ಬೆಳಗಾಯಿತು ವಾರ್ತೆ | www.belagayithu.in
ಕೊಟ್ಟೂರು:ಪದವಿ ಪೂರ್ವ ಶಿಕ್ಷಣ ಇಲಾಖೆಯು ಬುಧವಾರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ್ದು ವಿಜಯನಗರ ಜಿಲ್ಲೆ ಕೊಟ್ಟೂರಿನ ಇಂದು ಪಿಯು ಕಾಲೇಜಿನ ವಿದ್ಯಾರ್ಥಿನಿ ಕವಿತಾ ಬಿ. ವಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆಯುವ ಮೂಲಕ ಕಾಲೇಜಿನ ಕಲಾವಿಭಾಗದಲ್ಲಿ ಸತತ 8ನೇ ವರ್ಷಗಳಿಂದ ಮೊದಲ ಸ್ಥಾನ ಪಡೆದುಕೊಳ್ಳುತ್ತಿದ್ದರು ಈ ವರ್ಷವೂ ಕೂಡ ಇಂದು ಪಿಯು ಕಾಲೇಜನ ಕಲಾವಿಭಾಗದಲ್ಲಿ ಮೊದಲ ಸ್ಥಾನ ಪಡೆದುಕೊಂಡು ತನ್ನ ಶೈಕ್ಷಣಿಕ ಕ್ಷೇತ್ರದಲ್ಲಿ ನಾಗಲೋಟ ಅಭಿಯಾನ ಮುಂದುವರುಸುತ್ತಿದೆ.
ಪಟ್ಟಣದ ಇಂದು ಪಿಯು ಕಾಲೇಜ್ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕಲಾ ವಿಭಾಗದಲ್ಲಿ ಚೌಡಪುರ ಗ್ರಾಮದ ಕವಿತಾ ಬಿ. ವಿ 600/596 ತಂದೆ ವೀರಬಸಪ್ಪ, ಇದೇ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಅಮೃತ ಹೆಚ್ ಎಸ್ 600/587 ಅಂಕಗಳನ್ನು ಪಡೆಯುವ ಮೂಲಕ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಹತ್ತನೇ ರ‍್ಯಾಂಕ್ ನ್ನು ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಡಿ ಸಾನಿಯಾ 600/586 ಅಂಕಗಳನ್ನು ಪಡೆಯುವ ಮೂಲಕ ಇಂದಿರಾ ಎಜುಕೇಶನ್ ಟ್ರಸ್ಟ್ (ರಿ) ಹಾಗೂ ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಕಾಲೇಜಿನ ಪ್ರಿನ್ಸಿಪಾಲರಾದ ವೀರಭದ್ರಪ್ಪ ಹೆಚ್.ಎನ್ ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಿನ್ಸಿಪಾಲರಾದ ವೀರಭದ್ರಪ್ಪ ಹೆಚ್. ಎನ್, ಉಪನ್ಯಾಸಕರಗಳಾದ ತಿಪ್ಪೇಸ್ವಾಮಿ, ನಾಗರಾಜ್, ಮಂಜುನಾಥ್, ವೀರೇಶ್, ಕೊಟ್ರೇಶ್, ಲಕ್ಷ್ಮಿ, ಸುನಿತಾ, ಮಲ್ಲಿಕಾರ್ಜುನ, ಎಚ್ ಪವನ್ ಕುಮಾರ್ ಹಾಗೂ ಉಪನ್ಯಾಸಕರು ಬಳಗ ಮತ್ತು ವಿದ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು.