು ಪ್ರತಿ ಊರಿನ ಮನೆಮನೆಗೂ ತಲುಪಬೇಕಾಗಿದೆ ಎಂದರು.
ಇದರಿಂದ 500 ವರ್ಷಗಳ ಹೋರಾಟದ ಸಾಫಲ್ಯತೆ ಅಂದು ಸಿಗುತ್ತದೆ. ದೇಶದ ಜನರ ಶ್ರದ್ಧೆಯ ಬಿಂದು ಶ್ರೀರಾಮವಾಗಿದ್ದು, ಈ ಕಾರ್ಯಕ್ರಮ ಕೇವಲ ಶ್ರೀರಾಮನಮೂರ್ತಿ ಪ್ರತಿಪ್ರಷ್ಠಾಪನೆ ಅಲ್ಲ, ದೇಶದ ಸ್ವಾಭಿಮಾನ ನಿರ್ಮಾಣ ಕಾರ್ಯಕ್ರಮ ಎಂದರು.
ಜ. 22ರಂದು ಮಧ್ಯಾಹ್ನ 12.16ಕ್ಕೆ ಆಯಾ ಗ್ರಾಮಗಳಲ್ಲಿನ ದೇವಸ್ಥಾನಗಳಲ್ಲಿ ಪೂಜೆ, ಪುನಸ್ಕಾರ ಕೈಗೊಳ್ಳಬೇಕು. ಅಂದು ಸಂಜೆ ತಮ್ಮ ಮನೆಗಳ ಮುಂದೆ 5 ದೀಪಗಳನ್ನು ಉತ್ತರಾಭಿಮುಖವಾಗಿ ಹಚ್ಚಲು ಕರೆ ನೀಡಿದರು. ಪ್ರತಿಯೊಬ್ಬರೂ ರಾಮಮಂದಿರ ಉದ್ಘಾಟನೆಯನ್ನು ತಮ್ಮ-ತಮ್ಮ ಊರುಗಳಲ್ಲಿ ದೃಶ್ಯಮಾದ್ಯಮದ ಮೂಲಕ ಕಣ್ತುಂಬಿಕೊಳ್ಳ ಬೇಕೆಂದರು.
ಈ ಸಂಧರ್ಭದಲ್ಲಿ ಹ.ಬೊ.ಹಳ್ಳಿಬಿಜೆಪಿ ಮಂಡಲಾಧ್ಯಕ್ಷ ವೀರೇಶ್ವರಸ್ವಾಮಿ, ಮರಿಯಮ್ಮನಹಳ್ಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಈ.ಶ್ರವಣಕುಮಾರ್, ಕುಪ್ಪಾಗೋವಿಂದರಾಜ(ಗೋಪಿ)ಶೆಟ್ಟಿ, ಎಸ್.ಕೃಷ್ಣನಾಯ್ಕ, ಬದ್ರಿನಾಥಶೆಟ್ಟಿ, ಗುಂಡಾಕೃಷ್ಣ, ಐ.ವೆಂಕಟರಮಣ, ಮಹಾಂತೇಶ್, ಭರತ್, ಪಟ್ಟಣಸಂಪರ್ಕ ಗಂಗಾವತಿರಾಜೇಶ್, ಹನುಮನಾಯ್ಕ, ರವಿಕಿರಣ್ ಸೇರಿದಂತೆ ಇತರರಿದ್ದರು.


