25.2 C
Bellary
Friday, June 21, 2024

Localpin

spot_img

ಜನರ ಹಿತರಕ್ಷಣೆಗಾಗಿ ಉತ್ಸವ ಮಾಡುತ್ತೇವೆ: ಸಿಎಂ

ಹಂಪಿ: ಜನರಿಗಾಗಿ ಹಾಗೂ ಕಲಾವಿದರ ಹಿತರಕ್ಷಣೆಗಾಗಿ ಉತ್ಸವಗಳನ್ನು ಮಾಡುತ್ತಿದ್ದೇವೆ. ಹಂಪಿ ಉತ್ಸವವು ಒಂದು ಸಾಂಸ್ಕೃತಿಕ ಉತ್ಸವವಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳಿದರು.

ಶುಕ್ರವಾರ ಹಂಪಿ‌ ಉತ್ಸವ ಉದ್ಘಾಟನೆಗಾಗಿ ಹೆಲಿಪ್ಯಾಡ್ ಗೆ ಆಗಮಿಸಿದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಬರಗಾಲ ಇದ್ದರೂ ಸಹ ಉತ್ಸವವನ್ನು ಜನರಿಗಾಗಿ, ಕಲಾವಿದರ ಹಿತರಕ್ಷಣೆಗಾಗಿ ಮಾಡುತ್ತಿದ್ದೇವೆ. ಇದೊಂದು ನಾಡಿನ‌‌ ಸಾಂಸ್ಕೃತಿಕ ಉತ್ಸವವಾಗಿದೆ ಎಂದರು.ಈ ಸಂದರ್ಭದಲ್ಲಿ ವಸತಿ, ವಕ್ಪ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಜೆಡ್. ಜಮೀರ ಅಹ್ಮದ್ ಖಾನ್, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ನಾಗೇಂದ್ರ, ಶಾಸಕರಾದ ಜೆ.ಎನ್. ಗಣೇಶ, ಬಿ.ಎಂ.ನಾಗರಾಜ, ಎಚ್.ಆರ್. ಗವಿಯಪ್ಪ, ರಾಘವೇಂದ್ರ ಹಿಟ್ನಾಳ, ಅಜೇಯ ಧರ್ಮಸಿಂಗ್, ನಾರಾ ಭರತ್ ರೆಡ್ಡಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನರಾಜ್ ಸಿಂಗ್, ಐಜಿಪಿ ಲೋಕೇಶಕುಮಾರ, ಜಿಲ್ಲಾಧಿಕಾರಿ ಎಮ್. ಎಸ್. ದಿವಾಕರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀ ಹರಿಬಾಬು, ಉಪವಿಭಾಗಾಧಿಕಾರಿ ಮಹದ್ ಅಲಿ ಅಕ್ರಂ ಷಾ, ಮುಖಂಡರಾದ ಭೀಮಾ ನಾಯ್ಕ, ಪಿ.ಟಿ. ಪರಮೇಶ್ವರ ನಾಯ್ಕ ಸೇರಿದಂತೆ ಹಲವರು ಹಾಜರಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles