ಬೆಳಗಾಯಿತು ವಾರ್ತೆ
ಬಳ್ಳಾರಿ: ಸತತವಾಗಿ ಎರಡು ಬಾರಿ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ ಮುಂದುಡಲಾಗಿದ್ದು, ಇಂದು ತೆರೆ ಬಿದ್ದಿದೆ.
ಈ ಹಿಂದೆ ಮಹಾ ಪೌರರಾಗಿದ್ದ ತ್ರಿವೇಣಿ ಡಿ ಅವರು ರಾಜೀನಾಮೆ ನೀಡಿದ ನಂತರ ತಿಂಗಳು ಕಳೆದರು ಮೇಯರ್ ಆಯ್ಕೆಮಾಡಲು ಸಮಯ ತೆಗೆದುಕೊಳ್ಳಲಾಗಿತ್ತು.
ಕಾಂಗ್ರೆಸ್‌ನಲ್ಲಿ ಪಾಲಿಕೆ ಮೇಯರ್ ಆಗಲು ಶ್ರೀನಿವಾಸ್(ಮಿಂಚು), ಬಿ. ಶ್ವೇತಾ, ಕುಬೇರ, ಹನುಮಂತ್ ಗುಡಿಗಂಟೆ ಇವರ ಮದ್ಯೆ ಪೈಪೋಟಿ ಏರ್ಪಟ್ಟಿತ್ತು. ಆದರೆ, ಅದಕ್ಕೆ ಇಂದು ತೆರೆ ಬಿದ್ದಿದ್ದು, ಅಂತಿಮವಾಗಿ ಬಿ. ಶ್ವೇತಾ ಅವರು ಆಯ್ಕೆಯಾಗಿದ್ದಾರೆ.

