ಬೆಳಗಾಯಿತು ವಾರ್ತೆ
ಬಳ್ಳಾರಿ: ನಗರದ ಕೌಲ್ ಬಜಾರ್ ಪ್ರದೇಶದ ಫ್ಲೈ ಓವರ್ ಬ್ರಿಡ್ಜ್ ಮೇಲೆ ಭಾನುವಾರ ಆಟೋ ಮತ್ತು ಬೈಕ್ ಡಿಕ್ಕಿಯಾಗಿ ಮಿಲ್ಲರ್ ಪೇಟೆಯ ಬೈಕ್ ಸವಾರ ವೀರೇಶ್ ಎಂಬ ವ್ಯಕ್ತಿ ಗಂಭೀರ ಗಾಯಗೊಂಡಿತ್ತು ನಗರದ ಟಿಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರ ಸಹೋದರ ಬಿ.ವೆಂಕಟೇಶ್ ಪ್ರಸಾದ್ ಅವರು ಖಾಸಗಿ ಕಾರ್ಯಕ್ರಮ ಹೋಗಿ ಬರುವ ವೇಳೆ ಘಟನೆ ನಡೆದಿದ್ದು, ತಕ್ಷಣ ಬಿ. ವೆಂಕಟೇಶ್ ಪ್ರಸಾದ್ ಅವರು ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದರು.