ಬೆಳಗಾಯಿತು ವಾರ್ತೆ
ಹರಪನಹಳ್ಳಿ: ಪುರಸಭೆಯ ಹಿರಿಯ ಸದಸ್ಯ ಎಂ.ವಿ.ಅಂಜಿನಪ್ಪ ಅವರನ್ನು ಹರಪನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷರು ಆದೇಶ ಹೊರಡಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧಿಕಾರ ವಹಿಸಿಕೊಂಡು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾರ್ಗದರ್ಶನದಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರ ಸಹಯೋಗದಲ್ಲಿ ಪಕ್ಷ ಸಂಘಟನೆ ಮತ್ತು ಬಲವರ್ಧನೆಗೆ ಶ್ರಮಿಸಬೇಕು ಎಂದು ಅಂಜಿನಪ್ಪ ಅವರಿಗೆ ಸೂಚಿಸಿದ್ದಾರೆ.
ಎಂ.ವಿ.ಅಂಜಿನಪ್ಪ ಅವರು 5 ಬಾರಿ ಪುರಸಭೆಯ ಸದಸ್ಯರಾಗಿ 1 ಬಾರಿ ಪುರಸಭೆಯ ಅಧ್ಯಕ್ಷರಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ಎನ್‍ಎಸ್‍ಯುಐ ಹಾಗೂ ಯೂತ್ ಕಾಂಗ್ರೆಸ್‍ನಲ್ಲಿ ಸಂಘಟನೆ ಸೇರಿದಂತೆ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯ ಕಾರ್ಯಕರ್ತರಾಗಿ ದುಡಿದಿದ್ದಾರೆ.
ಸಿಹಿ ಹಂಚಿ ಸಂಭ್ರಮ ಆಚರಣೆ
ಪುರಸಭೆಯ ಹಿರಿಯ ಸದಸ್ಯ ಎಂ.ವಿ.ಅಂಜಿನಪ್ಪ ಅವರು ಹರಪನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ಶುಕ್ರವಾರ ಸಂಜೆ ಪಟ್ಟಣದ ಹರಿಹರ ವೃತ್ತ, ಹಳೆಬಸ್ ನಿಲ್ದಾಣ ಹಾಗೂ ಪ್ರವಾಸಿ ಮಂದಿರ ವೃತ್ತಗಳಲ್ಲಿ ಪಟಾಕಿ ಸಿಡಿಸಿ ಸಿಹಿಹಂಚಿ ಸಂಭ್ರಮಾಚರಣೆ ನಡೆಸಿ ಜೈಕಾರ ಕೊಗಿದರು.
ಈ ವೇಳೆ ಪುರಸಭೆ ಸದಸ್ಯರಾದ ಲಾಟಿ ದಾದಾಪೀರ್, ಗೊಂಗಡಿ ನಾಗರಾಜ್, ಉದ್ದಾರ ಗಣೇಶ್ ಮುಖಂಡರಾದ ಮತ್ತೂರು ಬಸವರಾಜ್, ಉದಯ ಶಂಕರ್, ಎಂ.ವಿ.ಕೃಷ್ಣಕಾಂತ್, ಚಿಕ್ಕೇರಿ ಬಸಪ್ಪ, ನಿಟ್ಟೂರು ಸಣ್ಣಹಾಲಪ್ಪ, ಎಂ.ವಿ.ತಿರುಪತಿ, ಪೈಲ್ವನ್ ಬಸಪ್ಪ, ಅಗ್ರಹಾರ ಕೆ.ಅಶೋಕ, ಶಶಿಕುಮಾರ್ ನಾಯ್ಕ್, ಗುಡಿ ನಾಗರಾಜ್, ಇಟ್ಟಿಗುಡಿ ರಮೇಶ, ಎಲ್.ಮಂಜ್ಯಾನಾಯ್ಕ್, ಎನ್.ಶಂಕರ್, ಹರಿಯಮ್ಮನಹಳ್ಳಿ ಶಿವರಾಜ್, ಉಪ್ಪಾರ ಹನುಮಂತಪ್ಪ, ಅಂಡಿ ಅಂಜಿನಪ್ಪ, ಹಾಲೇಶ್, ಚಿರಂಜೀವಿ, ತಿಪ್ಪನಾಯಕನಹಳ್ಳಿ ಮಂಜು ಸೇರಿದಂತೆ ಮತ್ತಿತರರು ಈ ಸಂಭ್ರಮಾಚರಣೆಯಲ್ಲಿ ಭಾಗವಹಿದ್ದರು.
