ಪದೋನ್ನತಿ ಬಳಿಕ ಸಿರುಗುಪ್ಪ ಉಪವಿಭಾಗಕ್ಕೆ ರಾಧಾಕೃಷ್ಣ ಕರ್ತವ್ಯಕ್ಕೆ ಹಾಜರು

ಬೆಳಗಾಯಿತು ವಾರ್ತೆ| Www.belagayithu.in
ಸಿರುಗುಪ್ಪ: ಕುರುಗೋಡು ಉಪವಿಭಾಗದಲ್ಲಿ ಮಾರ್ಗದಾಳು ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ರಾಧಾಕೃಷ್ಣ ಅವರು ಮೆಕಾನಿಕ್ ಗ್ರೇಡ್–2 (GR-2) ಹುದ್ದೆಗೆ ಪದೋನ್ನತಿ ಹೊಂದಿದ್ದು, ಸಿರುಗುಪ್ಪ ಉಪವಿಭಾಗಕ್ಕೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಗುರುವಾರ ಕರ್ತವ್ಯಕ್ಕೆ ಹಾಜರಾದರು.
ಸಿರುಗುಪ್ಪ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಗಾಯತ್ರಿ ಅವರು ರಾಧಾಕೃಷ್ಣ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ಕರ್ತವ್ಯಕ್ಕೆ ಹಾಜರುಪಡಿಸಿಕೊಂಡರು.
ಈ ಸಂದರ್ಭದಲ್ಲಿ ಪ್ರಾಥಮಿಕ ಸಮಿತಿ ಅಧ್ಯಕ್ಷರು, ಉಪವಿಭಾಗದ ಅಧಿಕಾರಿಗಳು, ಸಿಬ್ಬಂದಿ, ಜಿವಿಪಿ (GVP) ಮಿತ್ರರು ಹಾಗೂ ಎಲ್ಲಾ ನೌಕರರು ಉಪಸ್ಥಿತರಿದ್ದು, ರಾಧಾಕೃಷ್ಣ ಅವರಿಗೆ ಶುಭಾಶಯಗಳನ್ನು ಕೋರಿದರು.
ಪದೋನ್ನತಿ ಹೊಂದಿರುವ ರಾಧಾಕೃಷ್ಣ ಅವರು ತಮ್ಮ ಅನುಭವವನ್ನು ಸಿರುಗುಪ್ಪ ಉಪವಿಭಾಗದ ಅಭಿವೃದ್ಧಿ ಹಾಗೂ ಉತ್ತಮ ಸೇವೆಗಾಗಿ ಬಳಸಿಕೊಳ್ಳುವುದಾಗಿ ತಿಳಿಸಿದರು.


Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles