40.8 C
Bellary
Monday, April 29, 2024

Localpin

spot_img

ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಪ್ರಾರಂಭಿಸಿ ; ವೈ.ಎಂ. ಸತೀಶ್

ಬೆಳಗಾವಿ:ರಾಹುಲ್‌ಗಾಂಧಿ ಅವರು ಹೇಳಿದ್ದ 5000 ಕೋಟಿ ರೂಪಾಯಿ ವೆಚ್ಚದ `ಜೀನ್ಸ್ ಪಾರ್ಕ್ ವಿಚಾರ ನನಗೆ ಗೊತ್ತೇ ಇಲ್ಲ ಎನ್ನುವ ಮೂಲಕ ಜವಳಿ, ಕಬ್ಬು ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್. ಪಾಟೀಲ್ ಅವರು ಸದನದಲ್ಲಿ ಹೇಳುವ ಮೂಲಕ ಕಾಂಗ್ರೆಸ್ಸಿಗರ ಜೀನ್ಸ್ ಪಾರ್ಕ್ ಅನಿಶ್ಚಿತತೆಯನ್ನು ತಿಳಿಸುತ್ತದೆ ಎಂದು ವಿಧಾನ ಪರಿಷತ್ ಸದಸ್ಯರಾದ ವೈ ಎಂ ಸತೀಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು ಸುವರ್ಣ ಸೌಧದಲ್ಲಿ ಮಂಗಳವಾರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಶಿವಾನಂದ ಎಸ್. ಪಾಟೀಲ್ ಅವರು, ಜೀನ್ಸ್ ಪಾರ್ಕ್ ಪ್ರಾರಂಭಿಸಲು ಸ್ಪೆಷಲ್ ಪರಪಸ್ ವೆಹ್ಹಿಕಲ್ (ಎಸ್‌ಪಿವಿ)ನ ಮಾಹಿತಿ ನೀಡುತ್ತಿದ್ದಾಗ, ಉಪ ಪ್ರಶ್ನೆ ಹಾಕಿದ ವೈ.ಎಂ. ಸತೀಶ್ ಅವರು, ರಾಹುಲ್‌ಗಾಂಧಿ ನೇತೃತ್ವದ `ಭಾರತ ಜೋಡೋ ಯಾತ್ರೆ’ ಬಳ್ಳಾರಿಗೆ ಬಂದಾಗ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣವೇ ಬಳ್ಳಾರಿಯಲ್ಲಿ 5000 ಕೋಟಿ ರೂಪಾಯಿ ವೆಚ್ಚದಲ್ಲಿ  ಜೀನ್ಸ್ ಪಾರ್ಕ್ ಪ್ರಾರಂಭಿಸುವೆ ಎಂದು ಚುನಾವಣಾ ಪ್ರಚಾರದಲ್ಲಿ ಘೋಷಣೆ ಮಾಡಿದ್ದೀರಿ. ಈ ಪಾರ್ಕ್ ಪ್ರಾರಂಭಿಸುವ ಕುರಿತು ಸ್ಪಷ್ಟಪಡಿಸಿ ಎಂದು ಆಗ್ರಹಿಸಿದರು. ರಾಹುಲ್‌ಗಾಂಧಿ ಅವರ ಜೀನ್ಸ್ ಪಾರ್ಕ್ ಹೇಳಿಕೆಯೂ ನನಗೆ ಗೊತ್ತಿಲ್ಲ. ಜೀನ್ಸ್ ಪಾರ್ಕ್ ಯಾವಾಗ ಪ್ರಾರಂಭವಾಗುತ್ತದೆ ಎನ್ನುವ ವಿಚಾರಕ್ಕೆ ಅಷ್ಟೇ ಉತ್ತರಿಸುವೆ. ರಾಜಕಾರಣದ ವಿಚಾರಕ್ಕೆ ನಾನು ಉತ್ತರಿಸುವುದಿಲ್ಲ ಎಂದು ವ ಶಿವಾನಂದ ಎಸ್. ಪಾಟೀಲ್ ಅವರು ಪುರುಚ್ಚರಿಸಿದರು. ಬಳ್ಳಾರಿಯಲ್ಲಿ `ಜೀನ್ಸ್ ಟೆಕ್ಸ್ ಟೈಲ್ ಪಾರ್ಕ್’ ಸ್ಥಾಪಿಸುವ ಕುರಿತು ಆಲದಹಳ್ಳಿಯಲ್ಲಿರುವ ಸರ್ವೇ ನಂ. 122/ಎರಲ್ಲಿ 50 ಎಕರೆ ಭೂಮಿಯನ್ನು ಗುರುತಿಸಿ `ಬಳ್ಳಾರಿ ಗಾರ್ಮೆಂಟ್ ಎಕ್ಸ್ಪೋರ್ಟ್ ಕ್ಲಸ್ಟರ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆ ಪ್ರಾರಂಭಿಸಿ ಈ ಸಂಸ್ಥೆಯ ಹೆಸರಿಗೆ ಭೂಮಿಯನ್ನು ವರ್ಗಾವಣೆ ಮಾಡುವ ಪ್ರಕ್ರಿಯೆ ನಡೆದಿದೆ. ಜೀನ್ಸ್ ಪಾರ್ಕ್ ಪ್ರಾರಂಭದ ಅನುಮತಿಗಳು, ಅಗತ್ಯ ಪರವಾನಿಗೆಗಳು ಹಾಗೂ ಇನ್ನಿತರೆಗಳ ಕುರಿತು ಸಮಗ್ರ ಯೋಜನೆ ಸಿದ್ದಪಡಿಸಲು ಕೆಐಎಡಿಬಿಗೆ ಜವಾಬ್ದಾರಿ ನೀಡಲಾಗಿದೆ. ಕೆಐಎಡಿಬಿ ವರದಿ ಸಲ್ಲಿಸಿದ ನಂತರ ಘಟಕಗಳ ಪ್ರಾರಂಭಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ವ ಶಿವಾನಂದ ಎಸ್. ಪಾಟೀಲ್ ಅವರು ಹೇಳಿದರು. ಅಲ್ಲದೇ, ಈ ಯೋಜನೆ ಜಾರಿಗಾಗಿ 80 ಸದಸ್ಯರ ಸ್ಪೆಷಲ್ ಪರ್‌ಪಸ್ ವೆಹ್ಹಿಕಲ್ (ಎಸ್‌ಪಿವಿ)ಯನ್ನು ರಚನೆ ಮಾಡಲಾಗಿದೆ. ಈ ಎಸ್‌ಪಿವಿ ಯೋಜನಾ ವರದಿಯನ್ನು (ಡಿಪಿಆರ್) ಸಿದ್ದಪಡಿಸಲು ಕೆಐಎಡಿಬಿ ಅವರ ಜೊತೆ ಪತ್ರ ವ್ಯವಹಾರ ನಡೆಸುತ್ತಿದೆ ಎಂದು ಹೇಳಿದರು.ವೈ.ಎಂ. ಸತೀಶ್ ಅವರು, ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಜೀನ್ಸ್ವಾಶಿಂಗ್ ಘಟಕಗಳು ಹೊರಬಿಡುತ್ತಿರುವ ರಸಾಯನಿಕಯುಕ್ತ ನೀರಿನಿಂದಾಗಿ ಅಂತರ್ಜಲ ಕಲುಷಿತಗೊಳ್ಳುತ್ತಿದೆ. ಅಲ್ಲದೇ, ಆ ನೀರು ಜಲಚರಗಳ ಜೀವರಾಶಿಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕಾರಣ ಸರ್ಕರ ತುರ್ತಾಗಿ ಎಫಿಲೆಂಟ್ (ವಾಟರ್ ಟ್ರೀಟ್‌ಮೆಂಟ್ ಪ್ಲಾಂಟ್) ಅಳವಡಿಸಬೇಕು ಎಂದು ಆಗ್ರಹಿಸಿದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles