ಮಹರ್ಷಿ ವಾಲ್ಮೀಕಿ ಗೋಪುರ ಕಳಸಾರೋಹಣ,ಶ್ರೀ ರಾಜ ಮದಕರಿ ನಾಯಕ ಪುತ್ಥಳಿ ಅನಾವರಣ

ಬೆಳಗಾಯಿತು ವಾರ್ತೆ |Www.belagayithu.in
ಕುರುಗೋಡು : ವಾಲ್ಮೀಕಿ ಅಭಿವೃದ್ಧಿ ನಿಮಗದಲ್ಲಿ ಕೋಟ್ಯಾಂತರ ಹಣ ದುರ್ಬಳಕೆಯಾಗಿರುವುದು ವಿಷಾಧನೀಯವಾಗಿದ್ದು, ಸರ್ಕಾರ ನಿಗಮದ ಹಣವನ್ನು ವಾಪಸ್ಸು ಪಡೆದು, ಸಮುದಾಯದ ಅಭಿವೃದ್ಧಿಗೆ ಸಮರ್ಪಕವಾಗಿ ಬಳಕೆ ಮಾಡಬೇಕು ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮಿ ಹೇಳಿದರು.
ತಾಲೂಕಿನ ಸೋಮಸಮುದ್ರ ಗ್ರಾಮದಲ್ಲಿ ಸಮಸ್ತ ವಾಲ್ಮೀಕಿ-ನಾಯಕ ಬಂಧುಗಲಿಂದ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಗೋಪುರ ಕಳಸಾರೋಹಣ ಮತ್ತು ಶ್ರೀ ರಾಜ ಮದಕರಿ ನಾಯಕ ಪುತ್ಥಳಿ ಅನಾವರಣ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು,
ಸಮಾಜ ಮುಖ್ಯವಾಹಿನಿಗೆ ತರುವ ಜತೆಗೆ ಸಾಮಾಜಿಕ ನ್ಯಾಯ ಕೊಡಬೇಕೆಂಬ ನಿಟ್ಟಿನಲ್ಲಿ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅವಕಾಶ ಮಾಡಿಕೊಟ್ಟಿದ್ದು ದುರುಪಯೋಗವಾದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವಾಪಸ್ಸು ಪಡೆದು, ಸಮುದಾಯದ ಅಭಿವೃದ್ಧಿಗೆ ಸಮರ್ಪಕವಾಗಿ ಬಳಕೆಯಾಗಲಿಸೋಮಸಮುದ್ರದಲ್ಲಿ ಮಹರ್ಷಿ ವಾಲ್ಮೀಕಿ ಗೋಪುರ ಕಳಸಾರೋಹಣ ಮತ್ತು ಶ್ರೀ ರಾಜ ಮದಕರಿ ನಾಯಕ ಪುತ್ಥಳಿ ಅನಾವರಣಗೊಳಿಸಿದ ನಂತರ ಪ್ರಸನ್ನಾನಂದಪುರಿ ಸ್ವಾಮಿ ಹೇಳಿದರು.
12ನೇ ಶತಮಾನದಲ್ಲಿ ದೊಡ್ಡ ಕ್ರಾಂತಿ ಮಾಡಿದ ಮಹಾನ್ ವ್ಯಕ್ತಿ ಬಸವಣ್ಣನವರು. ದೇಶದಲ್ಲಿ ಇನ್ನೂ ಜಾತಿ ಪಿಡುಗು ತೊಲಗಿಲ್ಲ. ಈ ದೇಶದಲ್ಲಿ ಜಾತಿ ಕಾರಣಕ್ಕಾಗಿ ಕೆಲವು ಸಮುದಾಯಗಳು, ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದಿದ್ದು, ಇವರಿಗೆ ಸಾಮಾಜಿಕ ನ್ಯಾಯ ಕೊಡಬೇಕಾಗಿದೆ. ಅಂಬೇಡ್ಕರ್ ಅವರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದ ಸಮುದಾಯವನ್ನು ಗುರುತಿ, ದೇಶದಲ್ಲಿ 1101 ಜಾತಿಯನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಹಾಗೂ 706 ಜಾತಿಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಿದರು. ಕರ್ನಾಟಕದಲ್ಲಿ 101 ಜಾತಿಗಳು ಪರಿಶಿಷ್ಟ ಜಾತಿಗೆ 50 ಜಾತಿಗಳು ಪರಿಶಿಷ್ಟ ಪಂಗಡದಲ್ಲಿ ಉಳಿದವು. ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರೂ, ಎಸ್ಸಿ, ಎಸ್ಟಿ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು. ಮತ್ತು ಸಾಮಾಜಿಕ ನ್ಯಾಯ ಕೊಡಿಸಬೇಕೆಂಬ ನಿಟ್ಟಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅವಕಾಶ ಮಾಡಿಕೊಟ್ಟರು. ಇದರಿಂದ ಮುಖ್ಯವಾಹಿನಿಗೆ ತರಲು ಇಂದಿಗೂ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ.
2006ರಲ್ಲಿ ಈ ದೇಶದಲ್ಲಿ ಕುಲ್‌ದೀಪ್‌ಸಿಂಗ್ ಆಯೋಗ ಬಂತು. ರಾಜ್ಯದಲ್ಲಿ 2008ರಲ್ಲಿ ವಿಧಾನಸಭಾ ಚುನಾವಣೆ ಬಂದಾಗ ಚುನಾವಣೆ ಆಯೋಗ ಸೂಚಿಸಿದ ಹಿನ್ನಲೆ ಅಂದು ಸರ್ವ ಪಕ್ಷದ ಸಭೆ ನಡೆಸಿ, ನಮ್ಮ ಜಾತಿಯ ಅನುಗುಣವಾಗಿ ಕರ್ನಾಟಕದಲ್ಲಿ 15 ವಿಧಾನಸಭಾ ಮತ್ತು 2 ಅಸೆಂಬ್ಲಿ ಕ್ಷೇತ್ರಗಳು ನಿಗದಿಯಾದವು. ಅದೇ ಮಾದರಿಯಲ್ಲಿ ಗ್ರಾಪಂ, ತಾಪಂ, ಜಿಪಂ, ಪುರಸಭೆಗೆ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ರಾಜಕೀಯ ಪ್ರಾತಿನಿತ್ಯ ಕೊಟ್ರು. ಹಿಂದಿನ ಸಿದ್ದರಾಮಯ್ಯನವರ ಸರ್ಕಾರದ ಮೊದಲನೇ ಕ್ಯಾಬಿನೆಟ್‌ನಲ್ಲಿ ಆರ್ಥಿಕ ಪ್ರಾತಿನಿತ್ಯ ನೀಡಬೇಕೆಂಬ ತೀರ್ಮಾನ ಕೈಗೊಂಡು, ವಿವಿಧ ಇಲಾಖೆಗೆ ಹಣ ಹಂಚಿಕೆ ಮಾಡಲಾಯಿತು. ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಳವಾಗಬೇಕೆಂಬ ಹಿನ್ನಲೆ ಸರ್ಕಾರಕ್ಕೆ ಒತ್ತಾಯ ಮಾಡಿದಾಗ ಪರಿಶಿಷ್ಟ ಪಂಗಡವರಿಗೆ ಶೇ.3 ರಿಂದ 7ಕ್ಕೆ ಮೀಸಲಾತಿ ಹೆಚ್ಚಿಸಲಾಯಿತು. ಪರಿಶಿಷ್ಟ ಜಾತಿಗೆ ಶೇ.15ರಿಂದ 17ಕ್ಕೆ ನೀಡಲಾಯಿತು. ರಾಜ್ಯದ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಸುಮಾರು 187 ಕೋಟಿ ದುರುಪಯೋಗದ ಸಂಬಂಧ ಸಿಎಂ ಅವರನ್ನು ಭೇಟಿ ಮಾಡಿದಾಗ, 187 ಕೋಟಿಯಲ್ಲಿ 86 ಕೋಟಿ ಹಣ ದುರ್ಬಳಕೆಯಾಗಿದೆ. ಅದರಲ್ಲಿ 54ಕೋಟಿ ರಿಕವರಿ ಮಾಡಿ, ಫ್ರಿಜ್ ಮಾಡಲಾಗಿದೆ. ಈ ವರ್ಷದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಅಂದಾಗ ಫ್ರಿಜ್ ಮಾಡಿರುವ ಹಣವನ್ನ ಬಿಡುಗಡೆ ಮಾಡಿ, ಅಧಿಕಾರಿಗಳಿಗೆ ಸೂಚನೆ ಕೊಡುತ್ತೇವೆ. ಬಾಕಿ ಹಣ ವಾಪಸ್ಸು ಪಡೆಯಲು ಎಸ್‌ಐಟಿ ತನಿಖೆ ಮಾಡುತ್ತಿದೆ. ಬಾಕಿ ಹಣವನ್ನ ಸಹ ನಾವು ಸರ್ಕಾರದಿಂದ ಭರಿಸುವ ಭರವಸೆ ನೀಡಿದ್ದಾರೆ. ಕಳೆದ ಎರಡು ವರ್ಷದಿಂದ ಬಹುತೇಕ ಎಸ್ಟಿ ಮಕ್ಕಳಿಗೆ ಕಾಲ್‌ಶಿಪ್ ಇಲ್ಲ. ಪ್ರೈಸ್ ಮನಿ ಕೊಟ್ಟಿಲ್ಲ. ವಿಧಾನಸಭಾ ಕ್ಷೇತ್ರಕ್ಕೆ 25 ಬೋರ್ ಕೊಡುತ್ತಿದ್ದರು. ಆದರೆ, ಈಗ ಎರಡ್ಮೂರು ಬೋರೆ ಕೊಡುತ್ತಿದ್ದಾರೆ. ಈ ಸಮುದಾಯವನ್ನು ಆರ್ಥಿಕವಾಗಿ ಮುನ್ನೆಲೆಗೆ ಹಾಗೂ ಮುಖ್ಯವಾಹಿನಿಗೆ ತರಬೇಕೆಂಬ ಹಿನ್ನಲೆ ಮೀಸಲಿಟ್ಟ ಹಣವನ್ನು ದುರುಪಯೋಗ ಮಾಡಿರುವುದು ಗೋಚನೀಯವಾಗಿದೆ. ಸಮಾಜದ ಮಕ್ಕಳಿಗೆ, ವ್ಯಕ್ತಿಗಳಿಗೆ, ಫಲಾನುಭವಿಗಳಿಗೆ ಅನ್ಯಾಯವಾಗಬಾರದು. ಪಕ್ಷ ಬೇಧ ಮರೆತು, ಎಲ್ಲರು ಒಟ್ಟಾಗಿ ಬಹುತೇಕ ಪರಿಶಿಷ್ಟ ಜಾತಿ ಮತ್ತು ವರ್ಗದರ ಹಣ ಸಮಪರ್ಕವಾಗಿ ಬಳಕೆ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದರು.
ಈ ಸಂದರ್ಭದಲ್ಲಿ ಸೋಮಲಾಪುರದ ಶ್ರೀ ಷಡಕ್ಷರಿ ಅವಧೂತರು, ಮಾಜಿ ಸಚಿವ ಬಿ.ಶ್ರೀರಾಮುಲು, ಹಾಲಿ ಶಾಸಕ ಜೆ.ಎನ್.ಗಣೇಶ, ಮಾಜಿ ಶಾಸಕ ಟಿ.ಎಚ್.ಸುರೇಶಬಾಬು, ಗ್ರಾಪಂ ಅಧ್ಯಕ್ಷೆ ಶಾರದಾ ಪವಾಡಿ ರಮೇಶ, ಶಿವಮೊಗ್ಗದ ಶಿಲ್ಪಿ ವಿನಾಯಕ, ಮುಖಂಡರಾದ ಎಂ.ಹನುಮಂತಪ್ಪ, ಎಂ.ರಮೇಶ, ಎಂ.ನಾಗರಾಜ, ಸಿ.ಎನ್.ತಿಪ್ಪೇಸ್ವಾಮಿ, ಪವಾಡಿ ಚಿದಾನಂದ, ಮಧು, ಬಿ.ಎನ್.ಚಂದ್ರಶೇಖರ ಸೇರಿದಂತೆ ಅನೇಕರಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles