28.1 C
Bellary
Thursday, February 22, 2024

Localpin

spot_img

ಡಿ.18 ಮಾದಿಗರ ಆತ್ಮ ಗೌರವ ಸಮಾವೇಶ

ಬಳ್ಳಾರಿ:ನಗರದ ಮುನ್ಸಿಪಲ್ ಮೈದಾನದಲ್ಲಿ ಡಿ.18ರಂದು ಜಿಲ್ಲಾ ಮಟ್ಟದ ಮಾದಿಗರ ಆತ್ಮ ಗೌರವ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು  ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಹೆಚ್ ಹನುಮಂತಪ್ಪ ಅವರು ಹೇಳಿದರು.

ನಗರದ ಪವನ್ ಹೋಟೆಲ್ ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣೆ ಸಂದರ್ಭದಲ್ಲಿ ಒಳಮೀಸಲಾತಿ ಜಾರಿ ಕುರಿತು ಭರವಸೆ ನೀಡಿದ್ದು ಸರ್ಕಾರ ರಚನೆಯಾಗಿ ಆರು ತಿಂಗಳ ಕಳೆದರು ಒಳಮೀಸಲಾತಿ ಕುರಿತು ಸಿಎಂ ಸಿದ್ದರಾಮಯ್ಯ ಅವರು ಚಕಾರ ಎತ್ತುತ್ತಿಲ್ಲ ಎಂದು ಹನುಮಂತಪ್ಪ ಅವರು ಹೇಳಿದರು.ಡಿ.30ರ ಒಳಗಡೆ ಒಳ ಮೀಸಲಾತಿ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮೇಕಲ ವೀರೇಶ್, ನರಸಪ್ಪ, ರಾಜೇಶ್, ಪರಶುರಾಮ, ಅರುಣಾಚಲ ಸೇರಿದಂತೆ ಮತ್ತಿತರರು ಇದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles