ಬೆಳಗಾಯಿತು ವಾರ್ತೆ
ಬಳ್ಳಾರಿ: ಭರತ ನಾಟ್ಯ ದಕ್ಷಿಣ ಭಾರತದ ಪಾರಂಪರಿಕ ವಾಗಿದೆ. ಇದು ಬಹಳ ಹಿಂದಿನ ಕಲೆಯಾಗಿದ್ದು, ನಾವು ಈ ಕಲೆ ಯನ್ನು ಉಳಿಸಿಕೊಂಡು ಬೆಳೆಸಬೇಕಾಗಿದೆ ಎಂದು ಸರಳಾ ದೇವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎ.ಎಂ ಕಾಳಮ್ಮ ಅವರು ಹೇಳಿದರು.
ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೊಂಗೀರಣ ಸಭಾಂಗಣದಲ್ಲಿ ಸುಜಾತಾ ಕಲಾ ಟ್ರಸ್ಟ್ ವತಿಯಿಂದ ಭಾನುವಾರ ಆಯೋಜಿಸಿದ್ದ ನೂಪುರೋತ್ಸವ -2023 ಗೆಜ್ಜೆ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭರತನಾಟ್ಯ ಅದ್ಭುತ ಕಲೆ ಈ ಕಲೆಯನ್ನು ಹಿಂದಿನ ಕಾಲದಲ್ಲಿ ಹೆಚ್ಚು ಬಳಸುತ್ತಿದ್ದರು. ಆದರೆ ಕ್ರಮೇಣವಾಗಿ ಅದು ಕಣ್ಮರೆಯಾಗುತ್ತಿದೆ. ಈ ಕಲೆಯನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ಪರಿಚಯ ಮಾಡಬೇಕಾದರೆ ಇಂದು ನಾವು ಈ ಭರತನಾಟ್ಯ ಕಲೆಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರು.
ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ನಿಷ್ಠಿರುದ್ರಪ್ಪ ಅವರು ಮಾತನಾಡಿ, ಭಾರತ ಪ್ರಾಚೀನ ಕಲೆ ಈ ಭರತನಾಟ್ಯ ವಾಗಿದೆ.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳು ತಮ್ಮ ತಮ್ಮ ಆಲೋಚನೆಗೆ ತಕ್ಕಂತೆ ಬದಲಾಗಬೇಕು. ಕುಟುಂಬಸ್ಥರು ಮಕ್ಕಳ ಮೇಲೆ ಒತ್ತಡ ಹೇರದೆ ಅವರ ಕಲೆಗೆ ಹೆಚ್ಚು ಒತ್ತು ನೀಡಬೇಕು ಎಂದರು.
ಬಳ್ಳಾರಿಯ ಅನೇಕ ಸಂಘ ಸಂಸ್ಥೆಗಳು ಕಲೆಗೆ ಹೆಚ್ಚು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಕಾರ್ಯಕ್ರಮ ಮಾಡಲಾಗುತ್ತಿದೆ. ಇದರ ಸದುಪಯೋಗ ಪಡೆಯಬೇಕು ಎಂದು ಅವರು ಹೇಳಿದರು.
ನಂತರ ಬಳ್ಳಾರಿ ಬೆಳಗಾಯಿತು ದಿನ ಪತ್ರಿಕೆಯ ಸಹ ಸಂಪಾದಕರಾದ ವಿ. ಅನೂಪ್ ಕುಮಾರ್ ಮಾತನಾಡಿ, ಭರತನಾಟ್ಯ ಅಂದು ದೇವಸ್ಥಾನದಲ್ಲಿ ಪ್ರಾಮುಖ್ಯತೆ ಇತ್ತು ಆದರೆ ಇಂದು ನಾವು ಎಲ್ಲಾ ಕಡೆ ಈ ಕಲೆ ನೋಡಬಹುದುದಾಗಿದೆ. ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಇಂತಹ ಕಲೆಗಳನ್ನು ಮೈಗೂಡಿಸಿಕೊಂಡರೆ ಉತ್ತಮ ಸ್ಥಾನಕ್ಕೆ ಎರಬಹುದು. ಜೊತೆಗೆ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಇಂತಹ ಕಲೆಗಳನ್ನು ಬೆಳೆಸಬೇಕು ಎಂದರು.
ಈ ಸಂದರ್ಭದಲ್ಲಿ ಜೆ. ನಿರ್ಮಲಾ, ಕಲಾವಿದ ಕೆ. ಜಗದೀಶ್, ಬಳ್ಳಾರಿ ಬೆಳಗಾಯಿತು ದಿನ ಪತ್ರಿಕೆಯ ಸಹ ಸಂಪಾದಕರಾದ ವಿ. ಅನೂಪ್ ಕುಮಾರ್, ರಾಜೇಶ್ವರಿ, ಮಹೇಂದ್ರ ಕಲ್ ಹನುಮಂತ, ಶ್ರೀಮನ್ ನಾರಾಯಣ, ವಿಜೆಯೇಂದ್ರ ಸೇರಿದಂತೆ ಇತರರು ಹಾಜರಿದ್ದರು.