ಬೆಳಗಾಯಿತು ವಾರ್ತೆ |www.belagayithu.in
ಸಂವಿಧಾನವೇ ಪ್ರಜಾಪ್ರಭುತ್ವ ಶಕ್ತಿ
ಕೊಟ್ಟೂರು: ಭಾರತ ದೇಶದ ಸಂವಿಧಾನ ಅಂಗೀಕಾರಗೊಂಡು 75 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜನವರಿ 26 ರಿಂದ ಆರಂಭವಾಗಿರುವ ಈ ಜಾಥಾವು ಮಂಗಳವಾರ ಬೆಳಗ್ಗೆ ಕೊಟ್ಟೂರು ಪಟ್ಟಣಕ್ಕೆ ಆಗಮಿಸಿತು. ಪಟ್ಟಣದ ಮರಿ ಕೊಟ್ಟೂರೇಶ್ವರ ದೇವಸ್ಥಾನದಿಂದ ಆರಂಭಗೊಂಡ ಜಾಗೃತಿ ಜಾತಕ್ಕೆ ತಾಲೂಕು ದಂಡಾಧಿಕಾರಿಗಳಾದ ಅಮರೇಶ್ ಜೆ.ಕೆ, ಪ. ಪಂ.ಮುಖ್ಯಧಿಕಾರಿ ಎ. ನಸ್ರುಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ದಲಿತ ಸಂಘಟನೆ ಮುಖಂಡರು ಸೇರಿ ಸಂವಿಧಾನ ಜಾಗೃತಿ ಜಾಥಕ್ಕೆ ಚಾಲನೆ ನೀಡಿದರು.
ಈ ಸಂವಿಧಾನ ಜಾಗೃತಿ ಜಾಥ ಮೆರವಣಿಗೆಯಲ್ಲಿ ಸಕಲ ಮಂಗಳವಾದ್ಯದೊಂದಿಗೆ ಹಾಗೂ ಮಹಿಳೆಯರು ಕಳಸ ದೊಂದಿಗೆ ಆಗಮಿಸಿದ್ದರು. ಈ ಮೆರವಣಿಗೆಯು ಮರಿಕೊಟ್ಟೂರೇಶ್ವರ ದೇವಸ್ಥಾನದಿಂದ ಆರಂಭಗೊಂಡಿತು. ಈ ಜಾಥವು ಪಟ್ಟಣದ ಪ್ರಮುಖ ರಸ್ತೆಗಳಾದ ಎಪಿಎಂಸಿ, ಬಸ್ ನಿಲ್ದಾಣ, ಗಾಂಧಿ ಸರ್ಕಲ್, ಉಜ್ಜಿನಿ ಸರ್ಕಲ್ ರೇಣುಕ ಟಾಕೀಸ್ ರಸ್ತೆ ಮಾರ್ಗವಾಗಿ ಸಂಚರಿಸಲಾಯಿತು. ಈ ಜಾತಕ್ಕೆ ಆಗಮಿಸಿದ್ದ ಶಾಲೆಯ ವಿವಿಧ ಮಕ್ಕಳು ಮತ್ತು ಶಿಕ್ಷಕರು ಸವಿಧಾನ ಜಾಗೃತಿ ಮೂಡಿಸುವ ಬಿತ್ತಿ ಪತ್ರಗಳನ್ನು ಹಿಡಿದು ಸಂವಿಧಾನದ ಜಯ ಘೋಷಣೆ ಕೂಗುತ್ತಾ ನಡೆದರು.
ಬಸ್ ನಿಲ್ದಾಣ ಹತ್ತಿರ ಬಾಲಕಿಯ ಶಾಲೆ ಮಕ್ಕಳಿಂದ ಸಂವಿಧಾನ ಜಾಗೃತಿ ನೃತ್ಯ ನಡೆಸಿದರು. ಮೆರವಣಿಗೆಯು ಪುನ ಬಸ್ ನಿಲ್ದಾಣಕ್ಕೆ ಬಂದಿತು. ಈ ಸಂದರ್ಭದಲ್ಲಿ ಡಿಎಸ್ಎಸ್ ಜಿಲ್ಲಾ ಸಂಚಾಲಕರುಗಳಾದ ಬದ್ದಿ ಮರಿಸ್ವಾಮಿ ಮತ್ತು ತೆಗ್ಗಿನಕೇರಿ ಕೊಟ್ರೇಶ್ ಮಾತನಾಡಿದರು. ಡಾ. ಬಿ ಆರ್ ಅಂಬೇಡ್ಕರ್ ರಚಿಸಿರುವ ಸಂವಿಧಾನವು ಈ ದೇಶದ ಕಟ್ಟ ಕಡೆಯ ಪ್ರಜೆಗೂ ನ್ಯಾಯವನ್ನು ನೀಡಿದ್ದಾರೆ. ಸಂವಿಧಾನವನ್ನು ರಚಿಸಲು ಪೂರಕವಾಗಿ 13 ಸಮಿತಿಗಳನ್ನು ರಚಿಸಲಾಗಿದ್ದು ಈ ಸಮಿತಿಯಲ್ಲಿ ಡಾ.ಬಿ ಆರ್ ಅಂಬೇಡ್ಕರ್, ಸೇರಿದಂತೆ 7 ಜನ ಸದಸ್ಯರುಳ್ಳ ಕರುಡು ರಚನಾ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯ ಅಧ್ಯಕ್ಷತೆಯನ್ನು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಆಯ್ಕೆಯಾದರು ಆದರೆ ಈ ಸಮಿತಿಯಲ್ಲಿನ ಒಬ್ಬ ಸದಸ್ಯರು ರಾಜೀನಾಮೆ ನೀಡಿದರು, ಒಬ್ಬರು ಮರಣ ಹೊಂದಿದರು, ಮತ್ತೊಬ್ಬರು ಅಮೆರಿಕದಲ್ಲಿ ಇದ್ದರು, ಒಬ್ಬರು ರಾಜ್ಯದ ಆಡಳಿತ ಕಾರ್ಯದಲ್ಲಿ ನಿರತರಾಗಿದ್ದರು, ಮತ್ತು ಅವರು ಅನಾರೋಗ್ಯದ ಕಾರಣ ದೂರ ಉಳಿದರು. ಹೀಗಿದ್ದ ಸಂದರ್ಭದಲ್ಲಿ ಸಂವಿಧಾನ ರಚಿಸುವ ಹೆಚ್ಚಿನ ಜವಾಬ್ದಾರಿ ಅಂಬೇಡ್ಕರ್ ಅವರ ಮೇಲೆ ಬಿತ್ತು. ಆದರೂ ಅವರು ದೃತಿಗೇಡದೇ ದಿನದಲ್ಲಿ 18 ಗಂಟೆಗಳ ಹೆಚ್ಚು ಕೆಲಸ ನಿರ್ವಹಿಸಿ ಪೂರ್ಣಗೊಳಿಸಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವು ಆರ್ಥಿಕ ಸಂಕಷ್ಟದಿಲ್ಲಿರುವ ಹಿಂದುಳಿದ ಜನರಿಗೆ ನೊಂದವರಿಗೆ ಶಕ್ತಿ ಆಗಬೇಕೆಂಬ ಕನಸಿನಿಂದ ಸಂವಿಧಾನವನ್ನು ಪೂರ್ಣಗೊಳಿಸಿದರು. ಅವರು ರಚಿಸಿರುವ ಸಂವಿಧಾನವು ಈ ದೇಶದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯವನ್ನು ದೊರಕಿಸಿ ಕೊಟ್ಟಿದ್ದಾರೆ ಆದ್ದರಿಂದ ಪ್ರತಿಯೊಬ್ಬರು ಸಂವಿಧಾನದ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಸಂವಿಧಾನ ಜಾಗೃತಿ ಜಾಥದಲ್ಲಿ ಸಹಾಯ ಆಯುಕ್ತರಾದ ಚಿದಾನಂದ ಗುರುಸ್ವಾಮಿಯವರು ಸಂವಿಧಾನದ ಮೂಲ ಪೀಠಿಕೆಯನ್ನು ಬೋಧಿಸಿದರು. ಈ ಸಂದರ್ಭದಲ್ಲಿ ದಲಿತ ಒಕ್ಕೂಟದಿಂದ ಮಣಿಕಂಠ ಮತ್ತು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಾದ ಎ ನಸ್ರುಲ್ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಿಪಿಐ ಟಿ ವೆಂಕಟಸ್ವಾಮಿ, ಪಿಎಸ್ಐ ಗೀತಾಂಜಲಿ ಸಿಂಧೆ, ಪ. ಪಂ.ಸದಸ್ಯರುಗಳಾದ ಟಿ ಜಗದೀಶ್, ಕೆಂಗಪ್ಪ, ತಾಲೂಕು ಡಿಎಸ್ಎಸ್ ಅಧ್ಯಕ್ಷರಾದ ಟಿ ಹನುಮಂತಪ್ಪ ವಕೀಲರು, ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕ ಜಗದೀಶ್, ಸಿಆರ್‌ಪಿಗಳಾದ ಅಜ್ಜಪ್ಪ, ಶಶಿ, ರೈತ ಮುಖಂಡ ಜಯಪ್ರಕಾಶ್, ಗುಡಿಯರ್ ಮಲ್ಲಿಕಾರ್ಜುನ, ಮಧು ನಾಯಕ್ ಹಾಗೂ ಎಲ್ಲಾ ಶಾಲೆಯ ಶಿಕ್ಷಕರು ಎನ್‌ಸಿಸಿ ವಿದ್ಯಾರ್ಥಿಗಳು, ಮಕ್ಕಳು ಇತರರು ಉಪಸ್ಥಿತರಿದ್ದರು.
ಸಂವಿಧಾನದ ಕುರಿತು ಜಾಗೃತಿ ಮೂಡಿಸುವುದೇ ಇದರ ಉದ್ದೇಶ. ಮುಖ್ಯವಾಗಿ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ನಮ್ಮ ಸಂವಿಧಾನ ಇಡೀ ಪ್ರಪಂಚದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನವಾಗಿದೆ. ಸರ್ವರಿಗೂ ನ್ಯಾಯವನ್ನು ನೀಡುವ, ಎಲ್ಲರನ್ನೂ ಒಳಗೊಳ್ಳುವ ಸಂವಿಧಾನವಾಗಿದೆ. ಈ ಸಂವಿಧಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಸಂವಿಧಾನದ ಶ್ರೇಷ್ಠತೆಯು ಮರೆವಿಗೆ ಸಂದುತ್ತಿರುವ ಈ ಹೊತ್ತಿನಲ್ಲಿ ಇಂತಹದ್ದೊಂದು ಜಾಥಾ ಅಗತ್ಯ ಮಾತ್ರವಲ್ಲ ಅನಿವಾರ್ಯವೂ ಆಗಿದೆ.
