ಮಣ್ಣಿನ ಗಣಪ ಮನೆಯಲ್ಲೇ ವಿಸರ್ಜಿಸುವ ಕೆಲಸವಾಗಲಿ

ಬೆಳಗಾಯಿತು ವಾರ್ತೆ |Www.belagayithu.in
ಕೊಟ್ಟೂರು : ಪ್ರತಿ ವರ್ಷವೂ ವೈಭವದಿಂದ ಸಂತೋಷದಿಂದ ಭಕ್ತಿಯಿಂದ ಮಣ್ಣಿನ ಗಣಪತಿಯನ್ನು ತಂದು ಪ್ರತಿಷ್ಠಾಪನೆ ಮಾಡುತ್ತೇವೆ. ಆದರೆ ಗಣಪತಿಯನ್ನು ಯಾಕೆ ಬಾವಿಗೆ ಹಾಕುತ್ತೀರಾ? ನಾವು ಪ್ರತಿ ವರ್ಷವೂ ಗಣಪತಿಯನ್ನು ಬಾವಿಗೆ ಹಾಕುತ್ತಾ ಬಂದಿದ್ದೇವೆ. ಆದರೆ ಸ್ವಲ್ಪ ನಮ್ಮ ಮನೋಭಾವನೆ ಬದಲಾಯಿಸಿಕೊಳ್ಳೋಣ ಯಾಕೆ ಅಂದರೆ?
ಇದೇ ಮಣ್ಣಿನ ಗಣಪತಿಯನ್ನು ಮನೆಯಲ್ಲೇ ವಿಸರ್ಜನೆ ಮಾಡಬಹುದು ಒಂದು ಬಕೆಟ್ ನಲ್ಲಿ ಮಣ್ಣಿನ ಗಣಪತಿಯನ್ನು ವಿಸರ್ಜನೆ ಮಾಡುವುದರಿಂದ ಆ ಮಣ್ಣನ್ನು ಮರುಬಳಕೆ ಮಾಡಿಕೊಳ್ಳಬಹುದು. ವಿಸರ್ಜನ ಮಾಡಿದ ಗಣಪನ ಮಣ್ಣನ್ನು ಒಂದು ತುಳಸಿ ಗಿಡ ಹಾಕಬಹುದು ಅಥವಾ ಯಾವುದಾದರೂ ಗಿಡವನ್ನು ಹಾಕಬಹುದು.ಆದರಿಂದ ವರ್ಷಪೂರ್ತಿ ಆ ಮಣ್ಣಿನ ಮೂಲಕ ಗಣೇಶ ನಮಗೆ ಆಶೀರ್ವಾದ ಮಾಡುತ್ತಾನೆ ಎಂದು ನಮ್ಮಮನೋಭಾವನೆ ಇರುತ್ತದೆ.
ಅದರ ಜೊತೆಗೆ ಬಾವಿಗೆ ಮಣ್ಣಿನ ಗಣೇಶನನ್ನು ಹಾಕುವುದರಿಂದ ಆ ಮಣ್ಣು ಬಳಕೆ ಆಗುವುದಿಲ್ಲ ಮಣ್ಣಿನಿಂದ ಮಣ್ಣು ಉಳಿಯಬೇಕಿದೆ ಜಗತ್ತು ಉಳಿಯಬೇಕಿದೆ. ದಯಮಾಡಿ ಮಣ್ಣಿನ ಬೆಳೆಸೋಕೆ ಮಣ್ಣಿನ ಫಲವತ್ತೆಗೆ ಹೆಚ್ಚಿನ ಕೆಲಸ ಮಾಡೋಣ ಆದ್ದರಿಂದ ಮಣ್ಣಿನ ಗಣಪತಿಯನ್ನು ಮನೆಯಲ್ಲೇ ವಿಸರ್ಜನೆ ಮಾಡಿ ಮಣ್ಣನ್ನು ಉಳಿಸುವ ಕೆಲಸ ಮಾಡಬೇಕಿದೆ ಎಂದು ಹಸಿರು ಹೊನಲು ತಂಡ ಸರ್ವ ಸದಸ್ಯರ ಪರವಾಗಿ ಬಂಜಾರ್ ನಾಗರಾಜ್ ಜನರಿಗೆ ಜಾಗೃತಿ ಗೊಳಿಸುತ್ತಿದ್ದಾರೆ.
ಯಾರಾಗಲಿ ಮನೆಯಲ್ಲಿ ಮಣ್ಣಿನ ಗಣಪತಿ ಪ್ರತಿಷ್ಠಾಪನೆ ಮಾಡಿ ಇರುವವರು ಮನೆಯಲ್ಲೇ ವಿಸರ್ಜನೆ ಮಾಡುವ ಕೆಲಸವಾಗಲಿ ಆಮನ್ನು ಮರುಬಳಕೆಯಾಗಲಿ ಆ ಮೂಲಕ ಅರ್ಥಗರ್ಭಿತವಾದ ವಿವೇಕಾನ ವಿವೇಕವಾಗಲಿ ಗಣಯೋತ್ಸವ ವಾಗಲಿ ನಮ್ಮೆಲ್ಲರ ಆಶಯಹಸಿರು ಹೊನಲು ಸೇವಾ ಸಂಸ್ಥೆ ಕೊಟ್ಟೂರು.
ಸರ್ವ ಸದಸ್ಯರುಸಾವಿರಾರು ರೂಪಾಯಿ ಖರ್ಚು ಮಾಡಿ ದೊಡ್ಡ ದೊಡ್ಡ ಗಣಪತಿಗಳನ್ನು ಪ್ರತಿಷ್ಠಾಪನೆ ಮಾಡುತ್ತೇವೆ . ದೊಡ್ಡ ಗಣಪನ ವಿಸರ್ಜನೆ ಮಾಡುವ ಸಮಯದಲ್ಲಿ ಬಹಳಷ್ಟು ಜನರು ಹೇಗೆ ಬೇಕೆ ದೂಕುವುದು ತಳ್ಳುವುದು ಮಾಡುವುದರಿಂದ ಅದು ಗಣಪನಿಗೆ ಅಗೌರವ ತೋರಿಸಿದಂತೆ ದೊಡ್ಡ ಗಣಪ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಎರಡು ಹಗ್ಗದಿಂದ ಬಾಯಿಗೆ ನಿಧಾನವಾಗಿ ಇಳಿಸುವ ಕೆಲಸ ಮಾಡಬೇಕು ಗಣೇಶನ ವಿಸರ್ಜನೆ ಮಾಡುವ ಒಂದು ಪದ್ಧತಿ ಇರುತ್ತದೆ ಆದ್ದರಿಂದ ಗೌರವದಿಂದ ಭಕ್ತಿಯಿಂದ ಗಣೇಶನನ್ನು ವಿಸರ್ಜಿಸಬೇಕು

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles