ಶ್ರೀಷಡಕ್ಷರಿ ಅವಧೂತ ಮಹಾಸ್ವಾಮಿಗಳ 67ನೇ ಹುಟ್ಟು ಹಬ್ಬ ಆಚರಣೆ

ಬೆಳಗಾಯಿತು ವಾರ್ತೆ |Www.belagayithu.in
ಕುರುಗೋಡು : ಜನಪರ ಕಾಳಜಿಯಿಂದ ಬದುಕನ್ನು ಯಾವ ರೀತಿ ಮನುಷ್ಯ ಅರ್ಥಪೂರ್ಣವಾಗಿಸಿದ್ದಾನೆ ಎಂಬುದು ಮುಖ್ಯ. ಮನುಷ್ಯನಿಗೆ ತಿಳುವಳಿಕೆ ಬಂದ ಮೇಲೆ ಸಾರ್ಥಕತೆಗೆ ಹಲವಾರು ಅವಕಾಶ ಭಗವಂತ ಕಲ್ಪಿಸುತ್ತಾನೆ. ಆಗ ಅದನ್ನು ಸದವಕಾಶ ಎಂದು ಭಾವಿಸಿ ಸೇವೆ ಸಲ್ಲಿಸಿದಾಗ ಅದು ಭಗವಂತನಿಗೆ ಅರ್ಪಿತವಾಗುತ್ತದೆ ಎಂದು ಪಂಚ ಮಠಾಧೀಶರು ಶ್ರೀ ಷಡಕ್ಷರಿ ಅವಧೂತ ಮಹಾ ಸ್ವಾಮಿಗಳು ನುಡಿದರು.
ಪಟ್ಟಣ ಸಮೀಪದ ಸೋಮಲಾಪುರ ಗ್ರಾಮದ ಆರಾಧ್ಯ ದೈವ ಶ್ರೀ ಚಿದಾನಂದ ಸ್ವಾಮಿ ಅವಧೂತರ ಮಠದ ಪ್ರಾಂಗಣದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಂಚ ಮಠಾಧೀಶರು ಶ್ರೀ ಷಡಕ್ಷರಿ ಅವಧೂತ ಮಹಾ ಸ್ವಾಮಿಗಳು 67 ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡು ಆಶೀರ್ವಚನ ನೀಡಿದರು.
ದೇಹ ಭಾರವಾದಾಗ ಯೋಗ ಮಾಡಬೇಕು. ಮನಸ್ಸು ಭಾರವಾದಾಗ ಧ್ಯಾನಮಾಡಬೇಕು. ಸಂಪತ್ತು ಭಾರವಾದಾಗ ಧಾನವನ್ನು ಮಾಡು ಎಂದು ಹೇಳಿದ್ದಾರೆ. ಸಮಾಜ ಸೇವೆಯ ಮೂಲಕ ಸಿಕ್ಕಿದ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಿ. ಧರ್ಮ ಮತ್ತು ಕೀರ್ತಿ ಮಾತ್ರ ಎರಡು ಉಳಿಯುತ್ತದೆ. ಇನ್ನೆಲ್ಲವೂ ನಶ್ವರ ಎಂದರು.
ಶ್ರೀ ಜಡೇಶ ತಾತನವರು ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮದ ಭಕ್ತರು, ಸುತ್ತಮುತ್ತಲಿನ ಗ್ರಾಮದ ಭಕ್ತರು ಇದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles