ಕೆಂಪು ಮಣ್ಣಿನ ಪರಿಸರ ಸ್ನೇಹಿ ಗಣೇಶ ತಯಾರಿಸಿದ: ಸಹನ

ಬೆಳಗಾಯಿತು ವಾರ್ತೆ |Www.belagayithu.in
ಕುರುಗೋಡು: ಸಿರಿಗೇರಿ ಗ್ರಾಮದ ದಾರುಕ ನಗರದ ಬಿ. ಎಸ್ಸಿ. ವಿದ್ಯಾರ್ಥಿನಿ ಎಸ್.ಎಂ. ಸಹನ ಕೆಂಪು ಮಣ್ಣಿನ ಪರಿಸರಸ್ನೇಹಿ ಗಣೇಶ ವಿಗ್ರಹವನ್ನು ಪ್ರತಿ ವರ್ಷದಂತೆ ತಮ್ಮ ಮನೆಯಲ್ಲಿ ಕೂರಿಸಲು ಸ್ವಯಂ ಪ್ರೇರಿತರಾಗಿ ತಾವೇ ತಯಾರಿಸುತ್ತಿದ್ದಾರೆ.
ಮಾತನಾಡಿದ ಅವರು ಪರಿಸರಕ್ಕೆ ಮಾರಕವಾಗಿರುವ ಪಿ.ಒ.ಪಿ. ಗಣೇಶ ಮೂರ್ತಿಗಳ ತಯಾರಿಕೆ ಮತ್ತು ಮಾರಾಟದ ಜೊತೆಗೆ ವಿಸರ್ಜನೆಯನ್ನು ನಿಷೇಧಿಸಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಸ್ವಾಗತ ಅರ್ಹವಾಗಿದೆ. ಬಣ್ಣದ ವಿಗ್ರಹಗಳನ್ನು ಸ್ಥಾಪಿಸಿ ಪೂಜಿಸಿದ ನಂತರ ಹಳ್ಳ,ಕೆರೆ, ಬಾವಿ, ಕಾಲುವೆಗಳಿಗೆ ವಿಸರ್ಜಿಸುವುದರಿಂದ ರಾಸಾಯನಿಕ ಬಣ್ಣಗಳಿಂದ ಜಲಮೂಲಗಳಿಗೆ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಹಾನಿಯಾಗುವುದರಿಂದ ಪ್ರತಿಯೊಬ್ಬರು ಗಣೇಶ ಹಬ್ಬವನ್ನು ಯಾವುದೇ ಹಾನಿಕರವಾಗದಂತೆ ಜಿಲ್ಲಾಧಿಕಾರಿಗಳ ಆದೇಶದಂತೆ ಪರಿಸರಸ್ನೇಹಿ ಗಣೇಶ ಮೂರ್ತಿ ಬಳಕೆಗೆ ಎಲ್ಲರೂ ಮುಂದಾಗಿ ಎಂದು ಹೇಳಿದರು.
ಕಳೆದ ಐದು ವರ್ಷಗಳಿಂದ ಪಿ.ಓ.ಪಿ ಗಣೇಶ ನಿಲ್ಲಿಸಿ ನಾನೇ ಸ್ವತಃ ತಯಾರಿ ಮಾಡಿದ ವಿವಿಧ ರೀತಿಯ ಪರಿಸರ ಸ್ನೇಹಿ ವಿಭೂತಿ ಗಣೇಶ, ಗಂಧದ ಗಣೇಶ ,ಅರಿಶಿಣ ಗಣೇಶ, ಕರಿ ಮಣ್ಣಿನ ಗಣೇಶ, ಮಾಡಿ ಓಣಿಯ ಅಕ್ಕಪಕ್ಕದವರಿಗೆ ಮಣ್ಣಿನ ಗಣೇಶ ಉಚಿತ ವಿತರಿಸಿ ಪರಿಸರ ಜಾಗೃತಿ ಮೂಡಿಸುತ್ತಿದ್ದೇನೆ ಎಂದರು.
ನಮ್ಮ ನಾಡಿನಲ್ಲಿ ಗಣೇಶ ಚತುರ್ಥಿ ಹಬ್ಬ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಮನೆಮನೆಗಳಲ್ಲಿ ವಿಜ್ಞಾನಿವಾರಕ ವಿದ್ಯಾ ಕರುಣಿಸುವ ಗಣೇಶನಿಗೆ ಮೊದಲ ಪೂಜೆ ನಮ್ಮದಾಗಿದೆ.
ಈ ವರ್ಷ ಕೆಂಪು ಮಣ್ಣಿನ ಪರಿಸರ ಸ್ನೇಹಿ ಗಣೇಶ ಮಾಡಿ ಜಾಗೃತಿ ಮೂಡಿಸುತ್ತಿದ್ದೇನೆ. ಕುಂಬಾರ ಮಣ್ಣು ತಂದು ಹದ ಮಾಡಿ ಸಿಂಹಾಸನದ ಮೇಲೆ ಕುಳಿತ ಗಣೇಶನಿಗೆ ಕಿರೀಟ, ಕೊರಳಲ್ಲಿಸರ, ಮಡಿವಸ್ತ್ರ, ಕೈ ಪಟ್ಟಿ, ಗಣೇಶನ ಮೂಷಕ ವಾಹನ, ಮೋದಕ, ಹೀಗೆ ವಿವಿಧ ರೀತಿಯಲ್ಲಿ ಮಣ್ಣಿನಲ್ಲಿ ಅಲಂಕಾರ ಮಾಡಿ ತಯಾರಿಸಿದ್ದೇನೆ ಎಂದರು.
ಗಣಪತಿಗೆ ಎಕ್ಕೆ ಹೂವು, ಗರಿಕೆ, ವಿವಿಧ ಹೂಗಳನ್ನು ಇಟ್ಟು 21 ಕಡುಬು ನೈವಿದ್ಯ ಸಮರ್ಪಿಸಿ, ಪರಿಸರ ಸ್ನೇಹಿ ಗಣೇಶ ಹಬ್ಬವನ್ನು ಕುಟುಂಬದೊಂದಿಗೆ ಮತ್ತು ಓಣಿಯವರೆಯೊಂದಿಗೆ, ಬಿ ಎಸ್ಸಿ .ವಿದ್ಯಾರ್ಥಿನಿ ಎಸ್.ಎಮ್. ಸಹನಾ ಪರಿಸರಸ್ನೇಹಿ ಗಣೇಶ ಹಬ್ಬವನ್ನು ಆಚರಿಸಿ ಜಾಗೃತಿ ಮೂಡಿಸಿ, ಮೂರು ದಿನಗಳ ಪೂಜೆ ಸಲ್ಲಿಸಿದ ನಂತರ ಗಣೇಶನನ್ನು ಕೆರೆಬಾವಿಗಳಿಗೆ ಹಾಕದೆ ಮನೆ ಅಂಗಳದಲ್ಲಿರುವ ಗಿಡಗಳ ಹತ್ತಿರ ಬಕೀಟಿನಲ್ಲಿ ನೀರು ಹಾಕಿ ಭಕ್ತಿಯಿಂದ ಪೂಜೆ ಸಲ್ಲಿಸಿ ಪರಿಸರಕ್ಕೆ ಹಾನಿಯಾಗದಂತೆ ವಿಸರ್ಜನೆ ಮಾಡುವುದು ವಿಶೇಷ ಬಕೆಟ್ ನಲ್ಲಿರುವ ಗಣೇಶ ಕರಗಿದ ನಂತರ ನೀರನ್ನು ಗಿಡಗಳಿಗೆ ಹಾಕಿ ಹೀಗೆ ಕಳೆದ 5 ವರ್ಷಗಳಿಂದ ವಿವಿಧ ರೀತಿಯ ಮಣ್ಣಿನ ಗಣೇಶ ಮಾಡಿ ಜಾಗೃತಿ ಮೂಡಿಸುತ್ತಿದ್ದಾಳೆ. ಸಿರಿಗೇರಿ ಗ್ರಾಮದ ಬಿ.ಎಸ್ಸಿ. ವಿದ್ಯಾರ್ಥಿನಿ ಎಸ್. ಎಂ. ಸಹನಾ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles