28.7 C
Bellary
Friday, March 14, 2025

Localpin

spot_img

ಮೇ 25,26 ರಂದು ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗಳು

ಬೆಳಗಾಯಿತು ವಾರ್ತೆ | www.belagayithu.in
ಕೊಪ್ಪಳ : ಬ್ಲೂ ಸ್ಟಾರ್ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಕೊಪ್ಪಳ ಹಾಗೂ ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಇವರ ಸಂಯುಕ್ತ ಆಶ್ರಯದಲ್ಲಿ ದಿ.25 ಹಾಗೂ 26 ರಂದು ನಗರದ ತಾಲೂಕು ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗಳನ್ನು ಏರ್ಪಡಿಸಲಾಗಿದೆ ಎಂದು ಬ್ಲೂ ಸ್ಟಾರ್ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಐ.ಎಸ್ ಬೊಮ್ಮನಾಳ ಹೇಳಿದರು.
ಅವರು ಮಂಗಳವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿದ್ದೇಶಿಸಿ ಮಾತನಾಡಿ ಈ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸ್ಪರ್ದಾಳುಗಳು ಭಾಗವಹಿಸುವರು ದಿ.25 ರಂದು ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ರಾಜ್ಯ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ರಾಘವೇಂದ್ರ ಬಳ್ಳಾರಿ,ವಾಣಿಜ್ಯೋದ್ಯಮಿ ಶ್ರೀನಿವಾಸ್ ಗುಪ್ತ ಹಾಗೂ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್, ಅವರು ಉದ್ಘಾಟಿಸುವರು.
ದಿ.26 ರಂದು ಬಹುಮಾನ ವಿತರಣಾ ಕಾರ್ಯಕ್ರಮಕ್ಕೆ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಜಿಲ್ಲಾಧಿಕಾರಿ ನಲಿನ್ ಅತುಲ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧ ಒಂಟಿಗೋಡಿ ಆಗಮಿಸುವರು.
ಪ್ರಥಮ ಬಹುಮಾನ 25ಸಾವಿರ ರೂಪಾಯಿಗಳು ಮತ್ತು ಟ್ರೋಫಿ,ದ್ವಿತೀಯ ಬಹುಮಾನ 20 ಸಾವಿರ ರೂಪಾಯಿಗಳು ಮತ್ತು ಟ್ರೋಫಿ, ತೃತೀಯ ಬಹುಮಾನ 15 ಸಾವಿರ ರೂಪಾಯಿಗಳು ಮತ್ತು ಟ್ರೋಪಿ, ಚತುರ್ಥ ಬಹುಮಾನ 10 ಸಾವಿರ ರೂಪಾಯಿಗಳು ಮತ್ತು ಟ್ರೋಫಿ.
ಎಲ್ಲಾ ತಂಡಗಳ ಆಟಗಾರರಿಗೆ ಊಟ ಮತ್ತು ವಸತಿಯನ್ನು ಒದಗಿಸಲಾಗುವುದು, ಪ್ರವೇಶ ಶುಲ್ಕ ಒಂದು ಸಾವಿರ ರೂಪಾಯಿಗಳು ಇರುತ್ತದೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಪ್ರಭು ನಿಡಶೇಸಿ, ಕಾರ್ಯದರ್ಶಿ ಸಿದ್ದು ಬುಳ್ಳಾ, ಸಲಹಾ ಸಮಿತಿ ಸದಸ್ಯರಾದ ನಾಗರಾಜ್ ಬಿ. ಉಪಸ್ಥಿತರಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles