26.9 C
Bellary
Tuesday, June 11, 2024

Localpin

spot_img

ಬಳ್ಳಾರಿ:ಬರ ಪರಿಹಾರ ಹಣ ಬಿಡುಗಡೆ

ಬೆಳಗಾಯಿತು ವಾರ್ತೆ | www.belagayithu.in
ಬಳ್ಳಾರಿ:ಜಿಲ್ಲೆಯನ್ನು ಬರಗಾಲ ಬರಪೀಡಿತ ಎಂದು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲೆಯ 36,944 ರೈತರ ಖಾತೆಗೆ ಎರಡು ಹಂತಗಳಲ್ಲಿ ಡಿಬಿಟಿ ಮೂಲಕ ಒಟ್ಟು 41.40 ಕೋಟಿ ರೂ. ಗಳನ್ನು ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
2023-24 ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಎಲ್ಲಾ 05 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು  ಸರ್ಕಾರವು ಘೋಷಣೆ ಮಾಡಿದೆ. ಮುಂಗಾರು ಹಂಗಾಮಿನಲ್ಲಿ ಹಾನಿಯಾಗಿರುವ ಬೆಳೆಗಳಿಗೆ ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿಯ ಆಧಾರದ ಮೇರೆಗೆ ಫ್ರೂಟ್ಸ್ ಐಡಿ ಹೊಂದಿರುವ, ಪಹಣಿ ಜೋಡಣೆಯಾಗಿರುವ ರೈತರಿಗೆ ಡಿಬಿಟಿ ಮೂಲಕ ಎಸ್‍ಡಿಆರ್‍ಎಫ್ ಮಾರ್ಗಸೂಚಿಯಂತೆ ಈಗಾಗಲೇ 9 ಕಂತುಗಳಲ್ಲಿ ಮೊದಲನೆ ಕಂತಾಗಿ ಗರಿಷ್ಠ ರೂ.2000 ರವರೆಗೆ ಒಟ್ಟು 36,944 ರೈತರಿಗೆ ರೂ.7.26 ಕೊಟಿ ಪರಿಹಾರ ಬೆಳೆ ಹಾನಿ ಪರಿಹಾರವನ್ನು  ವಿತರಿಸಲಾಗಿದೆ.
ಎರಡನೇ ಹಂತದಲ್ಲಿ ಜಿಲ್ಲೆಯ ಅರ್ಹ 31351 ರೈತರುಗಳಿಗೆ ಎನ್‍ಡಿಆರ್‍ಎಫ್ ಮಾರ್ಗಸೂಚಿನ್ವಯ ರೂ.34.03 ಕೋಟಿ ಪರಿಹಾರವನ್ನು (ಇನ್ ಪುಟ್ ಸಬ್ಸಿಡಿ) ವಿತರಣೆ ಮಾಡಲು ಅನುಮೋದನೆ ನೀಡಿ, ಡಿಬಿಟಿ ಮೂಲಕ ರೈತರ ಖಾತೆಗೆ ಜಮೆ ಮಾಡಲಾಗಿರುತ್ತದೆ. ಇಲ್ಲಿಯವರೆಗೆ ಜಿಲ್ಲೆಯ 2 ಹಂತದಲ್ಲಿ ಒಟ್ಟು 36944 ರೈತರಿಗೆ ರೂ.41.30 ಕೋಟಿಗಳನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ ಎಂದು ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
ಬೆಳೆ ಹಾನಿ ಪರಿಹಾರ ಹಣ ಖಾತೆಗೆ ಜಮಾ ಆಗದೇ ಇರುವ ಬಗ್ಗೆ ದೂರುಗಳನ್ನು ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ, ಜಿಲ್ಲಾ ಮತ್ತು ತಾಲ್ಲೂಕುವಾರು ಸಹಾಯವಾಣಿ ತೆರೆಯಲಾಗಿದೆ. ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬಹುದು.
ಜಿಲ್ಲಾ, ತಾಲ್ಲೂಕುವಾರು ಸಹಾಯವಾಣಿ ಸಂಖ್ಯೆ:
ಜಿಲ್ಲಾಧಿಕಾರಿಗಳ ಕಾರ್ಯಾಲಯದ ದೂ.1077 ಅಥವಾ 08392-277100, ಬಳ್ಳಾರಿ ತಾಲ್ಲೂಕು ತಹಶೀಲ್ದಾರರ ಕಚೇರಿಯ ದೂ.08392-297472, ಸಂಡೂರು ತಹಶೀಲ್ದಾರರ ಕಚೇರಿಯ ದೂ.08395-260241, ಸಿರುಗುಪ್ಪ ತಹಶೀಲ್ದಾರರ ಕಚೇರಿಯ ದೂ.08396-220238, ಕುರುಗೋಡು ತಹಶೀಲ್ದಾರರ ಕಚೇರಿಯ ದೂ.08393-200014, ಕಂಪ್ಲಿ ಕುರುಗೋಡು ತಹಶೀಲ್ದಾರರ ಕಚೇರಿಯ ದೂ.08394-295554 ಗೆ ಸಂಪರ್ಕಿಸಬಹುದು.
ಬೆಳೆ ಹಾನಿ ಪರಿಹಾರ ಪಡೆದುಕೊಳ್ಳಲು ಫ್ರೂಟ್ಸ್ ಐಡಿಗೆ ಪಹಣಿ ಜೋಡಣೆ ಕಡ್ಡಾಯವಾಗಿರುವುದರಿಂದ ಇದುವರೆಗೂ ಫ್ರೂಟ್ಸ್ ಐಡಿ ನೋಂದಣಿ ಮಾಡಿಕೊಳ್ಳಲ್ಲದ ರೈತರು ತಮ್ಮ ಆಧಾರ್, ಪಹಣಿ ಹಾಗೂ ಬ್ಯಾಂಕ್ ಪಾಸ್‍ಬುಕ್ ದಾಖಲೆಗಳನ್ನು ತೆಗೆದುಕೊಂಡು ಹತ್ತಿರದ ಕಂದಾಯ, ಕೃಷಿ ಅಥವಾ ತೋಟಗಾರಿಕೆ ಇಲಾಖೆಗಳ ಕಚೇರಿಗಳಿಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಅಂತಹ ರೈತರು ಬೆಳೆ ಪರಿಹಾರ ಹಣ ಪಡೆದುಕೊಳ್ಳಲು ಅರ್ಹರಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles